ಸುದ್ದಿಮೂಲ ವಾರ್ತೆ ತುಮಕೂರು,ಜ.27:
ವಾರಕ್ಕೆೆ ಐದು ದಿನಗಳ ಬ್ಯಾಾಂಕಿಂಗ್ ಸೇವೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ರಾಷ್ಟಾಾದ್ಯಂತ 8 ಲಕ್ಷಕ್ಕೂ ಹೆಚ್ಚು ಮಂದಿ ಬ್ಯಾಾಂಕ್ ಉದ್ಯೋೋಗಿಗಳು ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆೆ ಮನವಿ ಮಾಡುತ್ತಿಿದ್ದು, ತುಮಕೂರಿನಲ್ಲೂ ಸಹ ಯುಎಫ್ಬಿಿಯು ಸಂಘಟನೆ ಪ್ರತಿಭಟನೆ ನಡೆಸಿದೆ.
ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ವಾರದಲ್ಲಿ 5 ದಿನಗಳ ಬ್ಯಾಾಂಕಿಂಗ್ ಸೇವೆಗೆ ಅನುಮೋದನೆಯನ್ನು ನೀಡದೆ ವಿಳಂಬ ನೀತಿ ಅನುಸರಿಸುತ್ತಿಿರುವುದು ಇಂದಿನ ಮುಷ್ಕರಕ್ಕೆೆ ಎಡೆಮಾಡಿಕೊಟ್ಟಿಿದೆ ಎಂದು ಯುಎಫ್ಬಿಿಯು ಸಂಚಾಲಕ ಕೆ.ಎನ್. ವಾದಿರಾಜ ಹೇಳಿದರು.
ಏನಿದು ವಿವಾದ.?: ಬ್ಯಾಾಂಕಿಂಗ್ ಕ್ಷೇತ್ರದಲ್ಲಿ 2015ರಲ್ಲಿ ವಾರಕ್ಕೆೆ ಆರು ದಿನ ಕೆಲಸ ನಿರ್ವಹಿಸಲಾಗುತ್ತಿಿದ್ದರು. ಆಗಲೇ ವಾರಕ್ಕೆೆ 5 ದಿನಗಳ ಸೇವೆಯನ್ನು ಜಾರಿ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪರಿಷ್ಕರಣೆ ಮಾಡಿ 2018ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಾಂಕಿಂಗ್ಗೆೆ ರಜೆಯನ್ನು ನೀಡಿ ಉಳಿದ ಶನಿವಾರಗಳಂದು ಸಂಪೂರ್ಣ ಸೇವೆಯನ್ನು ಒದಗಿಸುವಂತೆ ಅನುಮೋದಿಸಲಾಗಿತ್ತು. ಇದುವರೆಗೂ ಅದರ ಪ್ರಕಾರವೇ ಬ್ಯಾಾಂಕಿಂಗ್ ಕೆಲಸ ನಿರ್ವಹಿಸುತ್ತಿಿದೆ.
ಈ ಮಧ್ಯೆೆ ಉಳಿದ ಶನಿವಾರಗಳನ್ನೂ ರಜೆಯನ್ನಾಾಗಿ ಪರಿವರ್ತನೆ ಮಾಡಿ ವಾರಕ್ಕೆೆ ಐದು ದಿನಗಳ ಬ್ಯಾಾಂಕಿಂಗ್ ಸೇವೆಯನ್ನು ಜಾರಿ ಮಾಡಬೇಕೆಂದು ಹಲವಾರು ಬಾರಿ ಮನವಿ ಮಾಡಿದರೂ ಕೂಡ, ಮುಂದಿನ ವೇತನ ಪರಿಷ್ಕರಣೆಯಲ್ಲಿ ಜಾರಿ ಮಾಡುತ್ತೇವೆ ಎಂಬ ಸುಳ್ಳು ಭರವಸೆಯನ್ನು ಮಾತ್ರ ನೀಡಿ ಇಂದಿನ ದಿನದವರೆಗೂ ಕೂಡ ಬ್ಯಾಾಂಕ್ ಉದ್ಯೋೋಗಿಗಳಿಗೆ ಸೌಲಭ್ಯಗಳನ್ನು ನೀಡಿಲ್ಲ. ಹಾಗಾಗಿ ದೇಶಾದ್ಯಂತ 8 ಲಕ್ಷಕ್ಕೂ ಅಧಿಕ ಬ್ಯಾಾಂಕ್ ಉದ್ಯೋೋಗಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬ್ಯಾಾಂಕ್ ಬಂದ್ ಗ್ರಾಾಹಕರಿಗೇನು ಎೆಕ್ಟ್.?: ಬ್ಯಾಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೈಜೇಷನ್ ಆಗಿರುವುದರಿಂದ ಯಾವುದೇ ರೀತಿಯ ತೊಂದರೆ ಗ್ರಾಾಹಕರಿಗೆ ಆಗುವುದಿಲ್ಲ ಈಗಾಗಲೇ ಶೇ. 80 ಗ್ರಾಾಹಕರು ಆನ್ ಲೈನ್ ಬ್ಯಾಾಂಕಿಂಗ್ ಅನ್ನ ಮಾಡುತ್ತಿಿದ್ದರಿಂದ ಗ್ರಾಾಹಕರಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂಬುದು ಬ್ಯಾಾಂಕ್ ಉದ್ಯೋೋಗಿಗಳ ಮಾತು.
ಕೆಲಸದ ಒತ್ತಡ ಉದ್ಯೋೋಗಿಗಳಲ್ಲಿ ಹೆಚ್ಚಿಿದ ಆತಂಕ : ಅಗತ್ಯ ಸಿಬ್ಬಂದಿಗಳ ನೇಮಕಾತಿ ಆಗದೇ ಇರುವುದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಉದ್ಯೋೋಗಿಗಳಲ್ಲಿ ನಿರಾಸಕ್ತಿಿ, ವರ್ಕ್ ಲೆ್ೈ ಇಂಬ್ಯಾಾಲೆನ್ಸ್ ಆಗಿರುವುದು, ಇದರಿಂದಾಗಿ ನೋ ಪ್ರೊೊಡಕ್ಟಿಿವಿಟಿ, ಮನುಷ್ಯರಾದ ನಾವು ಮಷೀನ್ ಗಳ ಹಾಗೆ ಕೆಲಸವನ್ನು ನಿರ್ವಹಿಸುತ್ತಿಿರುವುದು ಮತ್ತು ಕುಟುಂಬದವರೊಂದಿಗೆ ತಮ್ಮ ಸಮಯವನ್ನು ಕಳೆಯಿದೆ ಇರುವಂತದ್ದು , ಈ ಎಲ್ಲಾ ತೊಂದರೆಗಳು ಉದ್ಯೋೋಗಿಗಳ ಮಾನಸಿಕ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿಿದೆ. ಇತ್ತೀಚಿನ ನಿದರ್ಶನಗಳನ್ನು ನೋಡಿದಾಗ 30 ರಿಂದ 40 ವರ್ಷದ ಅನೇಕ ಬ್ಯಾಾಂಕ್ ಉದ್ಯೋೋಗಿಗಳು ಹಾರ್ಟ್ ಅಟ್ಯಾಾಕ್ ಮತ್ತು ಇನ್ನಿಿತರ ಹೃದಯ ಸಂಬಂಧಿತ ರೋಗಗಳಿಂದ ಮರಣವನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ತಾರತಮ್ಯ ಮಾಡಿದ ನಮ್ಮ ಬ್ಯಾಾಂಕಿಂಗ್ ಉದ್ಯೋೋಗಿಗಳಿಗೆ ಏಕೈಕ ಪ್ರಮುಖ ಬೇಡಿಕೆಯಾಗಿರುವ ವಾರಕ್ಕೆೆ ಐದು ದಿನಗಳ ಬ್ಯಾಾಂಕಿಂಗ್ ಸೇವೆಯನ್ನು ಜಾರಿ ಮಾಡುವಂತೆ ರಾಷ್ಟ್ರದ್ಯಂತ ಈ ಮುಷ್ಕರವನ್ನು ಹಮ್ಮಿಿಕೊಳ್ಳಲಾಗಿದೆ. ಈ ಮುಷ್ಕರದಲ್ಲಿ ಯುಎಫ್ಬಿಿಯು ಸಂಚಾಲಕ ಕೆ.ಎನ್. ವಾದಿರಾಜ, ಎಸ್ಬಿಿಐ ಆಫೀಸರ್ ಅಸೋಸಿಯೇಷನ್ ಶಂಕರಪ್ಪ, ಎಸ್ಬಿಿಐ ಯೂನಿಯನ್ ನಿಂದ ಸರ್ವಮಂಗಳ ರವಿ, ಕೆನರಾ ಬ್ಯಾಾಂಕಿನ ಸತೀಶ್ ರಾಮ್, ಕರ್ನಾಟಕ ಬ್ಯಾಾಂಕಿನ ನಾರಾಯಣ್, ಅಜಯ್ ಮತ್ತು ಉಳಿದ ಎಲ್ಲಾ ಬ್ಯಾಾಂಕಿನ ಪ್ರತಿನಿಧಿಗಳು ಹಾಗೂ ಸಂಗಾತಿಗಳು ಭಾಗವಹಿಸಿದ್ದರು.
ಕೇಂದ್ರದ ವಿಳಂಬ ನೀತಿಗೆ ಪ್ರತಿಭಟನೆ ಅನಿವಾರ್ಯ : ಯುಎ್ಬಿಯು

