ಸುದ್ದಿಮೂಲ ವಾರ್ತೆ ಬೆಂಗಳೂರು, ಜ.28
ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು 2.0 ತಂತ್ರಾಾಂಶದ ಸಮಸ್ಯೆೆಗಳನ್ನು ಇನ್ನೊೊಂದು ತಿಂಗಳಲ್ಲಿ ಬಗೆಹರಿಸಲಾಗುವುದು ಎಂದು ಗ್ರಾಾಮೀಣಾಭಿವೃದ್ಧಿಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಿಯಾಂಕ ಖರ್ಗೆ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋೋತ್ತರ ಅವಧಿಯಲ್ಲಿ ಬಿಜೆಪಿಯ ಕಿರಣಕುಮಾರ್ ಕೂಡ್ಲಿಿ ಅವರು ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಹೊಸದಾಗಿ ಇ-ಸ್ವತ್ತು ತಂತ್ರಾಾಂಶವನ್ನು ಅಳವಡಿಸಲಾಗಿದೆ. ಈ ತಂತ್ರಾಾಂಶದಲ್ಲಿ ಲೋಪಗಳಾಗಿವೆ. ಖಾತಾ 11ಬಿ,. 11 ಎ ಪರಿವರ್ತನೆ ಮಾಡಿಕೊಳ್ಳಲು ತೊಂದರೆಯಾಗಿದೆ. ಇದನ್ನು ಕೂಡಲೆ ಪರಿಹರಿಸಿ ಎಂದು ಒತ್ತಾಾಯಿಸಿದರು.
ಸದಸ್ಯರ ಪ್ರಶ್ನೆೆಗೆ ಉತ್ತರಿಸಿದ ಸಚಿವ ಪ್ರಿಿಯಾಂಕ ಖರ್ಗೆ,ಗ್ರಾಾಮೀಣಾಭಿವೃದ್ಧಿಿ ಇಲಾಖೆಯ ಇ-ಸ್ವತ್ತಿಿನಲ್ಲಿ ಸುಧಾರಣೆ, ಸಬಲೀಕರಣ ಮತ್ತು ಸರಳೀಕರಣವನ್ನು ಗಮನದಲ್ಲಿಟ್ಟುಕೊಂಡು ಇ-ಸ್ವತ್ತು 2.0 ತಂತ್ರಾಾಂಶವನ್ನು ಅಳವಡಿಸಲಾಗಿದೆ. ಇದರಲ್ಲಿ ಕೆಲ ಸಮಸ್ಯೆೆಗಳಿದ್ದು ಅದನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ವಹಿಸಲಾಗಿದೆ ಇನ್ನೊೊಂದು ತಿಂಗಳಲ್ಲಿ ಎಲ್ಲ ಸಮಸ್ಯೆೆಗಳನ್ನು ಬಗೆಹರಿಸಿ ಸಾರ್ವಜನಿಕರು ಮತ್ತು ಬಳಕೆದಾರರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಳೆದ ಡಿಸೆಂಬರ್ 1ರಿಂದ ಇ-ಸ್ವತ್ತು2.0 ತಂತ್ರಾಾಂಶವನ್ನು ಜಾರಿ ಮಾಡಿದ್ದೆೆವು. ಹೊಸ ತಂತ್ರಜ್ಞಾನ ಬಳಸಿದಾಗ ಲೋಪವಾಗುವುದು ಸಹಜ. ಈ ಲೋಪಗಳನ್ನು ಪತ್ರಿಿಕಾ ಪ್ರಕಟಣೆ ಮೂಲಕ ಜನರ ಗಮನಕ್ಕೆೆ ತಂದಿದ್ದೇವೆ. ಇದನ್ನು ಎನ್ಐಸಿ ಮೂಲಕವೇ ಸರಿಪಡಿಸಬೇಕಾಗಿದ್ದು, ಎನ್ಐಸಿಗೆ ಅಗತ್ಯವಾದ ಹಣ ಬಿಡುಗಡೆ ಮಾಡಿ ಆದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸುವಂತೆ ಕೇಂದ್ರ ಐಟಿ ಸಚಿವರಿಗೆ ಪತ್ರ ಬರೆದಿದ್ದೇನೆ. ಎನ್ಐಸಿ ಈಗ ಹೆಚ್ಚಿಿನ ಮಾನವ ಸಂಪನ್ಮೂಲಗಳನ್ನು ಒದಗಿಸಿ ಈ ತಂತ್ರಾಾಂಶದ ಲೋಪವನ್ನು ಸರಿಪಡಿಸುವ ಕೆಲಸ ಮಾಡುತ್ತಿಿದೆ. ಆದಷ್ಟು ಬೇಗೆ ಎಲ್ಲವೂ ಬಗೆಹರಿಯಲಿದೆ ಎಂದು ಸಚಿವ ಪ್ರಿಿಯಾಂಕ ಖರ್ಗೆ ಹೇಳಿದರು.
ಇ-ಸ್ವತ್ತು 2.0 ತಂತ್ರಾಾಂಶದ ಸಮಸ್ಯೆ ಶೀಘ್ರ ಪರಿಹಾರ: ಖರ್ಗೆ

