ಸುದ್ದಿಮೂಲ ವಾರ್ತೆ ಬೆಂಗಳೂರು, ಜ.27:
ಮೈಸೂರು ಜಿಲ್ಲೆಯ ಯಾವುದೇ ಪುರಸಭೆಗಳಲ್ಲಿ ಟೆಂರ್ಡ ಕರೆಯುವುದು ಬಾಕಿ ಇರುವುದಿಲ್ಲ ಹಾಗೂ ಟೆಂಡರ್ ಪ್ರಕ್ರಿಿಯೆಗಳಲ್ಲಿ ಯಾವುದೇ ವಿಳಂಬವಾಗಿರುವುದಿಲ್ಲ ಎಂದು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ತಿಳಿಸಿದರು.
ವಿಧಾನ ಪರಿಷತ್ತಿಿನಲ್ಲಿ ಮಂಗಳವಾರ ಸಿ.ಎನ್. ಮಂಜೇಗೌಡ ಅವರ ಚುಕ್ಕೆೆ ಗುರುತಿನ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಮೈಸೂರು ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆೆಗಳ ವ್ಯಾಾಪ್ತಿಿಯಲ್ಲಿ ಮುಖ್ಯಮಂತ್ರಿಿಗಳ ಅಮೃತ ನಗರೋತ್ಥಾಾನ (ಮುನಿಸಿಪಾಲಿಟಿ) ಯೋಜನೆ ಹಂತ 4 ರಡಿ ಅನುದಾನ ಬಿಡುಗಡೆ ಮಾಡಲಾಗಿದೆ ಹಾಗೂ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ನಿಗದಿಪಡಿಸಲಾದ ಕಾಲಾವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

