ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆೆಗಳಲ್ಲಿ ದಿನದ 24 ಗಂಟೆಯೂ ವೈದ್ಯರ ಸೇವೆ ಒದಗಿಸಲು ಹೆಚ್ಚಿಿನ ವೈದ್ಯರನ್ನು ನೇಮಕ ಮಾಡುವ ಪ್ರಕ್ರಿಿಯೆ ನಡೆದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋೋತ್ತರ ಅವಧಿಯಲ್ಲಿ ಬಿಜೆಪಿಯ ಸಿಮೆಂಟ್ ಮಂಜು, ಜಗದೀಶ್ ಶಿವಯ್ಯ ಗುಡಗುಂಡಿ ಇವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ತಾಲ್ಲೂಕು ಆಸ್ಪತ್ರೆೆಗಳಲ್ಲಿ ಸಂಜೆ 4 ಗಂಟೆ ನಂತರ ಹೆರಿಗೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿಿಲ್ಲ. ಹಾಗಾಗಿ ರಾತ್ರಿಿ ವೇಳೆ ರೋಗಿಗಳಿಗೆ ವೈದ್ಯರ ಸೇವೆ ಸಿಗುತ್ತಿಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಾಲ್ಲೂಕು ಆಸ್ಪತ್ರೆೆಗಳಲ್ಲಿ ಇಬ್ಬರು ಸೀರೋಗ ತಜ್ಞರು, ಇಬ್ಬರು ಅರವಳಿಕೆ ತಜ್ಞರು ಹಾಗೂ ಇಬ್ಬರು ಮಕ್ಕಳ ತಜ್ಞರನ್ನು ನಿಯುಕ್ತಿಿ ಮಾಡಲಾಗುತ್ತದೆ. ಹಾಗಾಗಿ ಇನ್ನು ಮುಂದೆ ದಿನದ 24 ಗಂಟೆಗಳ ಕಾಲ ರೋಗಿಗಳಿಗೆ ವೈದ್ಯರ ಸೇವೆ ಲಭ್ಯವಾಗಲಿದೆ. ಜತೆಗೆ ರೋಗಿಗಳು ಖಾಸಗಿ ಆಸ್ಪತ್ರೆೆಗೆ ಹೋಗುವುದು ತಪ್ಪಲಿದೆ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಒದಗಿಸಲಾಗಿದೆ. ಕೊರತೆ ಇರುವ ಕಡೆ ಶೀಘ್ರವೇ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡುತ್ತೇವೆ ಎಂದು ಅವರು ಹೇಳಿದರು.
ಆಸ್ಪತ್ರೆೆಗಳಿಗೆ ಅಗತ್ಯವಾದ ಉಪಕರಣಗಳನ್ನು ನೀಡಲಾಗುತ್ತಿಿದೆ. ಉಪಕರಣಗಳ ದುರಸ್ತಿಿ, ಆಸ್ಪತ್ರೆೆ ದುರಸ್ತಿಿಗೂ ಅನುದಾವನ್ನು ಬಿಡುಗಡೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

