ಸುದ್ದಿಮೂಲ ವಾರ್ತೆ ಬೆಂಗಳೂರು, ಜ.27:
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ರಾಜ್ಯಪಾಲರು ನಿರ್ಗಮಿಸುವ ವೇಳೆ ಅನುಚಿತವಾಗಿ ವರ್ತಿಸಿ ಅಗೌರವ ತೋರಿಸಿದ ಸದಸ್ಯರ ಅಮಾನತು, ಬಳ್ಳಾಾರಿ ಗಲಾಟೆ, ಅಬಕಾರಿ ಲಂಚ ಪ್ರಕರಣದಲ್ಲಿ ಸಚಿವರ ರಾಜೀನಾಮೆ, ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆೆ ಸೇರಿದಂತೆ ಸರ್ಕಾರದ ವೈಲ್ಯಗಳನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ದೋಸ್ತಿಿ ಪಕ್ಷಗಳು ಬೃಹತ್ ಪ್ರತಿಭಟನೆ ನಡೆಸಿದವು.
ವಿಧಾನಸೌಧ-ವಿಕಾಸಸೌಧದ ಮಧ್ಯಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಾಧ್ಯಕ್ಷ ಬಿ.ವೈ .ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಪರಿಷತ್ ಸದಸ್ಯರಾದ ಬೋಜೇಗೌಡ, ಟ.ಎ.ಶರವಣ ಸೇರಿದಂತೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಒಂದು ಕಡೆ ಕಾಂಗ್ರೆೆಸ್, ಕೇಂದ್ರ ಸರ್ಕಾರ ಮನರೇಗಾ ಯೋಜನೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ರಾಜಭವನ ಮುತ್ತಿಿಗೆ ಹಾಕಲು ಯತ್ನಿಿಸಿದರೆ, ಇತ್ತ ಕಾಂಗ್ರೆೆಸ್ ಸರ್ಕಾರದ ವೈಲ್ಯಗಳನ್ನು ಮುಂದಿಟ್ಟುಕೊಂಡು ದೋಸ್ತಿಿ ಪಕ್ಷಗಳು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆೆ ಬಿಸಿ ಮುಟ್ಟಿಿಸಿದವು.
ಪ್ರತಿಭಟನೆಯಲ್ಲಿ ಮಾತನಾಡಿದ ಬಹುತೇಕ ನಾಯಕರು ಸರ್ಕಾರದ ಭ್ರಷ್ಟಾಾಚಾರ, ಅಬಕಾರಿ ಇಲಾಖೆಯಲ್ಲಿ ಸಚಿವ ಆರ್.ವಿ. ತಿಮ್ಮಾಾಪುರ ಲಂಚಕ್ಕೆೆ ಬೇಡಿಕೆ ಇಟ್ಟ ಪ್ರಕರಣ ಇತ್ತೀಚಿಗೆ ಹೆಚ್ಚುತ್ತಿಿರುವ ಮಹಿಳೆಯರ ಮೇಲಿನ ದೌರ್ಜನ್ಯ ಸರ್ಕಾರಿ ಅಧಿಕಾರಿಗಳ ಮೇಲೆ ಗೂಂಡಾಗಿರಿ ಅಧಿವೇಶನದಲ್ಲಿ ರಾಜ್ಯಪಾಲರ ಜೊತೆ ಅನುಚಿತವಾಗಿ ವರ್ತಿಸಿದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರನ್ನು ತಕ್ಷಣವೇ ಸದನದಿಂದ ಅನಿರ್ದಿಷ್ಟಗಳ ಕಾಲ ಅಮಾನತು ಪಡಿಸುವಂತೆ ಒತ್ತಾಾಯ ಮಾಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋೋಟ್ ಅವರನ್ನು ಜೀತದಾಳು ರೀತಿ ರೆಡ್ಡಿಿಯವರು ನಡೆಸಿಕೊಳ್ಳುತ್ತಾಾರೆ. ಕಾಂಗ್ರೆೆಸ್ ಪಕ್ಷದವರು ಮಾನ ಮರ್ಯಾದೆ ಬಿಟ್ಟು ಲೋಕಭವನಕ್ಕೆೆ ಮುತ್ತಿಿಗೆ ಹಾಕಲು ಮುಂದಾಗಿದ್ದಾರೆ. ಯಾವ ನೈತಿಕತೆ ಮೇಲೆ ಮುತ್ತಿಿಗೆ ಹಾಕುತ್ತಿಿದ್ದೀರಿ? ಎಂದು ಪ್ರಶ್ನೆೆ ಮಾಡಿದರು.
ರಾಜ್ಯಪಾಲರು ಕಾರ್ಯಾಂಗದ ಮುಖ್ಯಸ್ಥರು ಅವರು ಹೇಗೆ ನಡೆದುಕೊಳ್ಳಬೇಕು? ಹೇಗೆ ಕಾರ್ಯ ನಿರ್ವಹಿಸಬೇಕು? ಎಂಬುದು ಅವರಿಗೆ ಗೊತ್ತಿಿದೆ ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ. ರಾಜ್ಯಪಾಲರು ತಮ ವಿವೇಚನೆ ಬಳಸಿಕೊಂಡು ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಾಾರೆ. ನಿಮ ತಾಳಕ್ಕೆೆ ತಕ್ಕಂತೆ ಕುಣಿಯದಿದ್ದರೆ ರಾಜ್ಯಪಾಲರೇ ಸರಿ ಇಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಿಗೆ ಸರಿ ? ಎಂದು ತರಾಟೆಗೆ ತೆಗೆದುಕೊಂಡರು.
ಗ್ರಾಾಮೀಣ ಭಾಗದಲ್ಲಿ ಸರ್ಕಾರವೇ ಜನರಿಗೆ ಹೆಂಡ ಕುಡಿಸುವ ಕೆಲಸವನ್ನು ಮಾಡುತ್ತಿಿದೆ ಅನೇಕ ಕಡೆ ಮದ್ಯವನ್ನು ಎಗ್ಗಿಿಲ್ಲದೆ ಮಾರಾಟ ಮಾಡುತ್ತಿಿದ್ದಾರೆ. ಅಧಿಕಾರಿಗಳಿಗೆ ಟಾರ್ಗೆಟ್ ನೀಡಿರುವುದರಿಂದ ಯಥೇಚ್ಛವಾಗಿ ಅಕ್ರಮವಾಗಿ ಮಾರಾಟಕ್ಕೆೆ ಅನುವು ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಇದು ಗೊತ್ತಿಿಲ್ಲವೇ ? ಎಂದು ಪ್ರಶ್ನಿಿಸಿದರು.
ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ಕೋಟಿ ಕೋಟಿ ಕೊಟ್ಟು ಪೋಸ್ಟಿಿಂಗ್ ಮಾಡಿಸಿಕೊಳ್ಳಬೇಕಾದ ವಾತಾವರಣವಿದೆ. ಲಂಚವಿಲ್ಲದೆ ಅಲ್ಲಿ ಏನು ನಡೆಯುವುದಿಲ್ಲ. ಎಲ್ಲವೂ ಸಚಿವರ ಮೂಗಿನ ನೇರಕ್ಕೆೆ ನಡೆಯುತ್ತದೆ. ಸಾರ್ವಜನಿಕ ಜೀವನದಲ್ಲಿರುವ ನಿಮಗೆ ಘನತೆ ಗೌರವ ಇದ್ದಿದ್ದರೆ ಇಷ್ಟೊೊತ್ತಿಿಗೆ ನಿಮ ಸ್ಥಾಾನಕ್ಕೆೆ ರಾಜೀನಾಮೆ ಕೊಟ್ಟು ಗೌರವಯುತವಾಗಿ ನಿರ್ಗಮಿಸಬೇಕಿತ್ತು. ಬದಲಿಗೆ ಅವರ ಕಾಲದಲ್ಲಿ ಹಾಗಿತ್ತು, ನಮ್ಮ ಕಾಲದಲ್ಲಿ ಹೀಗಿದೆ ಎಂದು ಇಲ್ಲದ ಕಾರಣಗಳನ್ನು ಹೇಳುತ್ತಿಿದ್ದಾರೆ. ಅವರ ರಾಜೀನಾಮೆ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ರ್ಆ.ಅಶೋಕ್ ಮಾತನಾಡಿ, ವೈನ್ ಸ್ಟೋೋರ್, ಬಾರ್ಗಳಲ್ಲಿ ತಿಂಗಳಿಗೊಮ್ಮೆೆ ಲಂಚ ನೀಡಬೇಕಿದೆ. ಅಬಕಾರಿ ಇಲಾಖೆಯ ಅಕ್ರಮದಲ್ಲಿ ಸಿಎಂಗೂ ಪಾಲು ಇದೆ. ಇಲ್ಲದಿದ್ದಿದ್ದರೆ ಅವರು ಸಚಿವರ ರಾಜೀನಾಮೆ ಪಡೆಯುತ್ತಿಿದ್ದರು. ಸಿಎಂಗೆ ಅಬಕಾರಿ ಅಕ್ರಮ ಕಾಣುತ್ತಿಿಲ್ಲವೇ? ಎಂದು ಪ್ರಶ್ನಿಿಸಿದರು.
ಸಿಎಂ ಧೃತರಾಷ್ಟ್ರನ ಹಾಗೆ ಕಣುಚ್ಚಿಿ ಕೂತಿದ್ದಾರಾ? ಪಂಚ ರಾಜ್ಯಗಳಿಗೆ ಹಣ ಹೋಗುತ್ತಿಿದೆ. ಹೀಗಾಗಿ ಸಿಎಂ ತಮಗೆ ಏನೂ ಗೊತ್ತಿಿಲ್ಲ ಎಂದು ಸುಮ್ಮನಿದ್ದಾರೆ. ದೊಡ್ಡ ಭ್ರಷ್ಟಾಾಚಾರ ಆಗುತ್ತಿಿದೆ, ಮಂತ್ರಿಿಗಳ ರಾಜೀನಾಮೆ ಆಗಲೇಬೇಕು ಎಂದು ಒತ್ತಾಾಯಿಸಿದರು.
ಕಾಂಗ್ರೆೆಸ್ ಸರ್ಕಾರಕ್ಕೆೆ ಜವಾಬ್ದಾಾರಿ ಇಲ್ಲ. ಜನರನ್ನು ದಾರಿ ತಪ್ಪಿಿಸಲು ಈ ಪ್ರತಿಭಟನೆ ನಡೆಸುತ್ತಿಿದ್ದಾರೆ. ಇದು ಭ್ರಷ್ಟಾಾಚಾರದ ಸರ್ಕಾರ. ಭ್ರಷ್ಟಾಾಚಾರ, ಕುರ್ಚಿ ಕಲಹ ವಿಷಯಾಂತರ ಮಾಡಲು ಅವರು ಪ್ರತಿಭಟನೆ ನಡೆಸುತ್ತಿಿದ್ದಾರೆ. ಆಡಳಿತ ಪಕ್ಷವಾಗಿ ಅವರೇ ಪ್ರತಿಭಟನೆ ಮಾಡುವುದು ನಾಚಿಕೆಗೇಡು ಎಂದು ವಾಗ್ದಾಾಳಿ ನಡೆಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಮಾಜಿ ಉಪಮುಖ್ಯಮಂತ್ರಿಿ ಹಾಗೂ ಶಾಸಕ ಡಾ.ಸಿ.ಎನ್ ಆಶ್ವತ್ಥ ನಾರಾಯಣ ಮಾತನಾಡಿದರು.ಪ್ರತಿಭಟನೆಯಲ್ಲಿ ಶಾಸಕರಾದ ಸುರೇಶ್ಕುರ್ಮಾ, ಜನಾರ್ದನರೆಡ್ಡಿಿ, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಎನ್.ರವಿಕುರ್ಮಾ, ಎಸ್.ರಘು, ಭರತ್ಶೆೆಟ್ಟಿಿ, ಅರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಬಿ.ಪಿ.ಹರೀಶ್, ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಹನುಮಂತ್ ನಿರಾಣಿ, ಸಿ.ಟಿ.ರವಿ ಸೇರಿದಂತೆ ಎರಡೂ ಪಕ್ಷಗಳ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು.
ರಾಜ್ಯಪಾಲರೊಂದಿಗೆ ಅನುಚಿತ ವರ್ತನೆ, ಅಬಕಾರಿ ಲಂಚ ಪ್ರಕರಣ : ಪ್ರತಿಪಕ್ಷಗಳ ಜಂಟಿ ಹೋರಾಟ

