ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ಮಾಹಿತಿ ಪ್ರದರ್ಶನ ಮಳಿಗೆಗೆ ರಾಯಚೂರು ಜಿಲ್ಲಾ ಮಟ್ಟದ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ ಅವರು ಚಾಲನೆ ನೀಡಿದರು.
ಲಿಂಗಸಗೂರು ಕೇಂದ್ರ ಬಸ್ ನಿಲ್ದಾಾಣದಲ್ಲಿ ಜನವರಿ 28ರಂದು ನಡೆದ ಕಾರ್ಯಕ್ರಮದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆ ಉದ್ಘಾಾಟಿಸಿದರು. ಇದೇ ವೇಳೆ, ಸಾಂಪ್ರದಾಯಿಕ ಮಾದರಿಯಲ್ಲಿ ಸಿದ್ಧಪಡಿಸಿದ್ದ ದೀಪ ಪ್ರಜ್ವಲನೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಪಾಮಯ್ಯ ಮುರಾರಿ ಅವರು, ಶಕ್ತಿಿ, ಅನ್ನಭಾಗ್ಯ, ಗೃಹಲಕ್ಷ್ಮಿಿ, ಗೃಹಜ್ಯೋೋತಿ, ಯುವನಿಧಿ ಪಂಚ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನದ ಜೊತೆಗೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಕಲ್ಯಾಾಣಕ್ಕಾಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾಾನ ಮಾಡುತ್ತಿಿದೆ. ಎಸ್ಸಿಿಪಿ ಟಿಎಸ್ಪಿಿ ಪ್ರತಿಭಾವಂತರಿಗೆ ಪ್ರೋೋತ್ಸಾಾಹ ಧನ, ಲಿಡ್ಕರ್ ಅನುಷ್ಠಾಾನ ಕಾರ್ಯಕ್ರಮ, ವಿದ್ಯಾಾರ್ಥಿಗಳಿಗೆ ವಿದ್ಯಾಾರ್ಥಿ ವೇತನ, ವಿವಿಧ ನಿಗಮಗಳ ಅನುಷ್ಠಾಾನ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಅಚ್ಚುಕಟ್ಟಾಾಗಿ ಜಾರಿ ಮಾಡುತ್ತಿಿದೆ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗವಿಸಿದ್ದಪ್ಪ ಹೊಸಮನಿ ಅವರು ಪ್ರಾಾಸ್ತಾಾವಿಕ ಮಾತನಾಡಿ, ಮಾನ್ಯ ಮುಖ್ಯಮಂತ್ರಿಿಗಳ ಅಧ್ಯಕ್ಷತೆಯಲ್ಲಿ 2025ರ ಆಗ್ಟ್ 16ರಂದು ನಡೆದ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ ರಾಜ್ಯ ಅಭಿವೃದ್ಧಿಿ ಪರಿಷತ್ ಸಭೆಯಲ್ಲಿ ಅನುಮೋದಿಸಿದಂತೆ, 2025-26ನೇ ಸಾಲಿನ ಎಸ್ಸಿಿಪಿ ಟಿಎಸ್ಪಿಿ ಕ್ರಿಿಯಾಯೋಜನೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳ ಕುರಿತಂತೆ ರಾಜ್ಯದ ವಿವಿಧೆಡೆಯ ಆಯ್ದ ಬಸ್ ನಿಲ್ದಾಾಣಗಳಲ್ಲಿ ನಡೆದಂತೆ ಲಿಂಗಸೂರು ಬಸ್ ನಿಲ್ದಾಾಣದಲ್ಲಿ ಸಹ ಪ್ರಚಾರ ಕಾರ್ಯ ಹಮ್ಮಿಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜನವರಿ 30ರವರೆಗೆ ಪ್ರಚಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರೂಪಿಸಿರುವ ಮಾಹಿತಿ ಪ್ರದರ್ಶನ ಮಳಿಗೆಯು ಲಿಂಗಸೂರು ನಗರದ ಕೇಂದ್ರ ಬಸ್ ನಿಲ್ದಾಾಣದಲ್ಲಿ ಜನವರಿ 28 ರಿಂದ ಜನವರಿ 30ರವರೆಗೆ ಇರುತ್ತದೆ. ಸಾರ್ವಜನಿಕರು ಜನಾಕರ್ಷಣೀಯ ಈ ಮಳಿಗೆಗೆ ಭೇಟಿ ನೀಡಿ ವಿವಿಧ ಗ್ಯಾಾರಂಟಿ ಯೋಜನೆಗಳು ಮತ್ತು ಎಸ್ಸಿಿಪಿ ಹಾಗೂ ಟಿಎಸ್ಪಿಿ ಯೋಜನೆಗಳ ಅನುಷ್ಠಾಾನದ ಯಶೋಗಾಥೆಯ ಚಿತ್ರಣ ವೀಕ್ಷಣೆ ಮಾಡಬಹುದಾಗಿದೆ ಎಂದು ಇದೆ ವೇಳೆ ಗವಿಸಿದ್ದಪ್ಪ ಅವರು ಲಿಂಗಸೂರು ತಾಲೂಕಿನ ಜನತೆಯಲ್ಲಿ ಮನವಿ ಮಾಡಿದರು.
ೆ.1ರಿಂದ ದೇವದುರ್ಗದಲ್ಲಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರೂಪಿಸಿರುವ ಈ ಮಾಹಿತಿ ಪ್ರದರ್ಶನ ಮಳಿಗೆಯು ೆ.1ರಿಂದ ೆ.3ರವರೆಗೆ ದೇವದುರ್ಗ ಪಟ್ಟಣದ ಕೇಂದ್ರ ಬಸ್ ನಿಲ್ದಾಾಣದಲ್ಲಿ ಅಳವಡಿಸಲಾಗುವುದು ಎಂದು ಗವಿಸಿದ್ದಪ್ಪ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷರಾದ ಭೂಪನಗೌಡ ಕರಡಕಲ್, ಟಿಎಪಿಸಿಎಂಎಸ್ನ ಅಧ್ಯಕ್ಷರಾದ ಶಶಿಧರ ಪಾಟೀಲ, ಲಿಂಗಸೂರ ಕೇಂದ್ರ ಬಸ್ ನಿಲ್ದಾಾಣದ ಸಂಚಾರಿ ನಿಯಂತ್ರಕರಾದ ಸಂಗಪ್ಪ, ಸಾರಿಗೆ ನಿಯಂತ್ರಕರಾದ ಮೆಹಬೂಬಿ, ಬಸವಂತಪ್ಪ, ಅಮರಪ್ಪ, ಬಸಣ್ಣ ಸೇರಿದಂತೆ ಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾಾರ್ಥಿಗಳು ಮತ್ತು ಇತರರು ಇದ್ದರು.
ವಾರ್ತಾ ಇಲಾಖೆಯ ಮಾಹಿತಿ ಪ್ರದರ್ಶನ ಮಳಿಗೆಗೆ ಚಾಲನೆ

