ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ವಾಜಿಪೇಯಿ ನಗರ ನಿವೇಶನ ಯೋಜನೆಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮತ್ತು ದೇವರಾಜು ಅರಸು ವಿಶೇಷ ವರ್ಗದವರಿಗೆ ನಿವೇಶನ ಮಂಜೂರಿ ವಿಳಂಬ ಖಂಡಿಸಿ ಸ್ಲಂ ನಿವಾಸಿಗಳ ಕ್ರಿಿಯಾ ವೇದಿಕೆ ಪ್ರತಿಭಟನೆ ನಡೆಸಿತು.
ಇಂದು ನಗರದ ಜಿಲ್ಲಾಾ ಮಹಾತ್ಮಗಾಂಧಿ ಕ್ರೀಡಾಂಗಣದ ಹೊರ ಭಾಗದಲ್ಲಿ ಧರಣಿ ನಡೆಸಿದ ಸಂಘದ ಪದಾಧಿಕಾರಿ, ಲಾನುಭವಿಗಳು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ವಾಜಿಪೇಯಿ ನಗರ ನಿವೇಶನ ಯೋಜನೆಯಲ್ಲಿ ಸರ್ವೆ ನಂ 581, 726/727, 929/2 ರಲ್ಲಿ ಭೂ ಮಂಜೂರಿಯಾಗಿ ನಿವೇಶನ ಹಕ್ಕು ಪತ್ರಗಳನ್ನು ಕೂಡ ಹಂಚಿಕೆ ಮಾಡಿ 10 ವರ್ಷಗಳಾದರೂ ಇದುವರೆಗೂ ನಿವೇಶನ ಹಂಚಿಕೆ ಮಾಡದೆ ಜಿಲ್ಲಾಾಡಳಿತ ಮತ್ತು ಮಹಾನಗರ ಪಾಲಿಕೆಯವರು ನಿರ್ಲಕ್ಷ್ಯ ವಹಿಸಿದ್ದಾಾರೆ. ಸಚಿವರು ಸಭೆ, ಕಾರ್ಯಕ್ರಮ, ಧ್ವಜಾರೋಹಣಕ್ಕೆೆ ಬಂದು ಹೋಗುತ್ತಿಿದ್ದೀರಷ್ಟೆೆ ಸಮಸ್ಯೆೆ ಪರಿಹರಿಸುತ್ತಿಿಲ್ಲಘಿ ಎಂದು ದೂರಿದರು.
ಮಹಾನಗರ ಪಾಲಿಕೆ, ನಗರಸಭೆ ಮತ್ತು ಪಟ್ಟಣ ಪಂಚಾಯತಿಗಳ ವ್ಯಾಾಪ್ತಿಿಯಲ್ಲಿ ಸುಮಾರು 709 ಕ್ಕೂ ಹೆಚ್ಚು ಸ್ಲಂಗಳು ಖಾಸಗಿ ಒಡೆತನದಲ್ಲಿದ್ದು ಅಂದಾಜು 2 ಲಕ್ಷ ಕುಟುಂಬಗಳು ಕಳೆದ 50 ವರ್ಷಗಳಿಂದ ತಮ್ಮ ಸುಸ್ಥಿಿರವಾದ ಜೀವನ ಕಟ್ಟಿಿಕೊಳ್ಳುತ್ತಿಿದ್ದು ಖಾಸಗಿ ಭೂಮಾಲಿಕತ್ವದ ಸ್ಲಂಗಳನ್ನು ಕೊಳಚೆ ಪ್ರದೇಶ ಘೋಷಣೆ ಮಾಡುವಾಗ ಅನುಮೋದನೆ ಪಡೆದ ನಂತರ ಘೋಷಣೆಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಸುತ್ತೋೋಲೆಯನ್ನು ಹೊರಡಿಸಿದ್ದರು ಮಾಡಿಲ್ಲಘಿ. ಕರ್ನಾಟಕ ಕೊಳಗೇರಿ ಅಭಿವೃದ್ಧಿಿ ಮಂಡಳಿಯವರು ನಗರದ ಸರಕಾರಿ ಜಾಗದಲ್ಲಿ ಬರುವ 15 ಅಘೋಷಿತ ಸ್ಲಂಗಳ ಭೂ ಸರ್ವೆ ಮಾಡಿಸದೇ ನಿರ್ಲಕ್ಷ ಮಾಡಿದ್ದಾಾರೆ. ಶೀಘ್ರ ಸ್ಲಂ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಜನಾರ್ಧನ ಹಳ್ಳಿಿಬೆಂಚಿ, ಅನಿಲಕುಮಾರ್, ಎಸ್.ರಾಜು, ಚಂದ್ರುಭಂಡಾರಿ ಸೇರಿ ಇತರರಿದ್ದರು.
ನಿವೇಶನ ರಹಿತರಿಗೆ ಜಾಗ ಹಂಚಿಕೆಗೆ ಆಗ್ರಹ

