ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.27:
ವಾರದ ಐದು ದಿನಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ರಾಷ್ಟ್ರೀಯ ಬ್ಯಾಾಂಕುಗಳ ಖಾಸಗೀಕರಣವನ್ನು ನಿಲ್ಲಿಸಲು ಆಗ್ರಹಿಸಿ ರಾಷ್ಟ್ರೀಕೃತ ಬ್ಯಾಾಂಕ್ ನೌಕರರು ದೇಶಾದ್ಯಂತ ಮಂಗಳವಾರ ನಡೆಸಿದ ಮುಷ್ಕರದ ಭಾಗದಲ್ಲಿ ಬಳ್ಳಾಾರಿಯಲ್ಲಿ ವಿವಿಧ ಬ್ಯಾಾಂಕುಗಳು ಪ್ರತಿಭಟನೆ ನಡೆಸಿವೆ.
ಬ್ಯಾಾಂಕ್ ಒಕ್ಕೂಟಗಳ ಯುನೈಟೆಡ್ ೆರಂ (ಯುಎ್ಬಿಯು) ಜಂಟಿಯಾಗಿ ಪ್ರತಿಭಟನೆ ನಡೆಸಿದ್ದು, ವಾರದಲ್ಲಿ ಐದು ದಿನಗಳು ಮಾತ್ರ ಕೆಲಸ ಮಾಡುವ ಪ್ರಸ್ತಾಾವನೆಗೆ ಅನುಮೋದನೆ ನೀಡಲು ಆಗ್ರಹಿಸಿ ಕಳೆದ ಹತ್ತು ವರ್ಷಗಳಿಂದ ಪ್ರತಿಭಟನೆ ನಡೆದಿದೆ. ರಾಷ್ಟ್ರೀಯ ಬ್ಯಾಾಂಕುಗಳ ಖಾಸಗೀಕರಣವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಬ್ಯಾಾಂಕುಗಳ ಅಧಿಕಾರಿಗಳು, ಸಿಬ್ಬಂದಿಗಳು ಪ್ರತಿಭಟೆ ನಡೆಸಿದರು.
ಶನಿವಾರಗಳನ್ನು ರಜಾ ದಿನಗಳಾಗಿ ಅನುಮೋದಿಸಬೇಕು. ಡಿಸೆಂಬರ್ 7, 2023ರ ತಿಳುವಳಿಕೆ ಪತ್ರದ ಪ್ರಕಾರ, ಎಲ್ಲಾಾ ಶನಿವಾರಗಳನ್ನು ಬ್ಯಾಾಂಕ್ ರಜಾದಿನಗಳನ್ನಾಾಗಿ ಘೋಷಿಸುವ ಐಬಿಎ ಪ್ರಸ್ತಾಾವನೆಗೆ ಭಾರತ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು. ಆರ್ಬಿಐ, ಎಲ್ಐಸಿ, ಜಿಐಸಿ ಮತ್ತು ಕೇಂದ್ರ / ರಾಜ್ಯ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಿಿವೆ. ಅದೇ ನೀತಿಯನ್ನು ಬ್ಯಾಾಂಕಿಂಗ್ ಕ್ಷೇತ್ರಕ್ಕೂ ಅನ್ವಯಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಶರಣಗೌಡ ಬಿರಾದಾರ್, ಕೀರ್ತಿರಾಜ್ ಹಿಡ್ಕಲ್ ಮತ್ತು ಗಂಗಣ್ಣ ಪತ್ತಾಾರ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬ್ಯಾಾಂಕಿಂಗ್ ಅಧಿಕಾರಿಗಳ ಪ್ರತಿಭಟನೆ : ವ್ಯವಹಾರಗಳು ಸ್ಥಗಿತ

