ಸುದ್ದಿಮೂಲ ವಾರ್ತೆ ಬೆಂಗಳೂರು, ಜ.28:
ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭೂಮಿಯು ಸವಳು-ಜವಳು ಆಗುತ್ತಿಿರುವುದು ಸರ್ಕಾರದ ಗಮನಕ್ಕೆೆ ಬಂದಿದೆ. ಈ ಸವಳು-ಜವಳನ್ನು ತಪ್ಪಿಿಸಲು ಮುಂದಿನ ಬಜೆಟ್ನಲ್ಲಿ ಹೆಚ್ಚಿಿನ ಅನುದಾನ ಒದಗಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಾಮಿ ಹೇಳಿದರು.
ವಿಧಾನಸಭೆಯ ಪ್ರಶ್ನೋೋತ್ತರ ಅವಧಿಯಲ್ಲಿ ಕಾಂಗ್ರೆೆಸ್ನ ಧರ್ಮಗೌಡ ಕಾಗೆ, ಬಿಜೆಪಿಯ ಲಕ್ಷ್ಮಣ ಸವದಿ ಇವರ ಪ್ರಶ್ನೆೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸುಮಾರು 77,646 ಹೆಕ್ಟೆೆರ್ ಮಳೆಯಾಶ್ರಿತ ಭೂಮಿ ಸವಳು-ಜವಳು ಬಾಧಿತವಾಗಿರುತ್ತದೆ. ಇದರಲ್ಲಿ ಉತ್ತರ ಕರ್ನಾಟಕದ ಒಟ್ಟು 13 ಜಿಲ್ಲೆಗಳಲ್ಲಿ ಸವಳು- ಜವಳು ಬಾಧಿತ ಪ್ರದೇಶ ಸುಮಾರು 56,621 ಹೆಕ್ಟೇರ್ಗಳಿದ್ದು, ಈ ಸವಳು-ಜವಳನ್ನು ಉಪಚರಿಸಲು ಮುಂದಿನ ಬಜೆಟ್ನಲ್ಲಿ ಹೆಚ್ಚಿಿನ ಅನುದಾನ ಒದಗಿಸುವ ಚಿಂತನೆ ಇದೆ ಎಂದರು.
ಮಳೆಯಾಶ್ರಿತ ಪ್ರದೇಶದಲ್ಲಿ ಸವಳು-ಜವಳನ್ನು ಉಪಚರಿಸುವ ಕೆಲಸವನ್ನು ಕೃಷಿ ಇಲಾಖೆ ಮಾಡುತ್ತದೆ. ನೀರಾವರಿ ಪ್ರದೇಶದಲ್ಲಿನ ಸವಳು-ಜವಳು ಉಪಚಾರ ನೀರಾವರಿ ಇಲಾಖೆಗೆ ಬರುತ್ತದೆ. ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಿಗೆ ಜವಳು-ಜವಳು ಉಪಚರಿಸಲು ಹೆಚ್ಚಿಿನ ಅನುದಾನ ನೀಡುವಂತೆ ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರ ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇನ್ನು ಹೆಚ್ಚಿಿನ ಅನುದಾನ ಅಗತ್ಯವಿದ್ದು, ಮುಂದಿನ ಬಜೆಟ್ನಲ್ಲಿ ಹೆಚ್ಚಿಿನ ಅನುದಾನ ಒದಗಿಸಲಾಗುವುದು ಎಂದು ಅವರು ಹೇಳಿದರು.
ಜಲಾಯನ ಅಭಿವೃದ್ಧಿಿ ಇಲಾಖೆಯಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ-ಸಮಸ್ಯಾಾತ್ಮಕ ಮಣ್ಣುಗಳ ಸುಧಾರಣೆ ಕಾರ್ಯಕ್ರಮದಡಿ 2016-17ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಒಟ್ಟು 31.43 ಕೋಟಿ ರೂ.ಗಳ ವೆಚ್ಚದಲ್ಲಿ ಸವಳು- ಜವಳು ಬಾಧಿತ ಪ್ರದೇಶಗಳಲ್ಲಿ ಅಂತರ್ ಬಸಿ ಕಾಲುವೆ ನಿರ್ಮಾಣ ಮೂಲಕ ಮಣ್ಣಿಿನ ಸುಧಾರಣೆ ಉಪಚಾರವನ್ನು ಒಟ್ಟು 4208 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿ, ಈ ಯೋಜನೆಯಡಿ 2025-26ನೇ ಸಾಲಿನಲ್ಲಿ 4.1 ಕೋಟಿಗಳ ಹೆಚ್ಚುವರಿ ಅನುದಾನಕ್ಕೆೆ ಅನುಮೋದನೆ ದೊರೆತಿದ್ದು, ಹೆಚ್ಚಿಿನ ಅನುದಾವನ್ನು ಕೇಂದ್ರಿಿದಿಂದ ನಿರೀಕ್ಷಿಸಲಾಗಿದೆ ಎಂದರು.
ಇದಕ್ಕೂ ಮೊದಲು ಪ್ರಶ್ನೆೆ ಕೇಳಿದ್ದ ಧರ್ಮೇಗೌಡ ಕಾಗೆ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬೆಳಗಾವಿ ಜಿಲ್ಲೆಯ ಕೃಷ್ಣ ಜಲಾನಯನ ಪ್ರದೇಶದಲ್ಲಿ ಸವಳು- ಜವಳುನಿಂದ ಮಣ್ಣಿಿನ ಲವತ್ತತೆ ಹಾಳಾಗಿ ಜನ ಬದುಕದಂತಹ ಪರಿಸ್ಥಿಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸಲಿದ್ದರೆ ಜನ ಬದುಕಲು ಸಾಧ್ಯವಿಲ್ಲ. ಹೆಚ್ಚಿಿನ ಅನುದಾನ ನೀಡಿ ಸವಳು- ಜವಳು ಉಪಚರಿಸಿ ಎಂದು ಒತ್ತಾಾಯಿಸಿದರು.
ರಾಜ್ಯದಲ್ಲಿ 77,646 ಹೆಕ್ಟೆರ್ ಮಳೆಯಾಶ್ರಿತ ಭೂಮಿ ಸವಳು-ಜವಳು ಬಾಧಿತ ಭೂಮಿ ಸವಳು ತಪ್ಪಿಸಲು ಒತ್ತು: ಚಲುವರಾಯಸ್ವಾಮಿ

