ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಯುವಕರು ಆಟಗಳ ಮೂಲಕ ತಮ್ಮ ದೈಹಿಕ ಸದೃಢತೆಗೆ ಒತ್ತು ನೀಡುವ ಜೊತೆಗೆ ಶ್ರೀ ಕ್ರಾಾಂತಿವೀರ ಸಂಗೊಳ್ಳಿಿ ರಾಯಣ್ಣ ಅವರ ಆದರ್ಶಗಳು ಪಾಲಿಸಿ ಎಂದು ಮಹಿಳಾ ಆಯೋಗದ ಅಧ್ಯಕ್ಷೆೆ ಡಾ.ನಾಗಲಕ್ಷ್ಮಿಿ ಚೌಧರಿ ಸಲಹೆ ನೀಡಿದರು.
ಶ್ರೀ ಕ್ರಾಾಂತಿವೀರ ಸಂಗೊಳ್ಳಿಿ ರಾಯಣ್ಣ ಟ್ರಸ್ಟ್ ನಿಂದ ಹಮ್ಮಿಿಕೊಂಡಿದ್ದ ಕ್ರಿಿಕೆಟ್ ಟೂರ್ನಮೆಂಟ್ ಸಮಾರೋಪದಲ್ಲಿ ಪಾಲ್ಗೊೊಂಡು ಮಾತನಾಡಿದರು. ಇಂದು ಕ್ರೀೆಡಾಂಗಣದಲ್ಲಿ ನಿಂತಿರುವುದು ಕೇವಲ ಕ್ರಿಿಕೆಟ್ ಆಟ ಆಡಲು ಮಾತ್ರವಲ್ಲ ನಿಮ್ಮ ಪ್ರತಿಭೆ ತೋರಿಸಲು ದೊರೆತ ಅವಕಾಶ. ಸಂಗೊಳ್ಳಿಿ ರಾಯಣ್ಣ ಅವರ ಜೀವನವೇ ನಿಮಗೆಲ್ಲ ಆದರ್ಶವಾಗಬೇಕು ತ್ಯಾಾಗ ಬಲಿದಾನದಿಂದ ನಮಗೆ ಸ್ವಾಾತಂತ್ರ್ಯ ಬಂದಿದೆ ಎಂಬುದನ್ನು ಯುವಕರು ಮರೆಯಬಾರದು ಸಂಗೊಳ್ಳಿಿ ರಾಯಣ್ಣ ನವರಂತೆ ಧೈರ್ಯ, ಹೋರಾಟ ಮತ್ತು ಆತ್ಮಗೌರವ ಬೆಳೆಸಿಕೊಂಡು ನಾವು ವಾಸಿಸುತ್ತಿಿರುವ ಗ್ರಾಾಮಕ್ಕೆೆ, ಜಿಲ್ಲೆಗೆ, ತಾಲೂಕಿಗೆ ಮಾದರಿಯಾಗಬೇಕು ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ಅವರ ದುಃಖ ದುಮ್ಮಾಾನಗಳಿಗೆ ಸ್ಪಂದಿಸುವುದರ ಮೂಲಕ ಸಂಗೊಳ್ಳಿಿ ರಾಯಣ್ಣನಿಗೆ ಗೌರವ ಸಲ್ಲಿಸಲು ಸಲಹೆ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಮಟಮಾರಿಯ ಶಿವಾನಂದ ಮಠದ ಪೂಜ್ಯಶ್ರೀ ಜ್ಞಾನಾನಂದ ಮಹಾರಾಜರು ಮಾತನಾಡಿದರು.
ವಾರಿಯರ್ಸ್ ತಂಡ ಪ್ರಥಮ ಬಹುಮಾನ 50 ಸಾವಿರ ಪಡೆದರೆ, ಬಿನ್ನಿಿ ಆರ್ಮಿ ತಂಡ ದ್ವಿಿತೀಯ 25 ಸಾವಿರ ಬಹುಮಾನ ಪಡೆಯಿತು.
ಕಾಂಗ್ರೆೆಸ್ ಮುಖಂಡ ರವಿಬೋಸರಾಜು ಜಿಲ್ಲಾಾ ಉಪಾಧ್ಯಕ್ಷ ಕೆ.ಪಂಪಾಪತಿ, ಬಜಾರಪ್ಪ, ಮುದಕಪ್ಪ ವಕೀಲ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪಘಿ, ಟ್ರಸ್ಟ್ ಗೌರವಾಧ್ಯಕ್ಷ ಬಿ.ಬಸವರಾಜ, ಜಿಲ್ಲಾಾಧ್ಯಕ್ಷ ಕೆ.ಅಯ್ಯಣ್ಣ ವಡವಾಟಿ, ವೇಣುಗೋಪಾಲ, ಡಾ.ಎಂ.ನಾಗರತ್ನ ನಾಯಕ,ಡಾ.ಶಾಮಣ್ಣ ಮಾಚನೂರು ಸೇರಿ ಹಲವರಿದ್ದರು.

