ಸುದ್ದಿಮೂಲ ವಾರ್ತೆ ಕೊಪ್ಪಳ, ಜ.27:
ತುಂಗಭದ್ರಾಾ ಜಲಾಶಯ ರಾಜ್ಯದ ನಾಲ್ಕು ಜಿಲ್ಲೆೆಯ ಜೀವನಾಡಿ. ಕಳೆದ ಒಂದು ವರ್ಷದಿಂದ ಜಲಾಶಯ ಭಾರೀ ಸುದ್ದಿಯಲ್ಲಿದೆ. ಅದರಲ್ಲೂ ಕ್ರಸ್ಟ್ ಗೇಟ್ ವಿಚಾರಕ್ಕೆೆ ಜಲಾಶಯ ಚರ್ಚೆಯಾಗುತ್ತಿಿದೆ. ಕಳೆದ ತಿಂಗಳಿಂದ ತುಂಗಭದ್ರಾಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಶುರುವಾಗಿದೆ. ಈಗಾಗಲೇ ಜಲಾಶಯದ ಒಂದು ಗೇಟ್ ಸಂಪೂರ್ಣ ಅಳವಡಿಕೆ ಆಗಿದೆ. ಆದ್ರೆೆ ಇದೀಗ ಜಲಾಶಯ ಮತ್ತೆೆ ಸುದ್ದಿಯಲ್ಲಿದೆ. ಇದಕ್ಕೆೆಲ್ಲ ಕಾರಣ ಕ್ರಸ್ಟ್ ಗೇಟ್ ಆಮೆಗತಿ ಕಾಮಗಾರಿ, ಜೊತೆಗೆ ಸರ್ಕಾರ ಹಣ ನೀಡದೆ ಇರೋದು, ಕ್ರಸ್ಟ್ ಗೇಟ್ ಕಾಮಗಾರಿಗೆ ರಾಜ್ಯ ಸರ್ಕಾರ ಹತ್ತು ಕೋಟಿ ನೀಡಿ ವಾಪಸ್ ಪಡೆದಿರೋ ವಿಚಾರ ಇದೀಗ ತೀವ್ರ ಚರ್ಚೆ ಹುಟ್ಟುಹಾಕಿದೆ. ನಾವು ಯಾವುದೇ ಹಣ ವಾಪಸ್ ಪಡೆದಿಲ್ಲ ಅನ್ನೋೋದು ಜಿಲ್ಲಾಾ ಉಸ್ತುವಾರಿ ಸಚಿವರ ಮಾತು.
ತುಂಗಭದ್ರಾಾ ಜಲಾಶಯ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರೋ ಈ ಜಲಾಶಯ ಇದೀಗ ಚರ್ಚೆಗೆ ಬಂದಿದೆ. ಕಳೆದ ತಿಂಗಳಿಂದ ಜಲಾಶಯದ ಕ್ರಸ್ಟ್ ಗೇಟ್ ಕಾಮಗಾರಿ ಆರಂಭವಾಗಿದೆ. ಕಳೆದ ವರ್ಷ ಜಲಾಶಯದ ಕ್ರಸ್ಟ್ ಗೇಟ್ 19 ಕೊಚ್ಚಿಿಕೊಂಡು ಹೋಗಿತ್ತು, ಅಲ್ಲದೆ ಜಲಾಶಯದ ಆರು ಗೇಟ್ ಗಳು ಸವಕಳಿ ಆಗಿದ್ವು,ಇದು ನಾಲ್ಕು ಜಿಲ್ಲೆೆಯ ರೈತರನ್ನ ಆತಂಕಕ್ಕೆೆ ದೂಡಿತ್ತು. ಹೀಗಾಗಿ ಸರ್ಕಾರು 54 ಕೋಟಿ ವೆಚ್ಚದಲ್ಲಿ 33 ಕ್ರಸ್ಟ್ ಗೇಟ್ ಗಳ ಬದಲಾವಣೆಗೆ ನಿರ್ಧಾರ ಮಾಡಿತ್ತು.
ಡಿಸೆಂಬರ್ ನಲ್ಲಿ ಗೇಟ್ ತೆರವು ಕಾಮಗಾರಿ ಆರಂಭವಾಗಿದ್ದು,ಈಗಾಗಲೇ ಜಲಾಶಯದ ಕ್ರಸ್ ಗೇಟ್ ನಂಬರ್ 18 ರ ಅಳವಡಿಕೆ ಯಶಶ್ವಿಿಯಾಗಿದೆ. ಕ್ರಸ್ಟ್ ಗೇಟ್ ನಂಬರ್ 18 ರ ಹೊಸ ಗೇಟ್ ಅಳವಡಿಕೆ ಯಶಸ್ವಿಿಯಾಗಿದೆ, ಸರ್ಕಾರ ಗುಜರಾತ್ ಮೂಲದ ಕಂಪನಿಗೆ ಗೇಟ್ ಅಳವಡಿಕೆ ಕಾರ್ಯ ಗುತ್ತಿಿಗೆ ನೀಡಿದೆ. ಈಗಾಗಲೆ ಸುಮಾರು 29 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿಿದಾರೆ. ಆದ್ರೆೆ ಇದೀಗ ಸರ್ಕಾರದ ನಿರ್ದಾರ ಹೊಸ ವಿವಾದ ಹುಟ್ಟು ಹಾಕಿದೆ. ಹೌದು ಸರ್ಕಾರ ಗೇಟ್ ಕಾಮಗಾರಿಗೆ ಹತ್ತು ಕೋಟಿ ಹಣ ನೀಡಿತ್ತು. ಆದ್ರೆೆ ಅದನ್ನ ವಾಪಸ್ ತೆಗೆದುಕೊಂಡಿದೆ ಎನ್ನಲಾಗಿದೆ.
ಗುತ್ತಿಿಗೆದಾರರು ಕನ್ಹಯ್ಯ ನಾಯ್ಡು ಅವ್ರ ಮುಂದೆ ಈ ವಿಚಾರ ಹೇಳಿದ್ದಾಾರಂತೆ. ಆದ್ರೆೆ ತುಂಗಭದ್ರಾಾ ಜಲಾಶಯದ ಅಧಿಕಾರಿಗಳು ಎಲ್ಲವೂ ಟಿಬಿ ಬೋರ್ಡ್ ಅಧಿಕಾರಿಗಳಿಗೆ ಗೊತ್ತು ಅಂತೀದಾರೆ. ಆಂಧ್ರ – ತೆಲಂಗಾಣ ಈಗಾಗಲೆ 25 ಕೋಟಿ ಹಣ ನೀಡಿದ್ದು,ಆದ್ರೆೆ ರಾಜ್ಯ ಸರ್ಕಾರ ಯಾಕೆ ವಾಪಸ್ ಪಡೆದಿದೆ ಅನ್ನೋೋದು ಹಲವು ಪ್ರಶ್ನೆೆ ಹುಟ್ಟು ಹಾಕಿದೆ. ಹೀಗಾದ್ರೆೆ ಕಾಮಗಾರಿ ಕುಂಠಿತವಾಗತ್ತೆೆ ಅನ್ನೋೋದು ಗುತ್ತಿಿಗೆದಾರರ ಆರೋಪವಾಗಿದೆ. ಇದೀಗ ಬಿಜೆಪಿ ಇದನ್ನೆೆ ಅಸವನ್ನಾಾಗಿ ಮಾಡಿಕೊಂಡಿದೆ. ಅದಕ್ಕೆೆ ಕಾರಣವೂ ಇದ್ದು,ಇದುವರೆಗೆ ಒಂದು ಗೇಟ್ ಮಾತ್ರ ಅಳವಡಿಕೆ ಮಾಡಿದ್ದು,ತುಸು ಆತಂಕ ತಂದಿದೆ. ಬರೋ ಮಳೆಗಾಲದೊಳಗೆ ಎಲ್ಲ ಕೆಲಸ ಮುಗಿಯತ್ತಾಾ ಇಲ್ವಾಾ ಅನ್ನೋೋ ಅನುಮಾನ ಶುರುವಾಗಿದೆ. ಹೀಗಾಗಿ ಬಿಜೆಪಿ ಹೋರಾಟಕ್ಕೆೆ ಸಿದ್ದವಾಗಿದೆ. ಮಾರ್ಚ್ -ಎಪ್ರೀೀಲ್ ನಲ್ಲಿ 20 ಗೇಟ್ ಅಳವಡಿಕೆ ಮಾಡದೆ ಹೋದ್ರೆೆ ನಾವು ಹೋರಾಟ ಮಾಡತೀವಿ ಎಂದು ಎಚ್ಚರಿಕೆ ನೀಡಿದ್ದಾಾರೆ.
ಡಿಸೆಂಬರ್ ಕೊನೆಯ ವಾರದಲ್ಲಿ ಗೇಟ್ ತೆರವು ಕಾರ್ಯ ಆರಂಭವಾಗಿದೆ, ಮೊದಲು ಏಳು ದಿನದಲ್ಲಿ ಒಂದು ಗೇಟ್ ಅಳವಡಿಕೆ ಮಾಡೋದಾಗಿ ಗುತ್ತಿಿಗೆದಾರರು ಮಾತು ಕೊಟ್ಟಿಿದ್ರು,ಇದೀಗ ಜನೇವರಿ ಮುಗಿಯತ್ತಾಾ ಬಂದ್ರೂ ಒಂದೇ ಒಂದು ಗೇಟ್ ಅಳವಡಿಕೆ ಮಾಡಲಾಗಿದೆ. ಗೇಟ್ ನಂಬರ್ 18 ಮಾತ್ರ ಅಳವಡಿಕೆ ಮಾಡಲಾಗಿದೆ, ಇದು ನಾಲ್ಕು ಜಿಲ್ಲೆೆಯ ರೈತರನ್ನ ಮತ್ತೆೆ ಆತಂಕಕ್ಕೆೆ ದೂಡಿದೆ. ಯಾಕಂದ್ರೆೆ ಈಗಾಗಲೇ ಎರಡನೆ ಬೆಳೆಗೆ ಸರ್ಕಾರ ನೀರು ಕೊಟ್ಟಿಿಲ್ಲ,ಗೇಟ್ ಕಾಮಗಾರಿ ಮುಗಿಯದೆ ಹೋದ್ರೆೆ ಮತ್ತೆೆ ಬೇಸಿಗೆ ಬೆಳೆಗೆ ನೀರು ಸಿಗೋದು ಅನುಮಾನವಾಗಿದೆ.
ಇದೆಲ್ಲದರ ಮಧ್ಯೆೆ ಕೊಟ್ಟ ಹಣ ವಾಪಸ್ ಪಡೆದಿರೋದು ಮತ್ತೊೊಂದಿಷ್ಟು ಆತಂಕ ತಂದಿಟ್ಟಿಿದೆ. ಆದ್ರೆೆ ಕೊಪ್ಪಳ ಜಿಲ್ಲಾಾ ಉಸ್ತುವಾರಿ ಸಚಿವ ಮಾತ್ರ ಈ ಆರೋಪವನ್ನ ಸಾರಾಟಗಟಾಗಿ ತಳ್ಳಿಿ ಹಾಕಿದ್ದಾಾರೆ. ನಾವು ಹಣ ವಾಪಸ್ ಪಡೆದಿಲ್ಲ ಎಂದಿದ್ದಾಾರೆ.ಅಲ್ಲದೆ ಇದೇ ಮೊದಲ ಬಾರಿಗೆ ನಾವು ಹಣ ರಿಲೀಸ್ ಮಾಡಿದ್ದು ಎಂದಿದ್ದಾಾರೆ,ಇಷ್ಟು ದಿನ ಟಿಬಿ ಬೋರ್ಡ್ ನಲ್ಲಿ ಬುಕ್ ಅಡ್ಜಸ್ಟಮೆಂಟ್ ನಿಯಮವಿತ್ತು,ಆದ್ರೆೆ ಮೊದಲ ಬಾರಿ ನಾವು ಹತ್ತು ಕೋಟಿ ಹಣ ನೀಡಿದ್ದೇವೆಂದು ದಾಖಲೆ ಬಿಡುಗಡೆ ಮಾಡಿದ್ದಾಾರೆ.
ಈಗಾಗಲೇ ೆಬ್ರುವರಿ ಅಂತ್ಯಕ್ಕೆೆ ಒಟ್ಟು ಆರು ಗೇಟ್ ಗಳನ್ನ ಫಿಕ್ಸ್ ಮಾಡಲಾಗುತ್ತೆೆ ಎಂದಿದ್ದಾಾರೆ. ಕ್ರಸ್ಟ್ ಗೇಟ್ ನಂಬರ್ 18 ಸೇರಿ,27,20,04,11 ಹಾಗೂ 19 ರೆಡಿ ಇವೆ ಎಂದಿದ್ದಾಾರೆ. ಬರೋ ಮಂಗಳವಾರ ಮತ್ತೆೆ ಮೂರು ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡತೀವಿ ಎಂದಿದ್ದಾಾರೆ, ಆದ್ರೆೆ ಖಜಾನೆಯಲ್ಲಿ ಕೆಲ ಸಣ್ಣ ಪುಟ್ಟ ಸಮಸ್ಯೆೆ ಆಗಿದ್ರೂ.ನಾವು ಹಣ ಕೊಡಲೇಬೇಕು ಅಂದಿದ್ದಾಾರೆ.
ಒಟ್ಟಾಾರೆ ಜಲಾಶಯದ ಕ್ರಸ್ಟ್ ಗೇಟ್ ವಿಚಾರ ಇದೀಗ ಮತ್ತೆೆ ಮುನ್ನೆೆಲೆಗೆ ಬಂದಿದೆ, ತಂಗಡಗಿ ದಾಖಲೆ ರಿಲೀಸ್ ಮಾಡಿದ್ರು, ಖಜಾನೆಯಲ್ಲಿ ಸಣ್ಣ ಪುಟ್ಟ ತಪ್ಪಾಾಗಿರಬಹುದು ಅಂದಿರೋದು, ಸರ್ಕಾರ ಹಣ ಕೊಟ್ಟು ವಾಪಸ್ ಪಡೆದಿದೆಯೇ ಅನ್ನೋೋ ಅನುಮಾನ ಹುಟ್ಟು ಹಾಕಿದೆ.
ತುಂಗಭದ್ರಾ ಗೇಟ್ ಅಳವಡಿಕೆ, ಅನುದಾನದ ರಾಜಕೀಯ ಮೇಲಾಟ

