ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿರ್ಲಕ್ಷತನ ತೋರಿಸಿದ ಜಿಲ್ಲಾಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಮತ್ತು ತಹಶೀಲ್ದಾಾರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡಿಸಿ ಜ.31 ಬೈಕ್ ರ್ಯಾಾಲಿ ಪ್ರತಿಭಟನೆ ನಡೆಸಲಾಗುವುದ ಎಂದು ಸಮಾಜದ ಜಿಲ್ಲಾಾಧ್ಯಕ್ಷ ನಾರಾಯಣಸ್ವಾಾಮಿ ಗಬ್ಬೂರು ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸರ್ಕಾರದಿಂದಲೇ ಆಚರಿಸುವ ತಮ್ಮ ಸಮಾಜದ ಹಾಗೂ ಶರಣ ಪರಂಪರೆಯ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಗೆ ಬಾರದೆ ಬೇಜವಾಬ್ದಾಾರಿ ತೋರಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಈಗಾಗಲೇ ಮನವಿ ಸಲ್ಲಿಸಿದರೂ ನಿರ್ಲಕ್ಷಿಿಸಿದ್ದಕ್ಕೆೆ ಆಕ್ರೋೋಶ ವ್ಯಕ್ತಪಡಿಸಿದರು.
ಸಮಾಜದವರು ಅತಿ ವಿಜೃಂಭಣೆಯಿಂದ ಭಾವಚಿತ್ರದ ಮೆರವಣಿಗೆ ಮೂಲಕ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರಕ್ಕೆೆ ಬಂದು ಕಾದರೂ ಯಾವ ಅಧಿಕಾರಿಗಳು ಬರಲೇ ಇಲ್ಲಘಿ. ಜನಪ್ರತಿನಿಧಿಗಳೂ ಗೈರಾಗಿದ್ದರು ಸರ್ಕಾರಿ ಕಚೇರಿಗಳಲ್ಲಿ ಪೂಜೆ ಸಲ್ಲಿಸಿಲ್ಲ ಎಂದು ಆರೋಪಿಸಿದರು.
ಹೀಗಾಗಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಅಮಾನತಿಗೆ ಒತ್ತಾಾಯಿಸಿ ಜ.31ರಂದು ಶ್ರೀ ಸಿದ್ದರಾಮೇಶ್ವರ ವೃತ್ತದಿಂದ ಬೈಕ್ ರ್ಯಾಾಲಿಯಲ್ಲಿ ಸಮಾಜದ ಯುವಕರು, ಜನರು ಪ್ರಮುಖ ರಸ್ತೆೆಯ ಮೂಲಕ ಜಿಲ್ಲಾಾಧಿಕಾರಿ ಕಚೇರಿಯವೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಈ ಹೋರಾಟ ಲಿಖಿತ ರೂಪದಲ್ಲಿ ಆದೇಶ ನೀಡುವವರೆಗೆ ಹಂತಹಂತವಾಗಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ನಾಗರಾಜ, ಶಿವರಾಜ, ಲಕ್ಷ್ಮಣ, ಈರಣ್ಣಘಿ, ಸತ್ಯರೆಡ್ಡಿಿ ಇದ್ದರು.

