ಸುದ್ದಿಮೂಲ ವಾರ್ತೆ ಬೀದರ್, ಜ.28:
ಮಹಾರಾಷ್ಟ್ರದ ರಾಜಕೀಯ ಧುರೀಣ, ಉಪಮುಖ್ಯ ಮಂತ್ರಿಿಗಳಾಗಿ ಸೇವೆ ಸಲ್ಲಿಸಿದ್ದ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನವಾಗಿದ್ದು, ದೇಶಕ್ಕೆೆ ತುಂಬಲಾರದ ನಷ್ಟವಾಗಿದೆ, ಮಹಾರಾಷ್ಟ್ರ ರಾಜ್ಯಕ್ಕೆೆ 6 ಬಾರಿ ಉಪಮುಖ್ಯಮಂತ್ರಿಿಯಾಗಿ ಸೇವೆ ಸಲ್ಲಿಸಿದ್ದು, ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖುಬಾ ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಜಿತ್ ಪವಾರ್ ಅವರು ನೇರ ನುಡಿ ಮತ್ತು ಪ್ರ್ಯಾಾಕ್ಟಿಿಕಲ್ ಆಗಿ ವಿಚಾರ ಮಾಡುವ ರಾಜಕಾರಣಿಯಾಗಿದ್ದರು. ಬೆಳಗಾವಿ ವಿಷಯದಲ್ಲಿ ಒಮ್ಮೆೆಯೂ ಅವರು ಕರ್ನಾಟಕದ ವಿರುದ್ದ ಮಾತನಾಡಿರಲಿಲ್ಲಘಿ, ಅವರ ಪ್ರಬುದ್ಧತೆ ಮತ್ತು ಪ್ರ್ಯಾಾಕ್ಟಿಿಕಲ್ ವ್ಯಕ್ತಿಿತ್ವಕ್ಕೆೆ ಒಂದು ಉದಾಹರಣೆಯಾಗಿದೆ ಎಂದು ಕೊಂಡಾಡಿದ್ದಾರೆ.
ದೇವರು ದಿ. ಅಜಿತ್ ಪವಾರ್ ಮತ್ತು ಅವರೊಂದಿಗೆ ದುರ್ಮರಣಕ್ಕೀಡಾದ ಎಲ್ಲರ ಆತ್ಮಕ್ಕೆೆ ಚಿರಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೆ, ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಈ ನೋವು ತಡೆಯುವ ಶಕ್ತಿಿ ಕರುಣಿಸಲೆಂದು ಪ್ರಾಾರ್ಥಿಸುವುದಾಗಿ ಪತ್ರಿಿಕಾ ಪ್ರಕಟಣೆ ಮೂಲಕ ಕಂಬನಿ ಮಿಡಿದಿದ್ದಾರೆ.
ಅಜಿತ್ ಸಾವು ಆಘಾತ ತಂದಿದೆ : ಖುಬಾ

