ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ತುಂಗಭದ್ರಾಾ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಿ ನಿರಂತರ ಕೆಲಸ ನೀಡಬೇಕೆಂದು ಜಿಲ್ಲಾಾಧಿಕಾರಿ ಬಿ.ನಿಖಿಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಟಿಯುಸಿಐ ಸಂಘಟನೆಕಾರರ ಸಭೆಯಲ್ಲಿ ಆಗ್ರಹಿಸಲಾಯಿತು.
ಜಿಲ್ಲಾಾಧಿಕಾರಿ ಕಚೇರಿಯಲ್ಲಿ ತುಂಗಭದ್ರಾಾ ಕಾರ್ಮಿಕರ ಸಂಘಗಳ ಪ್ರತಿನಿಧಿಗಳ, ಕಾರ್ಮಿಕರ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಸಂಘದ ಮುಖಂಡರು ಬಾಕಿ ಸಂಬಳ ಪೂರ್ಣ ಪಾವತಿಗೆ ಹಾಗೂ ವರ್ಷ ಪೂರ್ತಿ ಕೆಲಸಕ್ಕೆೆ ಪಟ್ಟು ಹಿಡಿದರು. ನೀರಾವರಿ ಅಧಿಕಾರಿಗಳು, 12 ತಿಂಗಳ ಕೆಲಸ ಕೊಡುವ ಪ್ರಸ್ತಾಾವನೆಗೆ ನಿಗಮದ ಹೊಸ ಅನುಮೋದನೆ ಬೇಕಾಗಿದೆ ಎಂದರು. ಕಾರ್ಮಿಕ ಸಂಘ ಹಾಗೂ ನೀರಾವರಿ ಅಧಿಕಾರಿಗಳ ಪ್ರಸ್ತಾಾವನೆಗಳನ್ನು ಉಲ್ಲೇಖಿಸಿ ನಾಳೆಯೇ ಸರ್ಕಾರಕ್ಕೆೆ ಹಾಗೂ ನಿಗಮಕ್ಕೆೆ ತುರ್ತು ಪತ್ರ ಬರೆದು ಪರಿಹಾರ ಕೋರಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.
ಕೆಲಸದಿಂದ ತೆಗೆದರೆ ಹೋರಾಟ ನಡೆಸುವುದಾಗಿ ಕಾರ್ಮಿಕ ಸಂಘದ ಮುಖಂಡರು ಹೇಳಿದರು. ಸಂಘದ ಅಧ್ಯಕ್ಷ ಆರ್ ಮಾನಸಯ್ಯ, ಟಿಯುಸಿಐ ರಾಜ್ಯಾಾಧ್ಯಕ್ಷ ಎಂ.ಡಿ ಅಮೀರ ಅಲಿ, ಜಿ ಅಡವಿರಾವ್, ನೀರಾವರಿ ಇಲಾಖೆಯಿಂದ ಅಧೀಕ್ಷಕ ಅಭಿಯಂತರ ಸತ್ಯ ನಾರಾಯಣ ಶೆಟ್ಟಿಿ, ಕಾರ್ಯಪಾಲಕ ಅಭಿಯಂತರ ಎಂಎಸ್ ಘೋಡೇಕರ, ಕಾರ್ಯಪಾಲಕ ಅಭಿಯಂತರ ಕೊದಂಡರಾಮ ಸಿರಿವಾರ, ಏಇಇ ವಿಜಯಲಕ್ಷ್ಮಿಿ ಪಾಟೀಲ ಮತ್ತು ಪೊಲೀಸ್ ಇಲಾಖೆಯಿಂದ ಡಿವೈಎಸ್ಪಿಿ ಶಾಂತವೀರ, ಸಿಪಿಐ ಉಮೇಶ್ ಕಾಂಬ್ಳೆೆ ಇದ್ದರು.

