ಸುದ್ದಿಮೂಲ ವಾರ್ತೆ ಮಾನ್ವಿ, ಜ.29:
ೆ.5 ರಿಂದ 7 ರವರೆಗೆ ನಡೆಯುವ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಮುಖ್ಯ ವೇದಿಕೆಗೆ ವಾಸ್ತುಶಿಲ್ಪಿಿ ಅಮರ ಶಿಲ್ಪಿಿ ಜಕಣಾಚಾರಿ ಇವರ ಭಾವಚಿತ್ರ ಸಮೇತ ಹೆಸರನ್ನು ಇಡಬೇಕು ಎಂದು ಮಾನ್ವಿಿ ತಾಲೂಕಾ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾಾರ್ ಅವರಿಗೆ ಸಲ್ಲಿಸಿದರು.
ಕಲ್ಲುಗಳಲ್ಲಿ ಸುಂದರ ಕೆತ್ತನೆಯ ಮೂಲಕ ಬೇಲೂರು, ಹಳೆಬೀಡು ಇನ್ನಿಿತರ ದಕ್ಷಿಣ ಭಾರತದ ನಾನಾ ಭಾಗದಲ್ಲಿ ಸುಂದರ ಮಂದಿರಗಳಲ್ಲಿ ಹಾಗೂ ದೇಶದ ಶಿಲ್ಪ ಕಲೆಯನ್ನು ದೇಶ ವಿದೇಶಗಳಲ್ಲಿ ತೋರಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮರ ಶಿಲ್ಪಿಿ ಜಕಣಾಚಾರಿ ಇವರು ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯ ಮೂಲಕ ಹೆಸರುವಾಸಿಯಾಗಿದ್ದಾರೆ.
ಆದ್ದರಿಂದ ರಾಯಚೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ಜಕಣಾಚಾರಿ ಭಾವಚಿತ್ರಕ್ಕೆೆ ಗೌರವ ಸಲ್ಲಿಸಿ ಹಾಗೂ ಮುಖ್ಯ ವೇದಿಕೆಗೆ ಅಮರಶಿಲ್ಪಿಿ ಜಕಣಾಚಾರಿ ಎಂಬ ಹೆಸರಿಡಬೇಕೆಂದು ಪದಾಧಿಕಾರಿಗಳು ಒತ್ತಾಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ವೀರೇಶ ಆಚಾರಿ ವಿಶ್ವಕರ್ಮ, ಮುಖಂಡರು ಹಾಗೂ ಪದಾಧಿಕಾರಿಗಳಾದ ಮನೋಹರ ವಿಶ್ವಕರ್ಮ, ಶ್ರೀಶೈಲ ಮಾಸ್ಟರ್, ಸತೀಶ ಆಚಾರಿ, ಷಣ್ಮುಖ ಆಚಾರಿ ಚೀಕಲಪರ್ವಿ, ಗವಿಯಪ್ಪ ಆಚಾರಿ, ಜಿ.ಎಸ್.ಅಯ್ಯಣ್ಣ, ಮೌನೇಶ ಆಲ್ವಿಿ, ಪಾಂಡುರಂಗ, ತಿರುಮಲ, ವಿ.ಮೋಹನ್, ಶಿವಪ್ಪ, ಅಯ್ಯಪ್ಪ, ಮನೋಹರ, ನಾಗರಾಜ, ಬಸವರಾಜ, ಗದ್ವಾಾಲ್ ವೆಂಕಟೇಶ, ಸರ್ವಜ್ಞ ಮುಂತಾದವರು ಉಪಸ್ಥಿಿತರಿದ್ದರು.
ಜಿಲ್ಲಾ ಉತ್ಸವ ವೇದಿಕೆಗೆ ಜಕಣಾಚಾರಿ ಹೆಸರಿಡಲು ಮನವಿ

