ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಸರ್ಕಾರದ ನಿರ್ದೇಶನದಂತೆ ಮತ್ತು ಉಪ ಕಾರ್ಮಿಕ ಆಯುಕ್ತರ ಸೂಚನೆ ಅನ್ವಯ ಟಿಎಲ್ಬಿಸಿ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇಂದು ಹಳೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ್ ಅವರ ಅಧ್ಯಕ್ಷತೆಯಲ್ಲಿ ನೀರಾವರಿ ಅಧಿಕಾರಿಗಳ ಮತ್ತು ತುಂಗಭದ್ರಾಾ ನೀರಾವರಿ ಕಾರ್ಮಿಕರ ಸಂಘದ ಸಭೆಯಲ್ಲಿ ಕಾರ್ಮಿಕರ ಪರವಾಗಿ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಾಪಕ ನಿರ್ದೇಶಕರ ಅನುಮೋದನೆ ಮತ್ತು ಉಪ ಕಾರ್ಮಿಕ ಆಯುಕ್ತರು ಕಲಬುರ್ಗಿಯವರ ನೇತೃತ್ವದಲ್ಲಿ ನಡೆದ ಜಂಟಿ ಸಂಧಾನ ಸಭೆಯ ಸೂಚನೆಯಂತೆ ತುಂಗಭದ್ರಾಾ ಕಾಲುವೆ ಮೇಲೆ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಲು ಕೋರಲಾಯಿತು. ಅಲ್ಲದೆ, ಆಯುಕ್ತರೆ ವರ್ಷದ 11 ತಿಂಗಳ ಕಾಲವೂ ವೇತನ ಸಹಿತ ಕೆಲಸ ನೀಡಲು ಮಾಡಿದ ಆದೇಶ ಉಲ್ಲೇಖಿಸಿದಾಗ ಅಲ್ಲದೆ, ಅಧಿಕಾರಿಗಳು ಸಮಯಕ್ಕೆೆ ಸರಿಯಾಗಿ ಟೆಂಡರ್ ಕರೆದು ಕೆಲಸ ನಿರ್ವಹಿಸಲು ಮನಸು ಮಾಡುತ್ತಿಿಲ್ಲ ಇದರಿಂದ ವೇತನ ಪಾವತಿ ವಿಳಂಬವಾಗುತ್ತಿಿದೆ ಎಂದು ದೂರಿದರು.
ಈ ಬಗ್ಗೆೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಾಧಿಕಾರಿ ಭರವಸೆ ನೀಡಿದರು.
ಸಭೆಯಲ್ಲಿ ತುಂಗಭದ್ರಾಾ ನೀರಾವರಿ ಕಾರ್ಮಿಕರ ಸಂಘ ಕೇಂದ್ರ ಸಮಿತಿ ಅಧ್ಯಕ್ಷ ಕೆ ನಾಗಲಿಂಗಸ್ವಾಾಮಿ, ಪ್ರಧಾನ ಕಾರ್ಯದರ್ಶಿ ಎಂ ಬಸವರಾಜ, ರಾಜಾಸಾಬ್, ನಿಂಗಪ್ಪ ಬೇರ್ಗಿ, ರಾಮರೆಡ್ಡಿಿ ಕಲ್ಮಲಾ, ಬಸವರಾಜ ಸಾಲಮನಿ, ಜಗದೀಶ, ನೀರಾವರಿ ನಿಗಮದ ಯರಮರಸ್ ವೃತ್ತದ ಅಧೀಕ್ಷಕ ಅಭಿಯಂತರ ಸತ್ಯನಾರಾಯಣ ಶೆಟ್ಟಿಿ, ಸಿರಿವಾರ, ಯರಮರಸ್ ವಿಭಾಗದ ಕಾರ್ಯಪಾಲಕ ಅಭಿಯಂತರ ಕೋದಂಡರಾಮ, ಎಇಇ ವಿಜಯಲಕ್ಷ್ಮಿಿ ಪಾಟೀಲ, ಶಾಂತಕುಮಾರ ಇದ್ದರು.

