ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
ಸಾರ್ವಜನಿಕರ ತೆರಿಗೆ ಹಣದಿಂದ ಕೇಂದ್ರ ಸರ್ಕಾರದ ವಿರುದ್ಧ ಇಲಾಖೆ ಈ ಜಾಹೀರಾತು ನೀಡಿದೆ. ಇದು ಸೇಡಿನ, ದ್ವೇಷದ ರಾಜಕಾರಣ. ತೆರಿಗೆ ಹಣದ ಲೂಟಿ’ ಎಂದು ಸದನದಲ್ಲಿ ಈ ವಿಷಯ ಪ್ರಸ್ತಾಾಪಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್ ವಾಗ್ದಾಾಳಿ ನಡೆಸಿದರು. ವಿರೋಧ ಪಕ್ಷದ ಇತರ ಸದಸ್ಯರೂ ದನಿಗೂಡಿಸಿದರು.
ಬಿಜೆಪಿ ಉಚ್ಚಾಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಾಳ್, ಯಾರಪ್ಪನ ದುಡ್ಡು ಇದು? ನೀವು ಕೇಂದ್ರ ಸರ್ಕಾರವನ್ನು ಟೀಕಿಸುವುದಾದರೆ ಕಾಂಗ್ರೆೆಸ್ ಪಕ್ಷದಿಂದ ಜಾಹೀರಾತು ಕೊಡಬೇಕಿತ್ತು’ ಎಂದು ಅಬ್ಬರಿಸಿದರು.
ಒಕ್ಕೂಟ ವ್ಯವಸ್ಥೆೆಯಲ್ಲಿ ಕೇಂದ್ರ ಸರ್ಕಾರದ ತೀರ್ಮಾನವನ್ನು ಪಕ್ಷ ಒಪ್ಪದಿದ್ದರೂ ಸರ್ಕಾರ ಒಪ್ಪಬೇಕು. ಕೇಂದ್ರ ಸರ್ಕಾರದ ಯೋಜನೆ ವಿರುದ್ಧ ಜಾಹೀರಾತು ನೀಡಿರುವ ಈ ಸರ್ಕಾರಕ್ಕೆೆ ನಾಚಿಕೆಯಾಗಬೇಕು’ ಎಂದು ಬಿಜೆಪಿಯ ವಿ. ಸುನಿಲ್ ಕುಮಾರ್ಟೀಕಿಸಿದರು. ದನಿಗೂಡಿಸಿದ ಯತ್ನಾಾಳ್, ನಕಲಿ ಗಾಂಧಿಗಳನ್ನು ಮೆಚ್ಚಿಿಸಲು ನರೇಗಾ ಹಿಡಿದುಕೊಂಡಿದ್ದಾರೆ’ ಎಂದು ಹರಿಹಾಯ್ದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ತೆರಿಗೆ ಭಯೋತ್ಪಾಾದನೆ’ಯ ಆರೋಪ ಮಾಡುತ್ತಿಿದೆ. ರಾಜ್ಯ-ಕೇಂದ್ರದ ಸಂಬಂಧ ಹಾಳು ಮಾಡುವ ಕೆಲಸವನ್ನು ಕಾಂಗ್ರೆೆಸ್ ಮಾಡುತ್ತಿಿದೆ. ಇದನ್ನು ಪ್ರತಿಭಟಿಸಿ ಸಭಾತ್ಯಾಾಗ ಮಾಡುತ್ತಿಿದ್ದೇವೆ’ ಎಂದು ಹೇಳಿ ಸದಸ್ಯರ ಜತೆ ಸದನದಿಂದ ಹೊರನಡೆದರು.
ವಿಧಾನಸಭೆ ಕಲಾಪ ನುಂಗಿದ ಜಾಹೀರಾತು

