ಸುದ್ದಿಮೂಲ ವಾರ್ತೆ ಬೀದರ್, ಜ.29:
ಎಸ್ಐಆರ್ ಪ್ರಕ್ರಿಿಯೆ ವಿರೋಧಿಸಿ ೆ. 3ರಂದು ನಡೆಯಲಿರುವ ಸಮಾವೇಶ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಎಸ್ಐಆರ್ ವಿರೋಧಿ ಜನಾಂದೋಲನಾ ಸಮಿತಿ ವತಿಯಿಂದ ಕರಪತ್ರ ಬಿಡುಗಡೆ ಮಾಡಲಾಯಿತು.
ಎಸ್ಐಆರ್ ಪ್ರಕ್ರಿಿಯೆಯು ಸಂವಿಧಾನ, ಪ್ರಜಾಪ್ರಭುತ್ವ, ಆದಿವಾಸಿ ಬುಡಕಟ್ಟು, ಅಲೆಮಾರಿ, ದಲಿತರು, ಶೂದ್ರರು, ಅಲ್ಪಸಂಖ್ಯಾಾತರು ಹಾಗೂ ಹಿಂದುಳಿದ ವರ್ಗಗಳ ವಿರೋಧಿಯೆಂದು ಪ್ರಮುಖರು ಆರೋಪಿಸಿದರು.
3-2-2026 ರಂದು ಬೀದರ್ನಲ್ಲಿ ನಡೆಯಲಿರುವ ಚಿಂತನ-ಮಂಥನ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಮಾಹಿತಿ ಜನರಿಗೆ ತಲುಪಿಸುವ ಉದ್ದೇಶ ಈ ಕಾರ್ಯಕ್ರಮದ್ದಾಾಗಿದೆ ಎಂದು ಕರಪತ್ರ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದಾರೆ.
ಕರಪತ್ರಗಳನ್ನು ಬಸವ ಶ್ರೀ ಪೂಜ್ಯ ಸಿದ್ದರಾಮ ಶರಣರು ಬೆಲ್ದಾಾಳೆ, ಪೂಜ್ಯ ಚೆನ್ನಬಸವಾನಂದ ಸ್ವಾಾಮೀಜಿ, ಪೂಜ್ಯ ಸತ್ಯದೇವಿ ಮಾತಾಜಿ, ಪಾಸ್ಟರ್ ಕ್ಲೆೆರಿ ಡಿಸೋಜಾ, ಪಾಸ್ಟರ್ ವಿಜಯಕುಮಾರ ಡೇವಿಡ್, ಮೌಲಾನಾ ಮುಫ್ತಿಿ ಸಿರಾಜೋಧ್ದಿಿನ್ ನಿಜಾಮಿ ಹಾಗೂ ಮೌಲಾನಾ ಮೊನಿಸ್ ಕಿರ್ಮಾನಿ ಅವರು ಜಂಟಿಯಾಗಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ಐಆರ್
ವಿರೋಧಿ ಜನಾಂದೋಲನಾ ಸಮಿತಿಯ ಪ್ರಮುಖರಾದ ಶ್ರೀಕಾಂತ ಸ್ವಾಾಮಿ, ಮಾರುತಿ ಬೌದ್ದೆ, ಮನ್ನಾಾನ ಸೇಠ್, ಮಹೇಶ್ ಗೋರನಾಳಕರ್, ವಿನಯಕುಮಾರ ಮಾಳಗೆ, ಓಂಪ್ರಕಾಶ ರೊಟ್ಟೆೆ, ಡಾ. ಮಕ್ಸೂದ್ ಚಂದಾ, ತಲಹಾ ಹಾಸ್ಮಿಿ, ವಿಜಯಕುಮಾರ ಆರ್., ಮಂಜುಳಾ ಮೆತೆಸುಲಾ, ಡಾ. ದೇವಿದಾಸ ತುಮಕುಂಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದಲ್ಲದೆ ವಿವಿಧ ಸಂಘಟನೆಗಳ ಮುಖಂಡರಾದ ಡಾ. ಕಾಶಿನಾಥ ಚೆಲ್ವಾಾ, ವಿಠಲದಾಸ್ ಪ್ಯಾಾಗೆ, ಸಂಜಯ ಜಾಗಿರದಾರ, ಮೊಹ್ಮದ್ ಆಸ್ಿ, ಉಷಾಬಾಯಿ ಬನ್ಸುಡೆ, ಸಂದೀಪ್ ಮುಕಿಂದೆ, ಮುಕೇಶ್ ರಾಯ್, ವಿನೋದ ಗುಪ್ತಾಾ, ಪ್ರದೀಪ್ ನಾಟೆಕರ್, ಅಮರ ಅಲ್ಲಾಪೂರ, ನಂದಮ್ಮಾಾ ಕುಂದೆ, ಸೋನಮ್ಮ ಕಸ್ತೂರೆ ಸೇರಿದಂತೆ ಹಲವರು ಉಪಸ್ಥಿಿತರಿದ್ದರು.
ಎಸ್ಐಆರ್ ವಿರೋಧಿಸಿ ೆ. 3ಕ್ಕೆ ಸಮಾವೇಶ : ಕರಪತ್ರ ಬಿಡುಗಡೆ

