ಸುದ್ದಿಮೂಲ ವಾರ್ತೆ ರಾಯಚೂರು, ಜ.26:
ತುಂಗಭದ್ರಾಾ ಎಡದಂಡೆ ಕಾಲುವೆಯ ಯರಮರಸ್ ವಲಯದ ಕಾರ್ಮಿಕರ ಬಾಕಿ ವೇತನ ಪಾವತಿಸದಿರುವುದು ಖಂಡಿಸಿ ಟಿಯುಸಿಐ ನೇತೃತ್ವದಲ್ಲಿ ಸಚಿವರಿಗೆ ಘೇರಾವ್ಗೆ ಪ್ರಯತ್ನಿಿಸಿದ್ದರಿಂದ ಬಂಧಿಸಿ ಬಿಡುಗಡೆ ಮಾಡಲಾಯಿತು.
ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆ ಪದಾಧಿಕಾರಿಗಳು, ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿ ಸಚಿವರ ಕಾರು ನಿಲ್ಲಿಸಲು ತಳ್ಳಾಾಡಿದಾಗ ಪೊಲೀಸ್ ಅಧಿಕಾರಿಗಳು ಕಾರ್ಮಿಕರ ಬಂಧಿಸಿ ಕರೆದೊಯ್ದು ಬಿಡುಗಡೆ ಮಾಡಿದರು.ಎಸ್ಪಿ ಕಚೇರಿ ಆವರಣದಲ್ಲೂ ಧರಣಿ ನಡೆಸಿದರು.
ಕಾರ್ಮಿಕರು ಹಲವು ವರ್ಷಗಳಿಂದ ಹಂಗಾಮಿ ಕಾರ್ಮಿಕರಾಗಿ ದುಡಿಯುತ್ತಿಿದ್ದು 748 ಗ್ಯಾಾಂಗ್ ಮ್ಯಾಾನ್ಗಳಿಗೆ ಎಂಟು ತಿಂಗಳ ಸಂಬಳ ನೀಡಿಲ್ಲಘಿ, ನೀರು ನಿಲ್ಲಿಸಿದ ಅವಧಿಗೆ ಕೆಲಸವೂ ನೀಡುತ್ತಿಿಲ್ಲ ಎಂದು ದೂರಿದರು.
ಬಾಕಿ ವೇತನ ಕೊಡಿಸಲು ಆಗ್ರಹಿಸಿದ ಹಿನ್ನೆೆಲೆಯಲ್ಲಿ ಹೋರಾಟಕ್ಕೆೆ ಮಣಿದು 5 ಕೋಟಿ 54 ಲಕ್ಷ ಸಂಬಳ ಬಿಡುಗಡೆ ಪತ್ರವನ್ನು ಅಧಿಕಾರಿಗಳು ನೀಡಿದ್ದಾಾರೆ ಎಂದು ಹೋರಾಟಗಾರರು ತಿಳಿಸಿದ್ದಾಾರೆ.
ಈ ಸಂದರ್ಭದಲ್ಲಿ ರಾಜ್ಯಾಾಧ್ಯಕ್ಷ ಎಂಡಿ ಅಮೀರ ಅಲಿ, ರಾಜ್ಯ ಉಪಾಧ್ಯಕ್ಷ ಎಂ ಗಂಗಾಧರ, ಪ್ರಧಾನ ಕಾರ್ಯದರ್ಶಿ ಜಿ ಅಡವಿರಾವ್, ರುಕ್ಕಪ್ಪ ಮಾನ್ವಿಿ, ಸಂಘದ ಹಿರಿಯ ಮುಖಂಡ ರಮೇಶ್ ಕೊಟ್ನೆೆಕಲ್, ಶರಣಪ್ಪ ಕೌತಾಳ, ಅಮರೇಗೌಡ ಸಿರಿವಾರ, ರಾಮಣ್ಣ ಪೋತ್ನಾಾಳ, ಸಿದ್ದನಗೌಡ ಗಿಲ್ಲಿಕಸ್ತೂರ ಮುಂತಾದವರು ಪಾಲ್ಗೊೊಂಡಿದ್ದರು.
ಟಿಎಲ್ಬಿಸಿ ಕಾರ್ಮಿಕರ ಪ್ರತಿಭಟನೆ, ಬಂಧನ – ಬಿಡುಗಡೆ

