ಸುದ್ದಿಮೂಲ ವಾರ್ತೆ ಮುದಗಲ್, ಜ.26:
ಸನಾತನ ಹಿಂದೂ ಧರ್ಮದ ಸಂಸ್ಕಾಾರ, ಸಂಸ್ಕೃತಿ, ಸಂಪ್ರದಾಯಗಳನ್ನ ಮಕ್ಕಳಿಗೆ ಕಲಿಸುವಂತ ಕೆಲಸ ತಂದೆ-ತಾಯಿಗಳಿಂದಾಗಬೇಕಿದೆ ಎಂದು ನಂದವಾಡಗಿ-ಆಳಂದ ಮಹಾಂತೇಶ್ವರ ಮಠದ ಪೂಜ್ಯರಾದ ಡಾ. ಅಭಿನವ ಚೆನ್ನಬಸವ ಶಿವಾಚಾರ್ಯ ಸ್ವಾಾಮೀಜಿ ಶನಿವಾರ ಹೇಳಿದರು.
ಪಟ್ಟಣದ ಶ್ರೀ ವಿಜಯಮಹಾಂತೇಶ್ವರ ಮಠದಲ್ಲಿ ಹಿಂದೂ ಸಮ್ಮೇಳನ ಸಮಿತಿ ಆಯೋಜಿಸಿದ್ದ ಬೃಹತ್ ಹಿಂದೂ ಸಮ್ಮೇಳನ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಧರ್ಮ ಯಾವತ್ತೂ ಜಾಗೃತವಾಗಿದೆ, ಇಲ್ಲಿ ನಮ್ಮ ಮನಸ್ಸುಗಳು ಜಾಗೃತವಾಗುವ ಕೆಲಸವಾಗಬೇಕಿದೆ. ಧರ್ಮದ ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧರ್ಮದ ಏಕತೆಗಾಗಿ ಪರರೊಂದಿಗೆ ಪರಸ್ಪರ ಪ್ರೀೀತಿ, ನಂಬಿಕೆಯೊಂದಿಗೆ ಬದುಕಬೇಕು. ಹಿಂದೂ ಧರ್ಮದಲ್ಲಿ ಪರರನ್ನು ಪ್ರೀೀತಿಸುವ ಗುಣವಿದೆ. ಮನುಷ್ಯನ ಮನಸ್ಸು ಮತ್ತು ಮನೆಯನ್ನು ಸ್ವಚ್ಛಂದವಾಗಿಟ್ಟುಕೊಳ್ಳುವುದೆ ಹಿಂದೂ ಧರ್ಮದ ಸಂಸ್ಕಾಾರವಾಗಿದೆ. ಧಾರ್ಮಿಕ ಸಂಸ್ಕಾಾರ, ಸಂಸ್ಕೃತಿ, ಸಂಪ್ರದಾಯ ಮನಸ್ಸಿಿನಲ್ಲಿ ಮೂಡಿದಾಗ ಧರ್ಮ ರಕ್ಷಣೆಯಾಗುತ್ತದೆ. ಭಾರತೀಯ ಮಾತೆಯ ಸಂಸ್ಕೃತಿಯನ್ನು ಮಹಿಳೆಯರು ಎತ್ತಿಿಹಿಡಿಯಬೇಕು. ಪಾಶ್ಚಾಾತ್ಯ ಶೈಲಿಗೆ ಮಾರುಹೋಗಬಾರದು. ಮನುಷ್ಯನ ಕಾಯದಲ್ಲಿ ಸಂಸ್ಕಾಾರದ ಕುಡಿ ಚಿಗುರೊಡೆದಾಗ ಧರ್ಮ ಉಳಿಯುತ್ತದೆ. ನಮ್ಮ ನೀತಿಯಿಂದ ಸಮಾಜದಲ್ಲಿ ಏಕತೆ ಬರಲು ಸಾಧ್ಯ. ಜಗತ್ತಿಿನಲ್ಲಿ ಪ್ರಕೃತಿ ಆರಾಧನೆಯಲ್ಲಿ ದೇವರನ್ನ ಕಾಣುವ ಏಕೈಕವಾದದ್ದು ಸನಾತನ ಹಿಂದೂ ಧರ್ಮವಾಗಿದೆ. ಕಾಲಕ್ಕೆೆ ಕಾಲಕ್ಕೆೆ ಸಾವಿರಾರು ವರ್ಷಗಳಿಂದ ನಿರಂತರ ದಾಳಿಯಾದರೂ ಹಿಂದೂ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸನಾತನ ಹಿಂದೂ ಧರ್ಮದ ರಕ್ಷಣೆ, ಆರ್ಎಸ್ಎಸ್ ಸಂಘನೆಯ ಕಾರ್ಯ ಮತ್ತು ಇತಿಹಾಸ ಕುರಿತು ಬಳ್ಳಾಾರಿಯ ಟಿ. ಪ್ರಸನ್ನ ಜೀ ಉಪನ್ಯಾಾಸ ಮಾಡಿದರು.
ಕಾರ್ಯಕ್ರಮ ಉದ್ಘಾಾಟಿಸಿದ ಡಾ. ಗುರುರಾಜ ದೇಶಪಾಂಡೆ ಸಮಾರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ ಉಪಸ್ಥಿಿತರಿದ್ದ ವೀರಭದ್ರೇೇಶ್ವರ ದೇವಸ್ಥಾಾನದ ಅರ್ಚಕ ಸಿದ್ಧಯ್ಯಸ್ವಾಾಮಿ ಸಾಲಿಮಠ ಧರ್ಮ ಜಾಗೃತಿ ಬಗ್ಗೆೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಯಿ ಭಾರತಾಂಭೆಯ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಪುಷ್ಪಾಾರ್ಚನೆ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆ ಅನಿಲಕುಮಾರ ಬುಶೆಟ್ಟಿಿ, ಸಂಗಮೇಶ ನೆರವೇರಿಸಿದರು. ಕಾರ್ಯಕ್ರಮಕ್ಕೆೆ ಮುದಗಲ್ ಪೋಲಿಸ್ ಠಾಣೆ ಪಿಎಸ್ಐ ವೆಂಕಟೇಶ ಮಾಡಗಿರಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ನೀಡಲಾಗಿತ್ತು.
ಪುರಸಭೆ ಮಾಜಿ ಸದಸ್ಯ ಗುಂಡಪ್ಪ ಗಂಗಾವತಿ, ಮಲ್ಲಪ್ಪ ಮಾಟೂರು, ವೆಂಕಟೇಶ ಕುಲಕರ್ಣಿ, ಮಹಾಂತೇಶ ಅಕ್ಷತ್ತಿಿ, ರವಿ ಕಟ್ಟಿಿಮನಿ ಹಾಗೂ ಹಿಂದೂ ಸಮ್ಮೇಳನದ ಕಾರ್ಯಕರ್ತರು, ಸಮಾಜದ ಗಣ್ಯರು, ಮುಖಂಡರು, ಮಹಿಳೆಯರು ಇದ್ದರು.
ಹಿಂದೂ ಧರ್ಮದ ಸಂಸ್ಕೃತಿ, ಸಂಪ್ರದಾಯ ಮಕ್ಕಳಿಗೆ ಕಲಿಸಿ- ಡಾ. ಚೆನ್ನಬಸವ ಶಿವಾಚಾರ್ಯರು

