ಸುದ್ದಿಮೂಲ ವಾರ್ತೆ ಬೀದರ್, ಜ.29:
ಇತ್ತೀಚಿಗೆ ಲಿಂಗೈಕ್ಯರಾಗಿರುವ ಕನಕ ಗುರುಪೀಠದ ಕಲಬುರಗಿ ವಿಭಾಗದ ಶಾಖಾ ಮಠವಾದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಿಜ್ನಲ್ಲಿರುವ ಶ್ರೀಮಠದ ಪೂಜ್ಯ ಲಿಂ.ಸಿದ್ದರಾಮಾನಂದಪುರಿ ಸ್ವಾಾಮೀಜಿಗಳ ಪುಣ್ಯಾಾರಾಧನೆ ಕಾರ್ಯಕ್ರಮವು ಜನೆವರಿ 31ರಿಂದ ಮೂರು ದಿನಗಳ ಕಾಲ ಜರುಗಲಿದೆ ಎಂದು ಶ್ರೀಮಠದ ಪೂಜ್ಯ ಲಿಂಗ ಬೀರದೇವರು ಹೇಳಿದ್ದಾರೆ.
ಬುಧವಾರ ನಗರದ ಜಿಲ್ಲಾ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಟಿಿ ಉದ್ದೇಶಿಸಿ ಮಾತನಾಡಿರುವ ಅವರು, ಜನೆವರಿ 31ರಂದು ಅಲ್ಲಿಯ ಭಕ್ತಾಾದಿಗಳ ಸಮಕ್ಷಮದಲ್ಲಿ ಕಾರ್ಯಕ್ರಮ ಜರುಗುವುದು. ಮರುದಿನ ಅಂದರೆ ೆ.1ರಂದು ಭಾನುವಾರ ಬೆಳಿಗ್ಗೆೆ 10.30 ಗಂಟೆಗೆ ಕಾಗಿನೆಲೆ ಮಹಾಸಂಸ್ಥಾಾನದ ಎಲ್ಲ ವಿಭಾಗದ ಶಾಖಾ ಮಠಗಳ ಪೂಜ್ಯರು, ಎಲ್ಲ ಧರ್ಮದ ಮಠಾಧೀಶರು, ದೇಶದ ವಿವಿಧ ಕಡೆಗಳಿಂದ ಸಾಧು, ಸಂತರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ವಿಶೇಷವಾಗಿ ಮುಖ್ಯಮಂತ್ರಿಿ ಸಿದ್ಧರಾಮಯ್ಯನವರು ಸೇರಿದಂತೆ ನಾಡಿನ ಸಚಿವರು, ಶಾಸಕರು, ಸಮುದಾಯದ ಎಲ್ಲ ಪಕ್ಷದ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಕರ್ನಾಟಕ ಸರ್ಕಾರದ ಗ್ಯಾಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ ಮಾತನಾಡಿದರು. ಗೊಂಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೋಡೆ, ಪ್ರಮುಖರಾದ ಬಾಲಾಜಿ ಜಬಾಡೆ, ರಾಜಪ್ಪ ಹುಮನಾಬಾದ್ ಪತ್ರಿಿಕಾಗೋಷ್ಟಿಿಯಲ್ಲಿದ್ದರು.

