ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ ನಡೆಯಿತು.
ಇಂದು ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆೆಯಲ್ಲಿ ಜನನವಾದ ಹೆಣ್ಣು ಮಕ್ಕಳಿಗೆ ಹೊಸ ಉಡುಪು ಹಾಗೂ ಸಿಹಿ ಪದಾರ್ಥ ತಾಯಂದಿರಿಗೆ ವಿತರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಬಾಬು, ಹೆರಿಗೆಯು ಕುಟುಂಬದ ಆರ್ಥಿಕ ತೊಂದರೆಗೆ ಕಾರಣವಾಗುತ್ತಿಿದೆ ಎಂಬ ನಂಬಿಕೆ ದೂರ ಮಾಡಲು ಮತ್ತು ಮಗುವಿನ ಜನನದ ನಂತರ ಹೆಣ್ಣು ಗಂಡು ಎಂಬ ಭೇದ ತೊಲಗಿಸಲು ಮಹಿಳೆಯ ಆರೋಗ್ಯದ ದೃಷ್ಟಿಿಯಿಂದ ರಾಜ್ಯ ಸರ್ಕಾರ ಸುಸಜ್ಜಿಿ ತ ಕಟ್ಟಡ, ಅತ್ಯಾಾಧುನಿಕ ಪರಿಕರಗಳು, ತಜ್ಞವೈದ್ಯರ ನೇಮಕದೊಂದಿಗೆ ತಾಯಿ ಮಕ್ಕಳ ಆಸ್ಪತ್ರೆೆಗಳನ್ನು ಜಿಲ್ಲೆಯ ರಾಯಚೂರು, ಮಾನ್ವಿಿ, ಸಿಂಧನೂರುಗಳಲ್ಲಿ ಜನಪ್ರತಿನಿಧಿಗಳ ಬೆಂಬಲ, ಜಿಲ್ಲಾಡಳಿತ ಮಾರ್ಗದರ್ಶನದಡಿ ಈಗಾಗಲೇ ಆರಂಭಿಸಲಾಗಿದೆ ಎಂದರು.
ಹೆರಿಗೆಗೆ ಆಗಮಿಸುವ ಗರ್ಭಿಣಿಯು ಜನನಿ ಶಿಶು ಸುರಕ್ಷಾ ಯೋಜನೆ, ಸುಮನ್, ಲಕ್ಷ್ಯ ಕಾರ್ಯಕ್ರಮಗಳಡಿ ಸುರಕ್ಷಿತ ಹೆರಿಗೆಯೊಂದಿಗೆ ಸಂತಸದಿಂದ ಅದ ನಗುಮಗು ವಾಹನದಲ್ಲಿ ಮನೆಗೆ ಮರಳುವ ಸುಂದರ ಕ್ಷಣಗಳನ್ನು ಹಂಚಿಕೊಳ್ಳಲಾಗುತ್ತಿಿದೆ. ಕುಟುಂಬದಲ್ಲಿ ಹೆಣ್ಣು ಎಂಬ ಭೇದ ಮಾಡದೆ ಮಗಳಿಗೆ ಆರೋಗ್ಯ ಇಲಾಖೆಯಡಿ ಬಾಲ್ಯದಲ್ಲಿಯೇ ಸಂಪೂರ್ಣ ಲಸಿಕೆ, ಹದಿಹರೆಯದಲ್ಲಿ ರಕ್ತಹೀನತೆಯ ವಿಷಚಕ್ರ ಅಳಿಸಲು ಅನೀಮಿಯಾ ಮುಕ್ತ ಪೌಷ್ಟಿಿಕ ಕರ್ನಾಟಕ ಯೋಜನೆಯಡಿ ಕಬ್ಬಿಿಣಾಂಶ ಮಾತ್ರೆೆಗಳ ಒದಗಿಸುವಿಕೆ, ವೈಯಕ್ತಿಿಕ ಆರೋಗ್ಯಕ್ಕಾಾಗಿ ಶುಚಿ ನ್ಯಾಾಪ್ಕಿಿನ್ಗಳ ಪೂರೈಕೆ, ಸ್ನೇಹ ಕ್ಲಿಿನಿಕ್ ಮೂಲಕ ಹದಿಹರೆಯದ ಸಮಸ್ಯೆೆಗಳಿಗೆ ಸ್ಪಂದನೆ, ಮದುವೆಯನ್ನು 18 ವರ್ಷ ತುಂಬಿದ ನಂತರ, 20 ವರ್ಷಗಳ ನಂತರ ಗರ್ಭವತಿಯಾಗುವಿಕೆಯ ಮಹತ್ವ ಕುರಿತು ಜಾಗೃತಿ ನೀಡಲಾಗುತ್ತಿಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಸ್ಕ್ಯಾಾನಿಂಗ್ ಸೆಂಟರ್ಗಳ ನಿಗಾವಣೆಯೊಂದಿಗೆ, ಹೆಣ್ಣು ಭ್ರೂಣ ಹತ್ಯೆೆ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯು ನಿರಂತರ ಜಾಗೃತಿ ಮೂಲಕ, ಪುರುಷ, ಸೀ ಅನುಪಾತದ ಸಮ ಪ್ರಮಾಣಕ್ಕಾಾಗಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆೆ ಕಾಯ್ದೆೆ 1994ಕ್ಕೆೆ ಬಲ ತುಂಬಿದೆ. ಭ್ರೂಣ ಲಿಂಗ ಪತ್ತೆೆಗೆ ಮುಂದಾದವರ ಬಗ್ಗೆೆ ಮಾಹಿತಿ ಕೊಟ್ಟವರಿಗೆ ನೀಡುವ ಬಹುಮಾನವನ್ನು ರೂ 50 ಲಕ್ಷದಿಂದ ರೂ 1 ಲಕ್ಷಕ್ಕೆೆ ಏರಿಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಎನ್ೆರ್ಸಮೆಂಟ್ ಅಧಿಕಾರಿ ಡಾ.ಶಿವಕುಮಾರ ನಾರಾ, ತಾಲೂಕ ಆರೋಗ್ಯಾಾಧಿಕಾರಿ ಡಾ ಅಮೃತ ಹುಕ್ಕೇರಿ, ಎಂಸಿಎಚ್ ಆಡಳಿತ ವೈದ್ಯಾಾಧಿಕಾರಿ ಡಾ ಪ್ರಜ್ವಲಕುಮಾರ, ಪ್ರಸೂತಿ ತಜ್ಞೆ ಡಾ.ಶಾಲಿನಿ, ಅರವಳಿಕೆ ತಜ್ಞ ಡಾ ಸರ್ರಾಜ್ ಖಾಜಿ, ಮಕ್ಕಳ ತಜ್ಞ ಡಾ ಮೋಹಿಜಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸ್ಸಯ್ಯ, ಮುಖ್ಯ ಶುಶ್ರೂಷಣಾಧಿಕಾರಿ ಸಲೋಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ನಾಗರಾಜ್, ಹಿರಿಯ ಹೆಚ್ಐಓ ಸುರೇಶ, ಈರಮ್ಮ, ಅಮರೇಶ ಗಡ್ಡಿಿ, ಸಂಧ್ಯಾಾ ಸೇರಿದಂತೆ ತಾಯಂದಿರು, ಸಾರ್ವಜನಿಕರು ಉಪಸ್ಥಿಿತರಿದ್ದರು.
ರಾಷ್ಟ್ರೀಯ ಹೆಣ್ಣು ಮಗು ಜಾಗೃತಿ ದಿನ ಮಕ್ಕಳ, ಮಹಿಳೆಯರ ಆರೋಗ್ಯಕ್ಕೆ ಮೊದಲ ಆದ್ಯತೆ – ಡಿಎಚ್ಓ

