ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಮುನ್ನೂರು ಕಾಪು ಸಮಾಜದ ಆರಾಧ್ಯ ದೇವರು ಶ್ರೀ ಮಾತಾ ಲಕ್ಷ್ಮಮ್ಮದೇವಿ, ಶ್ರೀಮಾತಾ ಕಾಳಿಕಾ ದೇವಿ ಜಾತ್ರಾಾ ಮಹೋತ್ಸವ ಅಂಗವಾಗಿ ಮಧ್ಯಾಾಹ್ನ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಜಾತ್ರಾಾ ಮಹೋತ್ಸವ ಹಿನ್ನಲೆಯಲ್ಲಿ ಬೆಳಿಗ್ಗೆೆಯಿಂದ ಮುನ್ನೂರು ಕಾಪು ಸಮುದಾಯದವರು ಉಭಯ ದೇವರುಗಳಿಗೆ ವಿಶೇಷ ಪೂಜೆ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಮಾಜಿ ಶಾಸಕ ಎ. ಪಾಪಾರೆಡ್ಡಿಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಾಹ್ನ ಮಾತೆಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಿಯಲ್ಲಿರಿಸಿಕೊಂಡು ನಂದಿಕೋಲು ಸೇವೆ ಮೂಲಕ ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು.
ನಂತರ ವಿವಿಧ ಬಣ್ಣಗಳ ಹೂಗಳಿಂದ ಅಲಂಕರಿಸಿದ ರಥಕ್ಕೆೆ ಪೂಜೆ ಸಲ್ಲಿಸಿದ ನಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿ ರಥೋತ್ಸವ ನೆರವೇರಿತು. ಜಾತ್ರೆೆಗೆ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಬೆಲ್ಲಂ ನರಸರೆಡ್ಡಿಿ, ಯು. ಕೃಷ್ಣಮೂರ್ತಿ, ಕುಕ್ಕಲ ನರಸಿಂಹಲು, ಜಿ. ಶೇಖರ ರೆಡ್ಡಿಿ, ಎನ್. ಶ್ರೀನಿವಾಸ್ ರೆಡ್ಡಿಿ, ಜಿ.ವೆಂಕಟರೆಡ್ಡಿಿ,ಶ್ರೀನಿವಾಸ್ ರೆಡ್ಡಿಿ, ಬಂಗಿ ನರಸರೆಡ್ಡಿಿ, ಬಿ.ಶೇಖರ ರೆಡ್ಡಿಿ, ಸೂಗಣ್ಣ ಜನಾರ್ದನ ರೆಡ್ಡಿಿ, ಪುಂಡ್ಲ ರಾಜೇಂದ್ರ ರೆಡ್ಡಿಿ, ಟಿ. ಶ್ರೀನಿವಾಸ್ ರೆಡ್ಡಿಿ ಸೇರಿದಂತೆ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಶ್ರೀಮಾತಾ ಲಕ್ಷ್ಮಮ್ಮ ದೇವಿ, ಕಾಳಿಕಾದೇವಿ ಅದ್ಧೂರಿ ರಥೋತ್ಸವ

