ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ರಾಯಚೂರು ತಾಲೂಕು ಸೇರಿ ಜಿಲ್ಲೆೆಯಲ್ಲಿ ಪರಿಸರ ವಿನಾಶಕಾರಿ, ಜೀವ ವಿರೋಧಿ ಅಣು ವಿದ್ಯುತ್ ಸ್ಥಾಾವರ ಘಟಕ ಸ್ಥಾಾಪಿಸುವುದಕ್ಕೆೆ ವಿರೋಧಿಸಿ ರಾಯಚೂರು ಜಿಲ್ಲಾ ನಾಗರಿಕರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂದು ಜಿಲ್ಲಾಾಡಳಿತ ಭವನದ ಮುಂದೆ ವಿವಿಧ ಪ್ರಗತಿಪ ರ ಸಂಘಟನೆಗಳ ಪ್ರತಿನಿಧಿಗಳನ್ನೊೊಳಗೊಂಡ ನಾಗರಿಕರ ವೇದಿಕೆ ಅಣು ವಿದ್ಯುತ್ ಘಟಕ ಸ್ಥಾಾಪಿಸಲು ಆಕ್ಷೇಪಿಸಿ ಆಕ್ರೋೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು ಮಾತನಾಡಿ, ಯಾವುದೇ ಕಾರಣಕ್ಕೂ ಜಿಲ್ಲಾ ಆಡಳಿತವಾಗಲಿ, ಆರ್ಟಿಪಿಎಸ್ ನ ಅಧಿಕಾರಿಗಳಾಗಲಿ ಅಣು ವಿದ್ಯುತ್ ಸ್ಥಾಾವರಕ್ಕೆೆ ಸಂಬಂಧಪಟ್ಟಂತೆ ಪ್ರಾಾಥಮಿಕ ಹಂತದಲ್ಲಿಯೇ ಯಾವುದೇ ಅಧಿಕಾರಿಗಳಿಗೆ ಸ್ಥಳ ವೀಕ್ಷಣೆಗೆ ಬಂದರೆ ಅವಕಾಶವನ್ನೇ ನೀಡಬಾರದು ಎಂದು ಎಚ್ಚರಿಕೆ ನೀಡಲಾಯಿತು.
ಇದೊಂದು ಜೀವ ಹಾನಿ ಮಾಡುವುದಷ್ಟೆೆ ಅಲ್ಲಘಿ, ಪರಿಸರಕ್ಕೂ ಮಾರಕವಾಗಲಿದ್ದು ಈಗಲೇ ಜಿಲ್ಲೆೆಯ ಜನ ಕಲ್ಲಿದ್ದಲು ಘಟಕಗಳಿಂದ ನಾನಾ ಆರೋಗ್ಯ ಸಮಸ್ಯೆೆ ಎದುರಿಸುವಂತಾಗಿದೆ. ಪುನಃ ಅಣು ವಿದ್ಯುತ್ ಘಟಕ ಸ್ಥಾಾಪಿಸಿದರೆ ನಮ್ಮ ಪ್ರಾಾಣಗಳನ್ನೆೆ ಮುಡುಪಾಗಿಟ್ಟು ಸಮರ್ಪಣೆ ಮಾಡುವ ಅನಿವಾರ್ಯತೆಗೆ ಸಿಲುಕುತ್ತೇವೆ. ಅಲ್ಲದೆ, ಕೇಂದ್ರ ಸರ್ಕಾರ ಅರೋಗ್ಯಕ್ಕಾಾಗಿ ಏಮ್ಸ್ ಮಂಜೂರು ಮಾಡಲು ನಾಲ್ಕು ವರ್ಷದಿಂದ ಹೋರಾಟ ಮಾಡುತ್ತಿಿದ್ದೇವೆ. ಯಾವುದೆ ಬೇಡಿಕೆ ಇಲ್ಲದ ಜೀವ ಹಿಂಡುವ ಅಣು ವಿದ್ಯುತ್ ಸ್ಥಾಾವರ ನಿರ್ಮಿಸಲು ಸ್ಥಳ ಪರಿಶೀಲನೆಗೆ ಮುಂದಾಗಿದೆ ಎಂದು ವಾಗ್ದಾಾಳಿ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಜಿಲ್ಲಾಾ ಉಸ್ತುವಾರಿ ಸಚಿವರು ನೀಡಿದ ಭರವಸೆಯಂತೆ ಜಿಲ್ಲೆೆಯಲ್ಲಿ ಎಲ್ಲಿಯೂ ಅಣು ವಿದ್ಯುತ್ ಘಟಕ ಸ್ಥಾಾಪಿಸಲು ಅವಕಾಶ ನೀಡಲೇಬಾರದು ಎಂದು ಆಗ್ರಹಿಸಿ ಪ್ರತ್ಯೇಕ ಮನವಿಯನ್ನು ರಾಷ್ಟ್ರಪತಿ, ಪ್ರಧಾನಮಂತ್ರಿಿ ಹಾಗೂ ಮುಖ್ಯಮಂತ್ರಿಿಗೆ ಸಲ್ಲಿಸಲಾಯಿತು.
ಮನವಿ ಪತ್ರ ಪಡೆದ ಎಡಿಸಿ ಶಿವಾನಂದ ಅವರು ರಾಯಚೂರು ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾಾವರಕ್ಕೆೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಡಾ.ಬಸವರಾಜ್ ಕಳಸ, ಎಸ್.ಮಾರೆಪ್ಪ ವಕೀಲ, ಅಶೋಕ್ ಕುಮಾರ ಜೈನ್, ರೈತ ಮುಖಂಡರಾದ ಚಾಮರಸ ಮಾಲಿಪಾಟೀಲ್, ಪ್ರಭಾಕರ ಪಾಟೀಲ,ಅನಿತಾ ನವಲ್ಕಲ್, ಆರ್ಟಿಪಿಎಸ್ನ ಹೊರಗುತ್ತಿಿಗೆ ನೌಕರರ ಸಂಘದ ಅಧ್ಯಕ್ಷ ಅಯ್ಯಣ್ಣ ಮಹಾಮನೆ ,ವಕೀಲರ ಸಂಘದ ಉಪಾಧ್ಯಕ್ಷ ನಜೀರ ಅಹ್ಮದ್ ಶೇರ್ ಅಲಿ, ನಿವೇದಿತ , ಸಾಹಿತ್ಯ ಪರಿಷತ್ತಿಿನ ಡಾ. ಬಿ.ವಿಜಯರಾಜೇಂದ್ರ ಎಸ್ ಯು ಸಿ ಐ ನ ವೀರೇಶ್, ಚನ್ನಬಸವ ಜಾನೇಕಲ್, ಸಿಂಧನೂರಿನ ಚಂದ್ರಶೇಖರ ಗೊರೆಬಾಳ, ಕೊಪ್ಪಳದ ಡಿ.ಎಚ್.ಪೂಜಾರ, ಗ್ರೀೀನ್ ರಾಯಚೂರಿನ ರಾಜೇಂದ್ರ ಶಿವಾಳೆ, ಸಾಹಿತಿಗಳಾದ ಬಾಬು ಭಂಡಾರಿಗಲ್, ಆಂಜನೇಯ ಜಾಲಿಬೆಂಚಿ, ಸಿಪಿಐಎಂ ನ ಕೆ.ಜಿ ವೀರೇಶ, ಹೆಚ್. ಪದ್ಮಾಾ ಸೇರಿದಂತೆ, ದೇವಸೂಗೂರಿನ ಗ್ರಾಾಮಸ್ಥರು ಭಾಗವಹಿಸಿದ್ದರು.
ರಾಯಚೂರು ನಾಗರಿಕರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಅಣು ವಿದ್ಯುತ್ ಘಟಕ ಸ್ಥಾಪಿಸಲು ಅನುಮತಿಸದಂತೆ ಆಗ್ರಹ

