ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಾಮಕ್ಕೆೆ ಕುಡಿಯುವ ನೀರು ಸಮಸ್ಯೆೆ ತಲೆದೋರಿದ್ದು ತಕ್ಷಣ ಪರಿಹರಿಸಲು ಹಾಗೂ ನೀರಿನ ಹೆಸರಲ್ಲಿ ಆದ ಅವ್ಯವಹಾರ ತನಿಖೆ ಮಾಡಲು ಗ್ರಾಾಮದ ಶಿವಮಾಲಾಧಾರಿಗಳು, ಪಂಚಾಯತಿ ಸದಸ್ಯರು ಒತ್ತಾಾಯಿಸಿದರು.
ಇಂದು ನಗರದ ಜಿಲ್ಲಾಾ ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ಮಾಡಿ ಸಿಇಓ ಅವರಿಗೆ ದೂರು ಸಲ್ಲಿಸಿ ಪೂರತಿಪ್ಲಿಿ ಪಂಚಾಯಿತಿ ವ್ಯಾಾಪ್ತಿಿಯ ಗ್ರಾಾಮದಲ್ಲಿ ಇನ್ನೂ ಬೇಸಿಗೆ ಬಂದಿಲ್ಲ ಕುಡಿಯುವ ನೀರಿನ ಸಮಸ್ಯೆೆ ಎದುರಾಗಿದೆ. ಪರಿಹರಿಸಲು ಪಿಡಿಓ, ಸದಸ್ಯರು ಹಣದ ಕೊರತೆ ಎಂದು ಹೇಳುತ್ತಿಿದ್ದಾಾರೆ. ನೀರಿಲ್ಲದೆ ಗ್ರಾಾಮದಲ್ಲಿ ಬದುಕುವುದು ಹೇಗೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು. ತಾವು ಶಿವಮಾಲೆ ಹಾಕಿದ್ದು ಬಳಸಲೂ ನೀರಿಲ್ಲಘಿ. ಇನ್ನೂ ಕುಡಿಯುವ ನೀರು ಕೇಳುವಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
15ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಬೋರವೆಲ್, ಪೈಪಲೈನ್ ಮಾಡದೆ ಕಾಮಗಾರಿ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಿಸಿ ಸುಮಾರು 30 ಲಕ್ಷ ರೂ ಹಣ ದುರ್ಬಳಕೆ ಮಾಡಿದ್ದಾಾರೆ. ದುರ್ಬಳಕೆ ಮಾಡಿಕೊಂಡವರು, ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಾಮದಿಂದ ವಾರ್ಷಿಕ ವಿವಿಧ ಮೂಲದ ತೆರಿಗೆಯಿಂದಲೆ ಸುಮಾರು 7 ಲಕ್ಷ ರೂ ಪಂಚಾಯಿತಿಗೆ ಪಾವತಿಸಲಾಗುತ್ತಿಿದೆ. ಅದೇ ಮೊತ್ತ ಖರ್ಚು ಮಾಡಿದರೂ ಊರಿಗೆಲ್ಲ ನೀರು ಪೂರೈಸಬಹುದು ಎಂದು ಸಿಇಓ ಅವರ ಗಮನ ಸೆಳೆದರು.
ಈ ಬಗ್ಗೆೆ ಅಧಿಕಾರಿಗಳಿಂದ ಮಾಹಿತಿ ಪಡೆದು ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸಲಾಗುವುದು. ನಾಳೆಯಿಂದಲೇ ನೀರಿನ ಟ್ಯಾಾಂಕರ್ ಬಿಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಯಲ್ಲಪ್ಪಘಿ, ಮಲ್ಲಿಕಾರ್ಜುನ ಹೂಗಾರ, ಶಿವಮಾಲಾಧಾರಿಗಳಾದ ರಮೇಶ, ತಿಮ್ಮಪ್ಪಘಿ, ಬಸಪ್ಪಘಿ, ಹುಸೇನಿ, ಬಸವರಾಜ, ಚಿನ್ನಿಿಘಿ, ಈರಣ್ಣಘಿ, ಚಂದ್ರು ವಿಶ್ವಕರ್ಮ, ವೀರೇಶ ಸೇರಿ ಇತರರಿದ್ದರು.
ಜಿ.ಪಂ ಸಿಇಓ ಬಳಿಗೆ ಶಿವಮಾಲಾಧಾರಿಗಳು ತುರುಕನಡೋಣಿಯಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಒತ್ತಾಯ

