ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ವಿಧಾನಮಂಡಲ ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲರ ತಡೆಯಲು ಮುಂದಾದ ವಿಧಾನ ಪರಿಷತ್ ಶಾಸಕ ಬಿ.ಕೆ.ಹರಿಪ್ರಸಾದ್ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಬಿ.ಕೆ.ಹರಿಪ್ರಸಾದ ವಿರುದ್ಧ ಧಿಕ್ಕಾಾರ ಕೂಗಿ ಆಕ್ರೋೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣ ಮಾಡಿ ಮರಳುತ್ತಿಿರುವಾಗ ಏಕಾಏಕಿ ಬಿ.ಕೆ.ಹರಿಪ್ರಸಾದ ಅವರು ಗೂಂಡಾ ರೀತಿ ವರ್ತಿಸಿದ್ದು ರಾಜ್ಯಪಾಲರಿಗೆ ಅಗೌರವ ತೋರಿಸಿ ಸಂವಿಧಾನ ವಿರೋಧಿಯಂತೆ ನಡೆದುಕೊಂಡ ಹಿರಿಯ ಶಾಸಕ ಬಿ.ಕೆ. ಹರಿಪ್ರಸಾದ ಅವರ ನಡೆ ಖಂಡನೀಯ ಕೂಡಲೆ ಅಮಾನತ್ತು ಮಾಡಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ವಿನಾಯಕರಾವ್, ಮುಖಂಡರಾದ ಬಂಡೇಶ ವಲ್ಕಂದಿನ್ನಿಿ, ರಾಮಚಂದ್ರ ಕಡಗೋಲು, ವಿಪಿ ರೆಡ್ಡಿಿಘಿ, ಭೀಮಣ್ಣ ಮಂಚಾಲ, ಶ್ರೀನಿವಾಸರೆಡ್ಡಿಿಘಿ, ವಿಜಯಕುಮಾರ ಸಜ್ಜನ್, ವೌನೇಶ ಇತರರು ಭಾಗವಹಿಸಿದ್ದರು.
ಬಿಜೆಪಿಯುವ ಮೋರ್ಚಾದಿಂದ ಪ್ರತಿಭಟನೆ ರಾಜ್ಯಪಾಲರಿಗೆ ಅಡ್ಡಿ ಪಡಿಸಿದ ಹರಿಪ್ರಸಾದ ವಜಾಕ್ಕೆ ಆಗ್ರಹ

