ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ನಗರದ ಬಸವ ಕೇಂದ್ರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಲಾಯಿತು. ವಿಶೇಷ ಉಪನ್ಯಾಾಸ ನೀಡಿದ ರಂಗಪ್ಪ ಮ್ಯಾಾದಾರ, ಧೀರ, ನೇರ ವ್ಯಕ್ತಿಿತ್ವದ ಚೌಡಯ್ಯನವರು ಡಾಂಬಿಕತೆ ಆತನ ಬಳಿ ಸುಳಿಯದಂತೆ ನಡೆದುಕೊಂಡವರು ಎಂದರು.
ಆತನ ಮಾತು ಕತ್ತಿಿಯಂತೆ ಹರಿತ. ಆದರೆ ಆ ಕತ್ತಿಿ ಕಟುಕನ ಕೈಯಲ್ಲಿ ಹಿಡಿದ ಕತ್ತಿಿಯಲ್ಲ. ಶಸ ಚಿಕಿತ್ಸೆೆಗೆ ಬಳಸುವ ವೈದ್ಯರ ಕೈಯಲ್ಲಿನ ಸಂಸ್ಕಾಾರಗೊಂಡ ಕತ್ತಿಿಯಂತೆ ಹದಗೊಂಡ ಒರಟು ಭಾಷೆ ಆತನದು. ಅದೇ ರೀತಿ ಅಜ್ಞಾನಿ ಗುರುವನ್ನು ತಿದ್ದಲು ಚೌಡಯ್ಯನವರ ಪ್ರಯತ್ನ ತುಂಬಾ ಪರಿಣಾಮಕಾರಿ. ಲಿಂಗಧಾರಿಗಳಾದ ಮೇಲೆ ಜಾತಿ ಎಣಿಸಬಾರದು ಎಂಬುದು ಶರಣ ಸಿದ್ದಾಂತ. ಕುಲಹೀನ ಶಿಷ್ಯಂಗೆ ಅನುಗ್ರಹಿಸಿದ ಮೇಲೆ ಸಹಪಂಕ್ತಿಿ ಭೋಜನ ಮಾಡುವುದೇ ನಿಜ ಗುರುವಿನ ಧರ್ಮ. ಇಂದಿನ ದಿನಗಳಲ್ಲಿ ಸಮಾನ ಸಮಾಜ ಕಟ್ಟಲು ಇಂತಹ ನಿಜ ಗುರುಗಳ ಮಾರ್ಗದರ್ಶನ ಅವಶ್ಯವೆಂದರು.
ಮುಕ್ತಾಾ ಶರಣಬಸವ ನರಕಲದಿನ್ನಿಿ, ಹರವಿ ನಾಗನಗೌಡರು ಮಾತನಾಡಿದರು. ಬಲ್ಲಟಗಿ ಬಸವನಗೌಡ, ವಿಶ್ರಾಾಂತ ಪ್ರಾಾಚಾರ್ಯ ಅಮರೇಗೌಡ ಪಾಟೀಲ್, ಚನ್ನಬಸವಣ್ಣ ಮಹಾಜನಶೆಟ್ಟಿಿ, ಅಮರಪ್ಪ ಅಮೀನಗಡ , ಜಗದೇವಿ ಚನ್ನಬಸವ, ಸೂಗೂರಯ್ಯ ತಾತ, ಸರೋಜಾ ಮಾಲಿ ಪಾಟೀಲ್, ಸಿ ಬಿ ಪಾಟೀಲ್, ಚನ್ನಬಸವ ಮಹಾಜನಶೆಟ್ಟಿಿ ಇತರರಿದ್ದರು.
ಅಂಬಿಗರ ಚೌಡಯ್ಯನವರ ಜಯಂತಿ

