ಸುದ್ದಿಮೂಲ ವಾರ್ತೆ ಮಸ್ಕಿ, ಜ.27:
ಕಾಗಿನೆಲೆ ಕನಕ ಗುರುಪೀಠದ ಕಲಬುರ್ಗಿ ವಿಭಾಗೀಯ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಾಮಿಗಳ ಪುಣ್ಯಾಾರಾಧನೆ ಹಾಗೂ ನುಡಿ ನಮನ ಕಾರ್ಯಕ್ರಮವು ಜನವರಿ 31 ಮತ್ತು ೆ.1ರಂದು ಬೆಳಿಗ್ಗೆೆ 10 ಗಂಟೆಗೆ ತಿಂಥಣಿ ಬ್ರಿಿಜ್ನಲ್ಲಿರುವ ಕನಕ ಗುರುಪೀಠದಲ್ಲಿ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಾಮಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಕುರುಬ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ವಕೀಲರು ಪತ್ರಿಿಕಾಗೋಷ್ಠಿಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಾಡಿನ ಹಲವು ಸ್ವಾಾಮೀಜಿಗಳು, ರಾಜ್ಯದ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಸಚಿವರು, ಶಾಸಕರು, ಗಣ್ಯ ಜನಪ್ರತಿನಿಧಿಗಳು ಮತ್ತು ಭಕ್ತಾಾದಿಗಳು ಭಾಗವಹಿಸಲಿದ್ದು, ಬೆಳಿಗ್ಗೆೆ 10ರಿಂದ ಸಂಜೆ 4ರವರೆಗೆ ಜರುಗಲಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಲ್ಲಯ್ಯ ಅಂಬಾಡಿ, ಕರಿಯಪ್ಪ ಹಾಲಾಪುರ, ಮಾಳಪ್ಪ, ದುರ್ಗೇಶ ವಕೀಲ್, ಮಲ್ಲನಗೌಡ ಸುಂಕನೂರು, ಮಾಳಿಂಗರಾಯ ಚಿಕ್ಕ ಕಡಬೂರು, ಕರಿಯಪ್ಪ ಹಾಗೂ ಕುರುಬ ಸಮಾಜದ ಮುಖಂಡರು ಹಾಗೂ ಇತರರು ಉಪಸ್ಥಿಿತರಿದ್ದರು.

