ಸುದ್ದಿಮೂಲ ವಾರ್ತೆ ಸಿಂಧನೂರು, ಜ.28:
ನಗರದ ಜನತಾ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷರಾಗಿ ಅಭಿಷೇಕ ಸಿಂಗನಾಳ ಹಾಗೂ ಉಪಾಧ್ಯಕ್ಷರಾಗಿ ಎಸ್.ಶರಣೇಗೌಡ ಮತ್ತೊೊಮ್ಮೆೆ ಅವಿರೋಧವಾಗಿ ಆಯ್ಕೆೆಯಾದರು.
ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾಾನಕ್ಕೆೆ ಅಭಿಷೇಕ ಸಿಂಗನಾಳ ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ಎಸ್.ಶರಣೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವರ ಆಯ್ಕೆೆಯನ್ನು ಚುನಾವಣಾಧಿಕಾರಿ ಶಿವಪುತ್ರಪ್ಪ ಅಧಿಕೃತವಾಗಿ ಘೋಷಣೆ ಮಾಡಿದರು.
ಜ.12 ರಂದು ಆಡಳಿತ ಮಂಡಳಿ ನಿರ್ದೇಶಕರ ಸ್ಥಾಾನಗಳಿಗೆ ಚುನಾವಣೆ ನಡೆದಿತ್ತು. ಅಭಿಷೇಕ ಸಿಂಗನಾಳ, ಎಸ್.ಶರಣೇಗೌಡ, ಆರ್.ಸತ್ಯನಾರಾಯಣ, ವೀರಭದ್ರಗೌಡ, ಮಲ್ಲಿಕಾರ್ಜುನ, ಶಿವಶರಣ ಮಸ್ಕಿಿ, ಬಾಲಪ್ಪ, ಇಂದಿರಾ ಪಾಟೀಲ್, ಸವಿತಾ ಅವಿರೋಧವಾಗಿ ಆಯ್ಕೆೆಯಾಗಿದ್ದರು.
ಮಾದರಿಯಾಗಲಿ : ಜನತಾ ಸೌಹಾರ್ದ ಸಹಕಾರಿಯು ಮಾದರಿ ಸಹಕಾರಿ ಸಂಘವಾಗಿ ಬೆಳೆಯುತ್ತಿಿದೆ ಎಂದು ಸುಕೋ ಬ್ಯಾಾಂಕಿನ ಸಂಸ್ಥಾಾಪಕ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿಿ ಸಲಹೆ ನೀಡಿದರು.
ಜನತಾ ಸೌಹಾರ್ದ ಸಹಕಾರಿಯಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಅಭಿನಂದಿಸಿ ಅವರು ಮಾತನಾಡಿದರು. ಗ್ರಾಾಹಕರ ಅಭಿರುಚಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು. ಉತ್ತಮ ವ್ಯವಹಾರ ನಡೆಸುತ್ತಾಾ ಸದಸ್ಯರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಿಸಿದೆ. ಸಹಕಾರಿಯು ಹಣಕಾಸಿನ ವ್ಯವಹಾರದ ಜೊತೆಗೆ ಸಮಾಜಮುಖಿ ಸೇವೆಗಳನ್ನು ಮಾಡುತ್ತಿಿರುವದು ಶ್ಲಾಾಘನೀಯ ಎಂದ ಅವರು, ಹಿಂದೆಯೂ ಅಧ್ಯಕ್ಷರಾಗಿದ್ದ ಅಭಿಷೇಕ ಸಿಂಗನಾಳ ಹಾಗೂ ಉಪಾಧ್ಯಕ್ಷರಾಗಿದ್ದ ಎಸ್.ಶರಣೇಗೌಡ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಅತ್ಯುತ್ತಮ ನಿರ್ಣಯಗಳು ಸಹಕಾರಿಯ ಬೆಳವಣಿಗೆಗೆ ಸಹಕಾರಿಯಾಗಿದ್ದವು. ಮುಂದೆಯೂ ಜವಾಬ್ದಾಾರಿಗಳನ್ನು ಅರಿತು ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಹಕಾರಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಎಂ. ಹಾಗೂ ಇತರರು ಇದ್ದರು.
ಜನತಾ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಅಭಿಷೇಕ ಸಿಂಗನಾಳ, ಉಪಾಧ್ಯಕ್ಷರಾಗಿ ಎಸ್.ಶರಣೇಗೌಡ ಆಯ್ಕೆ

