ಸುದ್ದಿಮೂಲ ವಾರ್ತೆ ರಾಯಚೂರು, ಜ.26:
ೆ.5 ರಿಂದ ಮೂರು ದಿನಗಳ ಕಾಲ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ನಿತೀಶ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಜಿಲ್ಲಾಾ ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ ಮಂದಿರಗಳು, ಮಸೀದಿಗಳು ಹಾಗೂ ಚರ್ಚ್ಗಳಲ್ಲಿ ಪ್ರಾಾರ್ಥನಾ ಸಮಯದಲ್ಲಿ ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸುವ ಜನತೆಗೆ ಉತ್ಸವದ ಬಗ್ಗೆೆ ಮಾಹಿತಿ ಕೊಡುವ ಕಾರ್ಯವಾಗಬೇಕು. ಜಿಲ್ಲೆಯ ಪಟ್ಟಣ ಮತ್ತು ನಗರ ಗ್ರಾಾಮೀಣ ಪ್ರದೇಶಗಳಲ್ಲಿನ ಕಸ ಎತ್ತುವ ವಾಹನಗಳಲ್ಲಿ ಕಡ್ಡಾಾಯವಾಗಿ ಪ್ರಚಾರದ ಜಾಹೀರಾತು ಮೂಲಕ ಉತ್ಸವದ ಪ್ರಚಾರ ಕಾರ್ಯ ನಡೆಸಬೇಕು. ಆಯಾ ಗ್ರಾಾಮಗಳಲ್ಲಿನ ಶಾಲೆಗಳ ಮುಖ್ಯ ಗುರುಗಳೊಂದಿಗೆ ಚರ್ಚಿಸಿ ಆಶಾ ಅಂಗನವಾಡಿಯವರು ಜಾಥಾ ನಡೆಸಿ ೆ.5,6 ಮತ್ತು 7ರಂದು ರಾಯಚೂರು ಉತ್ಸವ ನಡೆಯಲಿದೆ. ಎಲ್ಲರೂ ಭಾಗಿಯಾಗಬೇಕು ಎನ್ನುವ ಸಂದೇಶ ನೀಡಲು ಕ್ರಮವಹಿಸಬೇಕು ಸೂಚನೆ ನೀಡಿದರು.
ಆಟೋ ಪ್ರಚಾರ ಆರಂಭಿಸಿ ತುರ್ತು ಕ್ರಮ ವಹಿಸಲು ನಿರ್ದೇಶನ ನೀಡಿದ ಅವರು, ಬಸ್ಗಳಿಗೆ, ರೈಲ್ವೆೆ ನಿಲ್ದಾಾಣದಲ್ಲಿ ಪೋಸ್ಟರ್ ಅಂಟಿಸಿ, ಬ್ಯಾಾನರ್ ಅಳವಡಿಸಿ ಪ್ರಚಾರ ಮಾಡಲು ಸಲಹೆ ಮಾಡಿದ ಅವರು ವಿದ್ಯಾಾರ್ಥಿಗಳಿಗೆ ಈ ಮಾಹಿತಿ ತಲುಪಿಸಿ ಅವರಿಂದ ಮನೆಮನೆಗೂ ಮುಟ್ಟಿಿಸಲು ಸಲಹೆ ಮಾಡಿದರು.
ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರತಿ ದಿನ ಉತ್ಸವದ ಸಮಗ್ರ ಮಾಹಿತಿ ಹಂಚಿಕೊಳ್ಳಲು ಸಲಹೆ ಮಾಡಿದರು.
ಸಭೆಯಲ್ಲಿ ಸಿಇಓ ಈಶ್ವರ ಕುಮಾರ ಕಾಂದೂ, ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಎಡಿಸಿ ಶಿವಾನಂದ ಭಜಂತ್ರಿಿ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಆರ್ಡಿಎ ಆಯುಕ್ತ ಈರಣ್ಣ ಬಿರಾದಾರ, ಉಪ ಆಯುಕ್ತೆೆ ಸಂತೋಷ ರಾಣಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ಇದ್ದರು.
ಜಿಲ್ಲಾ ಉತ್ಸವದ ಬಗ್ಗೆ ವ್ಯಾಪಕ ಪ್ರಚಾರ ಆರಂಭಿಸಿ, ಚುರುಕುಗೊಳಿಸಿ – ಡಿಸಿ

