ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಜಿಲ್ಲೆೆಯ ದೇವದುರ್ಗ ಪಟ್ಟಣದಲ್ಲಿ ಮಲದಕಲ್ ಗ್ರಾಾಮದ ಆರಾಧ್ಯ ದೈವ ಶ್ರೀ ಹುಡೇದ ಅಂಜನೇಯ ಸ್ವಾಾಮಿಯ ಜಾತ್ರಾಾ ಮಹೋತ್ಸವದ ಅಂಗವಾಗಿ 4ನೇ ವರ್ಷದ ಜಿಲ್ಲಾ ಮಟ್ಟದ ರಸಪ್ರಶ್ನೆೆ ಸ್ಪರ್ಧೆ ಕಾರ್ಯಕ್ರಮ ಜರುಗಿತು.
ಮಲದಕಲ್ ಗೆಳೆಯರ ಬಳಗ ಮತ್ತು ಜ್ಞಾನವೃಕ್ಷ ಟ್ರಸ್ಟ್ ದೇವದುರ್ಗ ಹಾಗೂ ಲಿಂಗಸುಗೂರಿನ ವಿಶ್ವಜ್ಞಾನಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯುಕ್ತಾಾಶ್ರಯದಲ್ಲಿ ದೇವದುರ್ಗದ ಶ್ರೀಖೇಣದ್ ಕಲ್ಯಾಾಣ ಮಂಟಪದಲ್ಲಿ ಸ್ಪರ್ಧೆ ಹಮ್ಮಿಿಕೊಳ್ಳಲಾಗಿತ್ತು.
ಶ್ರೀ ನಿಜಾನಂದ ಯೋಗಾಶ್ರಮ ಮಲದಕಲ್ ನ ಶ್ರೀ ಗುರು ಬಸವ ರಾಜಗುರುಗಳು ಸಾನಿಧ್ಯ ವಹಿಸಿದ್ದರು. ಪಿಎಸ್ಐ ಎಸ್,ಮಂಜುನಾಥ ಉದ್ಘಾಾಟಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಗರಾವ್ ಸರ್ಕಿಲ್ , ಪ್ರಾಾಚಾರ್ಯ ಗರುಡವಾಹನ, ಬಸವರಾಜ ಕೊಪ್ಪರ, ಡಾ. ಸಾಬಣ್ಣ ನಾಯಕ, ಸೈನಿಕ ಅಮರೇಶ ನಾಯಕ ಜರದಬಂಡಿ , ದ್ರೋಣಾಚಾರ್ಯ ಅಕಾಡೆಮಿ ಸಂಚಾಲಕರಾದ ರವಿಕುಮಾರ ದೊರೆ, ಸಹಾಯಕ ಪ್ರಾಾಧ್ಯಾಾಪಕ ಡಾ. ಮಾರುತಿ ಕುಮಾರ ಮಲದಕಲ್, ಜ್ಞಾನವೃಕ್ಷ ಟ್ರಸ್ಟ್ ಅಧ್ಯಕ್ಷ ಪ್ರಭು ಹೊನ್ನಕಾಟಮಳ್ಳಿಿ ಅಧ್ಯಕ್ಷತೆ ವಹಿಸಿದ್ದರು.
ಮಲದಕಲ್ ಗೆಳೆಯರ ಬಳಗದ ರಸಪ್ರಶ್ನೆ ಸ್ಪರ್ಧೆ

