ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ವನ್ನು ೆ.05, ೆ.06 ಮತ್ತು ೆ.7ರಂದು ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಅದ ಆಚರಿಸಲು ತೀರ್ಮಾನಿಸಲಾಗಿದೆ. ಈ ಉತ್ಸವಕ್ಕೆೆ 5 ಲಕ್ಷ ರೂ. ದಿಂದ 10 ಲಕ್ಷ ರೂ.ಗಳ ಒಳಗೆ ಪ್ರಾಾಯೋಜಕತ್ವ ನೀಡುವವರಿಗೆ ರಾಯಚೂರು ಜಿಲ್ಲಾ ಉತ್ಸವದ ಬ್ಯಾಾನರನಲ್ಲಿ, ಎಲ್.ಇ.ಡಿ. ಸ್ಕ್ರೀಥನಲ್ಲಿ, ಪೋಸ್ಟರ್ ಹಾಗೂ ಸಾಮಾಜಿಕ ಜಾಲತಾಣದ ಪ್ರಚಾರಗಳಲ್ಲಿ ತಮ್ಮ ಲೋಗೋವನ್ನು ಅಳವಡಿಸಲಾಗುವುದು ಮತ್ತು ವಿ.ಐ.ಪಿ. ಪಾಸ್ ನೀಡಲಾಗುವುದು ಎಂದು ರಾಯಚೂರು ಉತ್ಸವ ಆಚರಣೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಿಳಿಸಿದ್ದಾರೆ.
10 ಲಕ್ಷ ರೂ.ಗಳ ಮೇಲ್ಪಟ್ಟು ಪ್ರಾಾಯೋಜಕತ್ವ ನೀಡುವವರಿಗೆ ಉದ್ಘಾಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಭಾಗಿ ಮಾಡಲಾಗುವುದು. ಅಲ್ಲದೆ ವಿ.ಐ.ಪಿ. ಪಾಸ್ ನೀಡಿ ತಮ್ಮ ಭಾವಚಿತ್ರವನ್ನು ವೇದಿಕೆಯ ಮೇಲೆ ಇರುವ ಎಲ್.ಇ.ಡಿ. ಸ್ಕ್ರೀನ್ಥನಲ್ಲಿ ಬಿತ್ತರಿಸಲಾಗುವುದು. ವಿವಿಧ ಕಾರ್ಯಕ್ರಮಗಳಲ್ಲಿ ಪ್ರಾಾಯೋಜಕತ್ವವನ್ನು ನೀಡಿರುವ ಮಹನೀಯರನ್ನು ಸ್ಮರಿಸಲಾಗುವುದು. ಕಾರ್ಯಕ್ರಮಕ್ಕೆೆ ಆಗಮಿಸಿದ ಪ್ರಸಿದ್ದ ಕಲಾವಿದರೊಂದಿಗೆ ಸೆಲ್ಫಿಿ ೆಟೋ ತೆಗೆದುಕೊಳ್ಳಲು ಅವಕಾಶ ಕಲ್ಪಿಿಸಲಾಗುವುದು. ಮಳಿಗೆಗೆ ಅವಕಾಶ ಕಲ್ಪಿಿಸಲಾಗುವುದು ಹಾಗೂ ಪೋಸ್ಟರ್, ಸಾಮಾಜಿಕ ಜಾಲತಾಣದ ಪ್ರಚಾರಗಳಲ್ಲಿ ತಮ್ಮ ಲೋಗೋ ಅಳವಡಿಸಲಾಗುವುದು.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಆಚರಣೆ ಕುರಿತು ಪ್ರಾಾಯೋಜಕತ್ವ ನೀಡಲು ಜಿಲ್ಲೆಯ ಎಲ್ಲಾ ಮಹನೀಯರಲ್ಲಿ ರಾಯಚೂರು ಉತ್ಸವ ಆಚರಣೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಕೋರಿ ಪ್ರಕಟಣೆ ಹೊರಡಿಸಿದ್ದಾರೆ.

