ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ಕಲ್ಯಾಾಣ ಕರ್ನಾಟಕ ಟೆನ್ನಿಿಸ್ ಅಸೋಶಿಯೇಶನ್ ಹಾಗೂ ಸಿಂಧನೂರಿನ ಎ್ಆರ್ಸಿಎಸ್ನ ಸಂಯುಕ್ತಾಾಶಯದಲ್ಲಿ ನಗರದ ಮಸ್ಕಿಿ ರಸ್ತೆೆಯ ಎ್ಆರ್ಸಿಎಸ್ನ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಕಲ್ಯಾಾಣ ಕರ್ನಾಟಕ ಟೆನ್ನಿಿಸ್ ಪಂದ್ಯಾಾವಳಿ ನಡೆಯಲಿವೆ ಎಂದು ಕಲ್ಯಾಾಣ ಕರ್ನಾಟಕ ಟೆನ್ನಿಿಸ್ ಅಸೋಶಿಯೇಶನ್ನ ಅಧ್ಯಕ್ಷ ಸಿ.ಟಿ.ಪಾಟೀಲ್ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು. ಸಿಂಧನೂರಿನಲ್ಲಿ ಟೆನ್ನಿಿಸ್ ಅಕಾಡಮಿ ಮಾಡುವ ಉದ್ದೇಶ ಹೊಂದಿದ್ದೇವೆ. ಇತ್ತೀಚೆಗೆ ನಿಧನರಾದ ಡಾ.ಹೆಚ್.ಎಸ್.ತೋಟದ್ ಅವರು ಸಿಂಧನೂರಿನಲ್ಲಿ ಟೆನ್ನಿಿಸ್ ಬೆಳೆಯಲು ಅಭೂತಪೂರ್ವ ಕೊಡುಗೆ ನೀಡಿದ್ದಾಾರೆ. ಹೀಗಾಗಿ ಅವರ ಸ್ಮರಣಾರ್ಥ ಪಂದ್ಯಾಾವಳಿ ಆಯೋಜಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಟೆನ್ನಿಿಸ್ ಟೂರ್ನಾಮೆಂಟ್ಗಳನ್ನು ಮಾಡಲಾಗುತ್ತಿಿದೆ. ಎರಡು ವರ್ಷಗಳಿಂದ ಉತ್ತರ ಕರ್ನಾಟಕ ಮಟ್ಟದ ಪಂದ್ಯಾಾವಳಿಗಳನ್ನು ಆಯೋಜಿಸಲಾಗಿದೆ. ನಮ್ಮ ಅಸೋಶಿಯೇಶನ್ನಲ್ಲಿ 400 ಜನ ಕ್ರೀೆಡಾಪಟುಗಳು ಸದಸ್ಯತ್ವ ಪಡೆದಿದ್ದಾಾರೆ. ಈ ಪಂದ್ಯಾಾವಳಿಯಲ್ಲಿ 250 ಜನ ಭಾಗವಹಿಸಲಿದ್ದಾಾರೆ. 35 ಪ್ಲಸ್, 45 ಪ್ಲಸ್, 55 ಪ್ಲಸ್, 65 ಪ್ಲಸ್ ಹಾಗೂ 70 ಪ್ಲಸ್ ವಯೋಮಾನದ ಸ್ಪರ್ಧೆಗಳು ನಡೆಯಲಿವೆ. 115 ತಂಡಗಳು ಈಗಾಗಲೇ ವಿವಿಧ ವಯೋಮಾನದಲ್ಲಿ ಸ್ಪರ್ಧಿಸಲು ನೋಂದಣಿ ಮಾಡಿಕೊಂಡಿವೆ. ಪಂದ್ಯಾಾವಳಿಗೆ ಕೆಎಸ್ಐಎಲ್ ಪ್ರಾಾಯೋಜಕತ್ವ ನೀಡಿದೆ. ಐದು ಮೈದಾನಗಳಿದ್ದು, ಶುಕ್ರವಾರ ಸಿಂಗಲ್ಸ್, ಶನಿವಾರ ಡಬಲ್ಸ್ ಹಾಗೂ ರವಿವಾರ ಅಂತಿಮ ಹಂತದ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಕ್ಲಬ್ನ ಉಪಾಧ್ಯಕ್ಷ ಬಾಬುಗೌಡ, ಎಸ್.ಶರಣೇಗೌಡ, ಆರ್.ಸಿ.ಪಾಟೀಲ್, ಬಸವರಾಜ ಸಿದ್ದಾಾಂತಿಮಠ, ಬಾಲಾಜಿ, ಕೇಶವರೆಡ್ಡಿಿ, ನಿಸ್ಸಾಾರ್ ಬೇಗ ಹಾಗೂ ಇತರರು ಇದ್ದರು.
ದಿ.ಡಾ.ಹೆಚ್.ಎಸ್.ತೋಟದ್ ಸ್ಮರಣಾರ್ಥ ಪಂದ್ಯಾವಳಿ ಆಯೋಜನೆ ಇಂದಿನಿಂದ ಮೂರು ದಿನ ಟೆನ್ನಿಸ್ ಪಂದ್ಯಾವಳಿ – ಪಾಟೀಲ್

