ಸುದ್ದಿಮೂಲ ವಾರ್ತೆ ಸಿಂಧನೂರು, ಜ.28:
ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ಜನರ ಉದ್ಯೋೋಗ ಕಸಿಯುವ ವಿಬಿ ರಾಮಜಿ-2025 ಕಾಯ್ದೆೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಕೂಡಲೇ ಈ ಕಾಯ್ದೆೆಗಳನ್ನು ವಾಪಸ್ ಪಡೆಯಬೇಕು ಎಂದು ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಆಗ್ರಹಿಸಿದರು.
ಕೇಂದ್ರ ಸರಕಾರದ ರೈತ-ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ, ಜೆಸಿಟಿಯು ೆ.12ರಂದು ರಾಷ್ಟ್ರವ್ಯಾಾಪಿ ಕರೆ ನೀಡಿರುವ ಮುಷ್ಕರದ ಪ್ರಯುಕ್ತ ಎಐಸಿಸಿಟಿಯುನಿಂದ ೆ.1 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಕಾರ್ಮಿಕರ ಸಮಾವೇಶ ಹಮ್ಮಿಿಕೊಳ್ಳಲಾಗಿದ್ದು, ಈ ಹಿನ್ನೆೆಲೆಯಲ್ಲಿ ತಾಲೂಕಿನ ತುರವಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬುಧವಾರ ಪ್ರಚಾರ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರ ಶಾಸನಬದ್ಧ ಹಕ್ಕುಗಳನ್ನು ಕಿತ್ತುಕೊಂಡಿದ್ದಲ್ಲದೇ, ಮನರೇಗಾ ಯೋಜನೆಯ ಹೆಸರನ್ನು ವಿಬಿ ರಾಮಜಿ -2025 ಎಂದು ಬದಲಿಸಿ, ಇಡೀ ಕಾಯ್ದೆೆಯ ಮೂಲ ಸ್ವರೂಪಕ್ಕೆೆ ಧಕ್ಕೆೆ ತಂದು ದುಡಿಯುವ ಜನರ ಉದ್ಯೋೋಗದ ಹಕ್ಕನ್ನು ಕಸಿದುಕೊಂಡಿದೆ. ಕಾರ್ಮಿಕರಿಗೆ ಇರುವ ಸಂಘ ಕಟ್ಟುವ ಹಕ್ಕು, ಅನ್ಯಾಾಯದ ವಿರುದ್ದ ಪ್ರತಿಭಟಿಸುವ ಹಕ್ಕು, ನ್ಯಾಾಯ ವೇತನ, ಸಮಾನ ಕೆಲಸಕ್ಕೆೆ ಸಮಾನ ವೇತನ, ಕೆಲಸದ ಮತ್ತು ಶಿಕ್ಷಣದ ಹಕ್ಕು ಮೊದಲಾದ ಸಂವಿಧಾನ ಬದ್ದ ಹಕ್ಕುಗಳನ್ನೇ ಇಲ್ಲವಾಗಿಸಿದೆ ಎಂದು ಟೀಕಿಸಿದರು.
ಎಐಸಿಸಿಟಿಯು ಜಿಲ್ಲಾಾ ಅಧ್ಯಕ್ಷ ಅಜೀಜ್ ಜಾಗೀದಾರ್ ಮಾತನಾಡಿ, ಕಾರ್ಮಿಕರು ತ್ಯಾಾಗ ಬಲಿದಾನಗಳ ಹೋರಾಟಗಳಿಂದ ಪಡೆದ ಕಾನೂನುಗಳನ್ನು ರದ್ದುಪಡಿಸಿದ ಮೋದಿ ಸರಕಾರ ಮಾಲಕರ ಪರವಾದ ಸಂಹಿತೆಗಳನ್ನು ಜಾರಿ ಮಾಡಿದೆ. ಈ ಸಂಹಿತೆಗಳನ್ನು ಹಿಂಪಡೆಯುವವರೆಗೆ, ರದ್ದುಪಡಿಸಿದ ನಮ್ಮ ಹಕ್ಕುಗಳ 29 ಕಾನೂನುಗಳ ಮರು ಸ್ಥಾಾಪಿಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಉದ್ಭಾಾಳ, ಕುಮಾರಪ್ಪ, ಲಿಂಗಪ್ಪ ಬೇರಿಗಿ, ರಾಮಣ್ಣ, ಅಂದಪ್ಪ, ಶರಣಪ್ಪ ಬಾರೇಕೇರ್, ರಾಮಣ್ಣ, ದ್ಯಾಾಮಣ್ಣ ಇತರರು ಇದ್ದರು.
ಎಐಸಿಸಿಟಿಯು ಮುಖಂಡ ನಾಗರಾಜ್ ಪೂಜಾರ್ ಆಗ್ರಹ ವಿಬಿಜಿ ರಾಮಜಿ ಕಾಯ್ದೆ ಕೇಂದ್ರ ವಾಪಸ್ ಪಡೆಯಲಿ

