ಸುದ್ದಿಮೂಲ ವಾರ್ತೆ ಮುದಗಲ್, ಜ.27:
ಪಟ್ಟಣದ ಪುರಸಭೆ, ನಾಡ ಕಾರ್ಯಾಲಯ ಸೇರಿದಂತೆ ವಿವಿಧೆಡೆ ಸಾಮವೇದ ರಚನೆಕಾರ ಸವಿತಾ ಮಹರ್ಷಿ ಜಯಂತಿಯನ್ನು ರವಿವಾರ ಆಚರಿಸಿದರು.
ಪುರಸಭೆ ಕಾರ್ಯಾಲಯದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು.
ಪುರಸಭೆ ವ್ಯವಸ್ಥಾಾಪಕ ಸುರೇಶ ವನಹಳ್ಳಿಿ, ಸಿಬ್ಬಂದಿಗಳಾದ ಚೆನ್ನಮ್ಮ ದಳವಾಯಿಮಠ, ಬಸವರಾಜ ಕೊಟ್ಟೂರು, ನಿಸಾರ ಅಲಿ, ಜಿಲಾನಿಪಾಷ, ಬಸವರಾಜ, ಬೀಬಿ, ವೆಂಕಣ್ಣ ದೇಶಪಾಂಡೆ, ಸಮಾಜದವರು ಹಾಗೂ ಇತರರು ಇದ್ದರು.
ಮುದಗಲ್: ವಿವಿಧೆಡೆ ಸವಿತಾ ಮಹರ್ಷಿ ಜಯಂತಿ ಆಚರಣೆ

