ಸುದ್ದಿಮೂಲ ವಾರ್ತೆ ಮಾನ್ವಿ, ಜ.26:
ಗಣರಾಜ್ಯೋೋತ್ಸವ ಅಂಗವಾಗಿ ಸರ್ವಧರ್ಮ ಸೇವಾ ವೆರ್ಲ್ಫೇ ಟ್ರಸ್ಟ್ ವತಿಯಿಂದ ಸೋಮವಾರ ಮಾನ್ವಿಿ ಪಟ್ಟಣದ ಸರ್ವ ಶಕ್ತನ ಆಶೀರ್ವಾದ ಪ್ರಾಾರ್ಥನಾ ಮಂದಿರದಲ್ಲಿ ವಯೋ ವೃದ್ಧರಿಗೆ ಊರುಗೋಲು, ಬೆಡ್ ಶೀಟ್ ಹಾಗೂ ಬಡ ವಿದ್ಯಾಾರ್ಥಿಗಳಿಗೆ ಶಾಲಾ ಬ್ಯಾಾಗ್ ವಿತರಣೆ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪಾಸ್ಟರ್ ಬಸವರಾಜ. ಕೆ ಮೋಸಸ್ ಇವರು ಮಾತನಾಡಿ ಗಣರಾಜ್ಯೋೋತ್ಸವ ದಿನದಂದು ಹನುಮಂತ ಕೋಟೆ ಇವರು ಹಮ್ಮಿಿಕೊಂಡಿರುವ ಸಾಮಾಜಿಕ ಸೇವಾ ಶ್ಲಾಾಘನೀಯ. ಇವರ ಸೇವಾ ಕಾರ್ಯ ಇನ್ನಷ್ಟು ಹೆಚ್ವಾಾಗಲಿ ಮತ್ತು ದೇಶದಲ್ಲಿ ಪ್ರೀೀತಿ, ಶಾಂತಿ ಸೌಹಾರ್ದತೆ, ಐಕ್ಯತೆ ನೆಲೆಸಲೆಂದು ನಾವೆಲ್ಲರೂ ಪ್ರಾಾರ್ಥಿಸೋಣ ಎಂದು ಹೇಳಿದರು.
ಇಂಡಿಯಾ ವೆಲ್ಫೇರ್ ಪಾರ್ಟಿ ಮುಖಂಡ ಮೌಲನಾ ಶೇಖ್ ರೀದ್ ಉಮ್ರಿಿ ಗಣರಾಜ್ಯೋೋತ್ಸವದ ವಿಶೇಷತೆಯ ಕುರಿತು ಮಾತನಾಡಿ ಹನುಮಂತ ಕೋಟೆಯವರ ಸಮಾಜ ಸೇವಾ ಕಾರ್ಯಕ್ಕೆೆ ನಾವೆಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಿಕಾರ್ಡ್ ಬ್ಯಾಾಂಕಿನ ಮಾಜಿ ಅಧ್ಯಕ್ಷ ಸೈಯದ್ ಆಬೀದ್ ಖಾದ್ರಿಿ, ಲಿಂಗಸ್ಗೂರಿನ ಮಲ್ಲಿಕಾರ್ಜುನ ಸ್ವಾಾಮಿ ಹಿರೇಮಠ ಕರಡಕಲ್, ಗುತ್ತೇದಾರ ಸಿ.ಕೆ ಯೇಸುರಾಜ ಅಮರೇಶ್ವರ ಕ್ಯಾಾಂಪ್, ಬೆಳಗು ಸಂಸ್ಥೆೆಯ ಅಧ್ಯಕ್ಷ ಎ.ಶರಣಕುಮಾರ, ನೆರಳು ಅನಾಥಾಶ್ರಮದ ಮುಖ್ಯಸ್ಥ ಚನ್ನಬಸವಸ್ವಾಾಮಿ, ಬಿ.ಎಸ್.ಎಸ್ ಜಿಲ್ಲಾಧ್ಯಕ್ಷ ಶಾಹರಬಾಲು ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.
ಗಣರಾಜ್ಯೋತ್ಸವ ಅಂಗವಾಗಿ ಸರ್ವಧರ್ಮ ಟ್ರ್ಟ್ ನಿಂದ ವೃದ್ದರು, ವಿದ್ಯಾರ್ಥಿಗಳಿಗೆ ನೆರವು

