ಸುದ್ದಿಮೂಲ ವಾರ್ತೆ ಗಂಗಾವತಿ, ಜ.26:
ಸಿದ್ಧರಾಮಯ್ಯರು ತಮ್ಮ ಸಿಎಂ ಸ್ಥಾಾನ ಬಿಟ್ಟುಕೊಡಲು ಮಾನಸಿಕವಾಗಿ ಸಿದ್ಧರಾಗಿದ್ದಾಾರೆ. ಆದರೆ ಮುಂದಾಗುವ ಸಿಎಂ ಅವರ ಸರ್ಕಾರದ ಕ್ಯಾಾಬಿನೆಟ್ನಲ್ಲಿ ತಮ್ಮ ಅತ್ಯಾಾಪ್ತರಿಗೆ ಪ್ರಮುಖ ಖಾತೆಗಳನ್ನು ಕೊಡಿಸಿ ತಾವು ಸೂಪರ್ ಸಿಎಂ ಆಗಲು ಹೊರಟಿದ್ದಾಾರೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೆ ಸಿಎಂ ಸ್ಥಾಾನವನ್ನು ಸಿದ್ದರಾಮಯ್ಯ ಬಿಟ್ಟುಕೊಡಬೇಕಿತ್ತು. ಆದರೆ ರಾಜ್ಯದಲ್ಲಿ ದೇವರಾಜ ಅರಸು ಅವರ ಸಾಧನೆ ಮುರಿಯಬೇಕು ಎಂಬ ಕಾರಣಕ್ಕೆೆ ಮುಂದೂಡಿದ್ದರು. ಈಗ ಸಂಕ್ರಾಾಂತಿ ಆಯ್ತು, ಬಜೆಟ್ ಬಂತು. ಆದರೆ ಯಾವ ಕಾರಣಕ್ಕೂ ಡಿ.ಕೆ. ಶಿವಕುಮಾರ ಸುಮ್ಮನೆ ಕೂರುವ ಮನುಷ್ಯ ಅಲ್ಲ. ಒತ್ತಾಾಯ ಪೂರ್ವಕವಾಗಿಯಾದರೂ ಸಿಎಂ ಕುರರ್ಚಿ ಕಿತ್ತು ಕೊಳ್ತಾಾರೆ ಕಾದು ನೋಡಿ ಎಂದರು.
ಸಿದ್ದರಾಮಯ್ಯ ಈಗಾಗಲೆ ಸಿಎಂ ಸ್ಥಾಾನ ಬಿಟ್ಟುಕೊಡಲು ಮಾನಸಿಕವಾಗಿ ಸಿದ್ಧವಾಗಿದ್ದಾಾರೆ. ಆದರೆ, ಅಧಿಕಾರದಿಂದ ಇಳಿದ ಮೇಲೂ ಸೂಪರ್ ಸಿಎಂ ಆಗಿರಬೇಕು, ತಮ್ಮ ಅಣತಿಯಂತೆ ಸರ್ಕಾರ ನಡೆಯಬೇಕು ಎಂಬ ಇಂಗಿತ ಸಿದ್ದರಾಮಯ್ಯ ಹೊಂದಿದ್ದಾಾರೆ. ಹೀಗಾಗಿ ಸಚಿವ ಸಂಪುಟದಲ್ಲಿ ತಮ್ಮ ಬಣದ ಎಷ್ಟು ಶಾಸಕರನ್ನು ಸಚಿವರನ್ನಾಾಗಿ ಮಾಡಬಹುದು ಎಂಬ ಲೆಕ್ಕಾಾಚಾರದಲ್ಲಿ ಸಿದ್ದರಾಮಯ್ಯ ತೊಡಗಿದ್ದಾಾರೆ. ಬಜೆಟ್ ಮುನ್ನ ಅಥವಾ ಬಳಿಕವಾದರೂ ಡಿಕೆ ಖಚಿತವಾಗಿ ಸಿಎಂ ಕುರ್ಚಿ ಎಳೆದುಕೊಳ್ಳುತ್ತಾಾರೆ ಎಂದರು.
ಆನೆಗುಂದಿ ಉತ್ಸವಕ್ಕೆೆ 8ಕೋಟಿ : ಜಿಲ್ಲೆೆಯ ಐತಿಹಾಸಿಕ ಆನೆಗೊಂದಿ ಉತ್ಸವ ಆಚರಣೆಗೆ ಎಂಟು ಕೋಟಿ ರೂಪಾಯಿ ಮೊತ್ತದ ಅನುದಾನಕ್ಕೆೆ ಜಿಲ್ಲಾಾಡಳಿತದಿಂದ ಈಗಾಗಲೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಶಾಸಕ ಹೇಳಿದರು.
ಕಳೆದ ಎರಡು ತಿಂಗಳ ಹಿಂದೆ ನಗರದಲ್ಲಿ ಅಭಿವೃದ್ಧಿಿ ಕಾಮಗಾರಿಗೆ ಚಾಲನೆ ನೀಡಲು ಇಲ್ಲಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸ್ವತಃ ಜಿಲ್ಲಾಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಸಾರ್ವಜನಿಕರು ಹಾಗೂ ಮಾಧ್ಯಮದ ಮುಂದೆ ಆನೆಗೊಂದಿ ಉತ್ಸವ ಆಚರಿಸುವ ಬಗ್ಗೆೆ ಭರವಸೆ ನೀಡಿದ್ದರು.
ಆನೆಗೊಂದಿ ಮತ್ತು ಕನಕಗಿರಿ ಉತ್ಸವ ಆಚರಣೆಗೆ ಪ್ರತ್ಯೇಕ ತಲಾ ಎಂಟು ಕೋಟಿ ರೂಪಾಯಿ ಮೊತ್ತದ ಅನುದಾನ ನೀಡುವ ಭರವಸೆ ನೀಡಿದ್ದರು. ಹಂಪಿ ಉತ್ಸವದ ಜೊತೆಗೆ ಆನೆಗೊಂದಿ ಉತ್ಸವ ಆಚರಿಸಿಬೇಕಿತ್ತು. ಆದರೆ ಅನುದಾನ ಮತ್ತು ಆಡಳಿತಾತ್ಮಕ ಅನುಮೋದನೆಯ ಕಾರಣಕ್ಕೆೆ ಉತ್ಸವ ಮುಂದಕ್ಕೆೆ ಹೋಗುತ್ತಿಿದೆ ಎಂದರು.
ಗಂಗಾವತಿ ಬಿಡಲ್ಲ : ಗಂಗಾವತಿ ವಿಧಾನಸಭಾ ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದೆ. ಮುಂದೆ ಯಾವ ಕಾರಣಕ್ಕೂ ಈ ಕ್ಷೇತ್ರ ಬಿಟ್ಟು ಹೋಗುವುದಿಲ್ಲವೆಂದು ತಮ್ಮ ಅಚಲ ನಿರ್ಧಾರ ವ್ಯಕ್ತಪಡಿಸಿ ಮುಂದಿನ 2028ಕ್ಕೆೆ ಪುಣ ಇದೇ ಕ್ಷೇತ್ರದಿಂದಲೇ ಸ್ಪರ್ಧಿಸುವೆ. ನನ್ನ ಜೀವನದ ಕೊನೆ ಉಸಿರು ಇರೋವರೆಗೂ ಈ ಕ್ಷೇತ್ರ ಮತ್ತು ಜನರನ್ನು ಕೈಬಿಡುವ ಪ್ರಶ್ನೆೆಯೇ ಇಲ್ಲ ಎಂದು ಶಾಸಕ ಜಿ. ಜನಾರ್ದನರೆಡ್ಡಿಿ ಸ್ಪಷ್ಟಪಡಿಸಿದರು.
ಮಾಜಿ ಸಚಿವ ಇಕ್ಬಾಾಲ್ ಅನ್ಸಾಾರಿ ಎರಡೂವರೆ ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಇರಕಲ್ಗಡಾ ಹೋಬಳಿಯಲ್ಲಿ ಕೈ ಪಕ್ಷದ ಕಾರ್ಯಕರ್ತರ ಸಮಾವೇಶ ಮಾಡಿದ್ದಾಾರೆ. ಈ ಕ್ಷೇತ್ರದ ಜನ ಅವರನ್ನು ಮರೆತಿದ್ದಾಾರೆ. 2028ರ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿ ರಾಜ್ಯದ ಅಧಿಕಾರ ಚುಕ್ಕಾಾಣಿ ಹಿಡಿಯುವುದು ನಿಶ್ಚಿಿತ. ಇವರೆಲ್ಲರೂ ಶಾಶ್ವತವಾಗಿ ಮನೆಯಲ್ಲಿ ವಿಶ್ರಾಾಂತಿ ಪಡೆಯುವುದು ಖಚಿತ ಎಂದು ಭವಿಷ್ಯ ನುಡಿದರು.
ನನ್ನ ಮನೆ ಬಳ್ಳಾಾರಿಯಲ್ಲಿರುವ ಕಾರಣಕ್ಕೆೆ ಅಲ್ಲಿನ ರಾಜಕಾರಣಕ್ಕೆೆ ಸ್ವಲ್ಪ ಆದ್ಯತೆ ನೀಡಲಾಗುತ್ತಿಿದೆ. ಇದು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇಲ್ಲ. ಈ ಹಿಂದೆ ಬಳ್ಳಾಾರಿಯಲ್ಲಿ ಮಾಡಿದ್ದ ಅಭಿವೃದ್ಧಿಿ ಮಾದರಿ ಗಂಗಾವತಿಗೆ ತರಲು ಯತ್ನಿಿಸುತ್ತಿಿದ್ದೇನೆ. ಅಲ್ಲದೇ ಕಳೆದ 20 ವರ್ಷದಲ್ಲಿ ಈ ಕ್ಷೇತ್ರ ಪ್ರತಿನಿಧಿಸಿದ ಎಲ್ಲಾಾ ಪಕ್ಷದ ರಾಜಕಾರಣಿಗಳು ಏನು ಮಾಡಿದ್ದಾಾರೆ ಎಂಬುವುದನ್ನು ಜನ ಒಮ್ಮೆೆ ಅವಲೋಕನ ಮಾಡಬೇಕು. ಜಿಲ್ಲಾಾ ಹಂತದಲ್ಲಿರಬೇಕಿರುವ ಸ್ಯಾಾಟ್ಲೈಟ್ ಬಸ್ ನಿಲ್ದಾಾಣ ಗಂಗಾವತಿಗೆ ತಂದಿರುವೆ. ಈ ಹಿಂದೆ ಇದ್ದವರು ಈ ಕೆಲಸ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಿಸಿದರು.
ಗಂಗಾವತಿಗೆ ಕೇಂದ್ರ ಸರ್ಕಾರದ ಅಮೃತ ನಗರ ಯೋಜನೆಯಡಿ 25 ಕೋಟಿ ಮೊತ್ತದಲ್ಲಿ ಅಧುನಿಕ ರೈಲ್ವೆೆ ನಿಲ್ದಾಾಣ, ಅಂಜನಾದ್ರಿಿ-ಅಯೋಧ್ಯೆೆ ಎಕ್ಸ್ಪ್ರೆೆಸ್ ಮಾಡುವ ಬಗ್ಗೆೆ ಈ ಹಿಂದೆ ಪ್ರಸ್ತಾಾಪಿಸಿದ್ದೆೆ. ಹೊಸ ರೈಲು ನಿಲ್ದಾಾಣದ ಉದ್ಘಾಾಟನೆಯಂದೇ ಈ ಎಕ್ಸ್ಪ್ರೆೆಸ್ ಮಾರ್ಗ ಲೋಕಾರ್ಪಣೆಯಾಗಲಿದೆ ಎಂದರು.
ಸೂಪರ್ ಸಿಎಂ ಆಗಲು ಸಿದ್ದರಾಮಯ್ಯ ಪ್ಲಾನ್ ಗಾಲಿ ಜನಾರ್ದನರೆಡ್ಡಿ

