ಸುದ್ದಿಮೂಲ ವಾರ್ತೆ ಬೆಂಗಳೂರು, ಜ.28:
ನಮ್ಮ ಸರ್ಕಾರ ಯಾರ ೆನನ್ನೂ ಕದ್ದಾಲಿಸುತ್ತಿಿಲ್ಲ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಹೈಕಮಾಂಡ್ ನಿಂದ ರಾಜ್ಯಪಾಲರಿಗೆ ೆನ್ ಬಂದಿರಬಹುದು ಎಂದು ಹೆಚ್.ಕೆ. ಪಾಟೀಲ್ ಅವರು ಊಹೆ ಮೇಲೆ ತಿಳಿಸಿದ್ದಾರೆ ಅಷ್ಟೆೆ. ನಮ್ಮ ಸರ್ಕಾರ ಕದ್ದಾಲಿಕೆ ಮಾಡುವುದಿಲ್ಲ ಎಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದರು.
ಇಂದು ಮಧ್ಯಾಾಹ್ನ ಪ್ರಾಾರಂಭವಾದ ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಉಪ ನಾಯಕರಾದ ಅರವಿಂದ್ ಬೆಲ್ಲದ್ ಹಾಗೂ ಸುರೇಶ್ ಕುಮಾರ್ ಅವರು ರಾಜ್ಯಪಾಲರ ಹುದ್ದೆಗೆ ಎಲ್ಲರೂ ಗೌರವ ನೀಡಬೇಕು. ಆದರೆ ಸದನದಲ್ಲಿ ರಾಜ್ಯಪಾಲರನ್ನು ಅಗೌರವದಿಂದ ನಡೆಸಿಕೊಳ್ಳಲಾಗಿದೆ. ಹಾಗೂ ಹೆಚ್.ಕೆ.ಪಾಟೀಲ್ ಅವರು ರಾಜ್ಯಪಾಲರಿಗೆ ಕೇಂದ್ರದ ಗೃಹ ಸಚಿವರು ೆನ್ ಮಾಡಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಸರ್ಕಾರ ರಾಜ್ಯಪಾಲರ ೆನ್ ಟ್ಯಾಾಪಿಂಗ್ ಮಾಡಿಸುತ್ತಿಿದೆಯೇ ಅಥವಾ ಕೇಂದ್ರ ಗೃಹ ಸಚಿವರು ೆನ್ ಮಾಡಿದ್ದರು ಎಂಬುದಕ್ಕೆೆ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದರೆ ನಿಮ್ಮ ಹೇಳಿಕೆಯನ್ನು ಹಿಂಪಡೆದು, ಸದನಕ್ಕೆೆ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದರು.
ಈ ವೇಳೆ ಮಾತನಾಡಿದ ಸಿಎಂ, ವಿರೋಧ ಪಕ್ಷದವರಿಗೆ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲು ಇಷ್ಟವಿಲ್ಲ. ಆದ ಕಾರಣ ಸುಮ್ಮನೆ ಇಲ್ಲಸಲ್ಲದ ವಿಷಯಗಳನ್ನು ಪ್ರಸ್ತಾಾಪ ಮಾಡಿ ಕಾಲಹರಣ ಮಾಡುತ್ತಿಿದ್ದಾರೆ ಎಂದರು.
ರಾಜ್ಯಪಾಲರಿಗೆ ಅವಮಾನ ಮಾಡಲೆಂದು ಎಚ್.ಕೆ.ಪಾಟೀಲರು ಎದ್ದು ನಿಂತಿದ್ದಲ್ಲ. ರಾಜ್ಯಪಾಲರು ಬೇಗನೆ ಹೊರಟ ಸಂದರ್ಭದಲ್ಲೂ ಕೂಡ ಉಪಮುಖ್ಯಮಂತ್ರಿಿಗಳು, ಸಭಾಪತಿಗಳು, ಪಾಟೀಲರು ಮತ್ತು ನಾನು ಅವರ ಹಿಂದೆಯೇ ಹೋಗಿ ಅವರನ್ನು ಗೌರವದಿಂದ ಬೀಳ್ಕೊೊಟ್ಟಿಿದ್ದೇವೆ ಎಂದರು.
ವಿರೋಧ ಪಕ್ಷದವರ ಟೀಕೆಗೆ ಪ್ರತಿಕ್ರಿಿಯಿಸಿದ ಹೆಚ್.ಕೆ.ಪಾಟೀಲರು ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳಿಗೆ ಮುಜುಗರ ಉಂಟುಮಾಡುವಂತೆ ಒತ್ತಡವನ್ನು ತರುತ್ತಿಿದೆ. ಈ ವಿಷಯ ಇಂದು ಇಡೀ ದಕ್ಷಿಣ ಭಾರತದಲ್ಲಿ ಚರ್ಚೆಯಾಗುತ್ತಿಿದ್ದು, ಕೇಂದ್ರದ ವರ್ತನೆಯಿಂದ ದಕ್ಷಿಣ ಭಾರತದ ರಾಜ್ಯಗಳು ಬೇಸತ್ತು ಹೋಗಿವೆ ಎಂದರು.
ಭಾಷಣದಲ್ಲಿ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಪ್ರಸ್ತಾಾಪವಾಗಿ ರಾಷ್ಟ್ರಪತಿಗಳಿಂದ ಅಂಕಿತವಾಗಿರುವ ಕಾಯಿದೆಯ ವಿರುದ್ಧ ಬರೆದಿರುವುದನ್ನು ರಾಜ್ಯಪಾಲರು ಹೇಗೆ ಓದಲು ಸಾಧ್ಯ ಎಂದ ಸುರೇಶ್ ಕುಮಾರ್ ಅವರು, 2011 ರಲ್ಲಿ ಹಂಸರಾಜ್ ಭಾರದ್ವಾಾಜ್ ಅವರು ಜಂಟಿ ಅಧಿವೇಶನ ಓದುವಾಗ ವಿರೋಧ ಪಕ್ಷದಲ್ಲಿದ್ದ ಸ್ವತಃ ಸಿದ್ದರಾಮಯ್ಯ ಅವರೇ ರಾಜ್ಯಪಾಲರಿಗೆ ಇದು ಭ್ರಷ್ಟ ಸರ್ಕಾರ ದಯವಿಟ್ಟು ಭಾಷಣವನ್ನು ಓದಬೇಡಿ ಎಂದು ಹೇಳುವ ಮೂಲಕ ರಾಜ್ಯಪಾಲರಿಗೆ ಅವಮಾನ ಮಾಡಿದ್ದರು ಎಂದು ಹೇಳಿದಾಗ, ಮುಖ್ಯಮಂತ್ರಿಿ ಅವರು ಹೌದು ಹೇಳಿದ್ದೆ, ಅಂದಿನ ಸನ್ನಿಿವೇಶವೇ ಬೇರೆಯಾಗಿತ್ತು. ಆಗಿನ ಸರ್ಕಾರದಲ್ಲಿ ಅಕ್ರಮ ಗಣಿಗಾರಿಕೆಯಿಂದ ಭ್ರಷ್ಟಾಾಚಾರ ನಡೆದಿತ್ತು. ಅಂದಿನ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆ ಅವರು ಆ ಬಗ್ಗೆೆ ವರದಿಯನ್ನು ನೀಡಿದ್ದರು. ಹಾಗಾಗಿ ನಾನು ಅಂದಿನ ಸರ್ಕಾರಕ್ಕೆೆ ಭ್ರಷ್ಟ ಸರ್ಕಾರ ಎಂದು ಹೇಳಿದ್ದೆ ಹೊರತು ರಾಜ್ಯಪಾರಿಗೆ ಹೇಳಿದ್ದಲ್ಲವೆಂದರು.
ರಾಷ್ಟ್ರಗೀತೆಯನ್ನು ಹಾಡಿಸದಿದ್ದುದು ಕೂಡ ಆಡಳಿತ ಪಕ್ಷದ ನಿರ್ಲಕ್ಷ್ಯವೆ ಎಂದು ವಿರೋಧ ಪಕ್ಷದವರು ಹೇಳಿದಕ್ಕೆೆ ಪ್ರತಿಕ್ರಿಿಯಿಸಿದ ಪ್ರಿಿಯಾಂಕ ಖರ್ಗೆ ಅವರು ರಾಜ್ಯಪಾಲರು ಒಂದು ನಿಮಿಷದಲ್ಲಿ ಭಾಷಣ ಮುಗಿಸಿ ಹೊರಟರೆ ಹೇಗೆ ತಾನೆ ಬ್ಯಾಾಂಡ್ ನವರಿಗೆ ತಿಳಿಯುತ್ತದೆ. ಭಾಷಣ ಒಂದು ತಾಸು ಆಗಬಹುದೆಂಬ ನಿರೀಕ್ಷೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಆದರೆ ರಾಜ್ಯಪಾಲರಿಗೆ ರಾಷ್ಟ್ರಗೀತೆ ಹಾಡಿದ ನಂತರ ತಾವು ಹೋಗಬೇಕೆಂಬುದು ತಿಳಿದಿರಲಿಲ್ಲವೆ ಎಂದರು.
ಹೀಗೆ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ರಾಜ್ಯಪಾಲರ ನಡವಳಿಕೆ ಬಗ್ಗೆೆ ವಾದವಿವಾದ ನಡೆಯುತ್ತಲೇ ಇದ್ದುದರಿಂದ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಿದ ಸಭಾಧ್ಯಕ್ಷರು ಆಡಳಿತ ಮತ್ತು ವಿರೋಧ ಪಕ್ಷದವರೊಂದಿಗೆ ಸಭೆಯನ್ನು ನಡೆಸಿದ ನಂತರ ಸದನಯನ್ನು ಆರಂಭಿಸಿದ ವೇಳೆ ರಾಜ್ಯಪಾಲರ ನಡವಳಿಕೆ ಬಗ್ಗೆೆ ಹೀಗೆ ವಾದ ವಿವಾದ ಮಾಡುವುದು ಸದನದ ಘನತೆಗೆ ತಕ್ಕುದಲ್ಲ. ಇದರಿಂದ ಸಾರ್ವಜನಿಕರಿಗೆ ತಪ್ಪುು ಸಂದೇಶ ಹೋಗುತ್ತದೆ. ಸದನದ ಸದಸ್ಯರು ತಮ್ಮ ಘನತೆಗೆ ತಕ್ಕಂತೆ ಆತ್ಮ ವಿಮರ್ಶೆ ಮಾಡಿಕೊಂಡು ಸದನದಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು. ಆದ್ದರಿಂದ ಇನ್ನು ಮುಂದೆ ಯಾವ ಸದಸ್ಯರು ರಾಜ್ಯಪಾಲರ ಬಗ್ಗೆೆ ಮತ್ತು ಅವರ ನಡವಳಿಕೆ ಬಗ್ಗೆೆ ಮಾತನಾಡಬಾರದೆಂದು ತೀರ್ಪನ್ನು ಮಾಡಿದರು.
ನಂತರ ಕಲಾಪದಲ್ಲಿ ಗಮನ ಸೆಳೆಯುವ ಸೂಚನೆಯನ್ನು ನಡೆಸಿದ ನಂತರ ವಿಧಾನಸಭಾ ಕಲಾಪವನ್ನು ನಾಳೆ ಬೆಳಿಗ್ಗೆೆ 9 ಗಂಟೆಗೆ ಸಭಾಧ್ಯಕ್ಷರು ಮುಂದೂಡಿದರು.
ಸದನಕ್ಕೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸರ್ಕಾರ ಯಾರ ೆನ್ ಟ್ಯಾಾಪ್ ಮಾಡುವುದಿಲ್ಲ

