ಸುದ್ದಿಮೂಲ ವಾರ್ತೆ ರಾಯಚೂರು, ಜ.26:
ರಾಯಚೂರು ನಗರದ ವಾರ್ಡ್ 15ರ ನೇತಾಜಿ ನಗರ ಪ್ರದೇಶದಲ್ಲಿ ಶಾಲೆ, ದೇವಸ್ಥಾಾನ ಜನವಸತಿ ಪ್ರದೇಶದಲ್ಲಿ ರಾಯಲ್ ಕೇಕ್ಸ್ ಆ್ಯಂಡ್ ಬೇಕ್ಸ್ ಉತ್ಪಾಾದನಾ ಘಟಕದಿಂದ ಆರೋಗ್ಯ ಸಮಸ್ಯೆೆಗಳಾಗುತ್ತಿಿದ್ದು ತಕ್ಷಣ ಸ್ಥಳಾಂತರಿಸಬೇಕು ಎಂದು ಬಡಾವಣೆ ನಿವಾಸಿಗಳು ಒತ್ತಾಾಯಿಸಿದರು.
ಇಂದು ಜಿಲ್ಲಾಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ನಿವಾಸಿಗಳು ಬಡಾವಣೆಯಲ್ಲಿ ಬೇಕರಿ ಉತ್ಪಾಾದನಾ ಘಟಕವನ್ನು ಸ್ಥಾಾಪಿಸಿದ್ದರಿಂದ ಶಾಲೆ, ಮಸೀದಿ, ದೇವಸ್ಥಾಾನ ಹಾಗೂ ಜನವಸತಿಗೆ ಸಮಸ್ಯೆೆಯಾಗುತ್ತಿಿದೆ. ಉಸಿರುಗಟ್ಟಿಿದ ವಾತಾವರಣ, ಕೆಮ್ಮು ಧಮ್ಮು ಬರುತ್ತಿಿವೆ. ಈ ಬಗ್ಗೆೆ ದೂರು ನೀಡಿದ್ದರಿಂದ ಮಾಲಿಕರು ನ್ಯಾಾಯಾಲಯದಲ್ಲಿ ತಡೆಯಾಜ್ನೆೆ ತಂದಿದ್ದು ತಕ್ಷಣ ಪಾಲಿಕೆಯವರು ಹಸ್ತಕ್ಷೇಪ ಮಾಡಿ ಷರತ್ತುಗಳ ಉಲ್ಲಂಘನೆ ಬಗ್ಗೆೆ ಗಮನಕ್ಕೆೆ ತರಬೇಕು ಅಲ್ಲಿಂದ ಬೇಕರಿ ಘಟಕ ಸ್ಥಳಾಂತರಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಾಸಿಂ ಆಹ್ಮದ್, ಅಜಾನ್, ಗೌತಮ್, ಮೊಹಸೀನ್, ಸಮೀನ್ ರಮೇಶ ಇತರರಿದ್ದರು.
ಜನವಸತಿ ಪ್ರದೇಶದಲ್ಲಿನ ಬೇಕರಿ ಸ್ಥಳಾಂತರಿಸಲು ಒತ್ತಾಯ

