ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ಕರ್ನಾಟಕ ರಾಜ್ಯ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರಿ ಸಂಘಗಳ, ಬ್ಯಾಾಂಕುಗಳ ನೌಕರರಿಗೆ ಸರಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಿಸಲು ಸತತ ಪ್ರಯತ್ನ ಮಾಡುತ್ತಿಿದ್ದು, ನೌಕರರು ಸಂಘಟನೆಯಾದಾಗ ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರಿ ಸಂಘಗಳ, ಬ್ಯಾಾಂಕುಗಳ ನೌಕರರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಾಧ್ಯಕ್ಷ ಡಿ.ಹೆಸ್.ಬಡಗಿಗೌಡರ್ ಹೇಳಿದರು.
ನಗರದ ರಾಯಚೂರು ರಸ್ತೆೆಯ ರಾಯಲ್ ಂಕ್ಷನ್ ಹಾಲ್ನಲ್ಲಿ ಗುರುವಾರ ಕರ್ನಾಟಕ ರಾಜ್ಯ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರಿ ಸಂಘಗಳ, ಬ್ಯಾಾಂಕುಗಳ ನೌಕರರ ಕ್ಷೇಮಾಭಿವೃದ್ದಿ ಸಂಘದ ಕಲ್ಬುರ್ಗಿ ಪ್ರಾಾಂತ್ಯದ ಸಂಘಟನಾ ಸಭೆ ಹಾಗೂ ರಾಯಚೂರು ಜಿಲ್ಲಾಾ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರಿ ಸಂಘಗಳ ನೌಕರರ ಸೇವಾ ಭದ್ರತೆ, ವೇತನ, ನಿವೃತ್ತಿಿ ವೇತನಕ್ಕೆೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಹೋರಾಟ, ಪ್ರತಿಭಟನೆ, ಧರಣಿ ಮಾಡುವ ಮೂಲಕ ಸರಕಾರದ ಗಮನ ಸೆಳೆಯಲಾಗಿದೆ. ಸಹಕಾರಿ ಕಾಯ್ದೆೆಯಲ್ಲಿ ನೌಕರರ ಕಾಯ್ದೆೆ ಇರಲಿಲ್ಲ. ಬೆಳಗಾವಿಯಲ್ಲಿ ಬೃಹತ್ ಮುಷ್ಕರ ಮಾಡಿದಾಗ ಅಂದಿನ ಸಹಕಾರ ಸಚಿವರಾಗಿದ್ದ ಮಹಾದೇವ ಪ್ರಸಾದ ಸ್ಪಂದನೆ ನೀಡಿದ್ದರು. ಇತ್ತೀಚೆಗೆ ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಮಹಾಮಂಡಳದಿಂದ ಭೇಟಿ ಮಾಡಲಾಗಿತ್ತು. ನೌಕರರಿಗಾಗಿ ಪ್ರಾಾಧಿಕಾರ ರಚನೆಗೆ ಒತ್ತಡ ಹಾಕಲಾಗಿತ್ತು. ಅವರು ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದರು. ಆದರೆ ರಾಜಕೀಯ ಕ್ಷಿಪ್ರ ಬದಲಾವಣೆಗಳಾಗಿದ್ದು, ಪ್ರಸ್ತುತ ಸಹಕಾರ ಖಾತೆ ಮುಖ್ಯಮಂತ್ರಿಿಗಳ ಬಳಿಯಿದೆ. ನಾವು ಸರಕಾರದ ಮುಂದೆ ಶಕ್ತಿಿ ಪ್ರದರ್ಶನ ಮಾಡುವ ಅಗತ್ಯವಿದೆ. ಹೀಗಾಗಿ ಶೀಘ್ರವೇ ಬೆಂಗಳೂರಿನಲ್ಲಿ ಬೃಹತ್ ಮುಷ್ಕರ ಮಾಡುವ ಉದ್ದೇಶವಿದೆ. ಹೀಗಾಗಿ ಸಂಘಟನೆ ಅನಿವಾರ್ಯವಾಗಿದೆ. ಎಲ್ಲಾಾ ಸಹಕಾರಿ ಸಂಘಗಳು ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ರಾಜ್ಯ ವ್ಯವಸ್ಥಾಾಪಕ ನಿರ್ದೇಶಕ ಪ್ರಭಾಕರ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ವಿವಿಧೋದ್ದೇಶ ಕೃಷಿ ಪತ್ತಿಿನ ಸಹಕಾರ ಸಂಘಗಳಿದ್ದರೂ, ಮಹಾಮಂಡಳದಲ್ಲಿ ನೋಂದಣಿಯಾಗುತ್ತಿಿಲ್ಲ. ಪ್ರತಿ ಸಂಘಕ್ಕೆೆ 6500 ರೂ.ಗಳ ಶುಲ್ಕವಿದೆ. ಇದರಲ್ಲಿ 5000 ರೂ.ಗಳನ್ನು ನಿಮ್ಮ ಸಂಘದ ಹೆಸರಿನಲ್ಲಿ ಎ್ಡಿ ಇರುತ್ತದೆ. ಅದನ್ನು ಯಾವಾಗಬೇಕಾದರೂ ವಾಪಸ್ಸು ಪಡೆಯಬಹುದು. ಇಲ್ಲಿಯವರೆಗೆ ಕೇವಲ 1200 ಸಂಘಗಳ ನೊಂದಣಿಯಾಗಿವೆ. ಎಲ್ಲಾಾ ಕೃಷಿ ಪತ್ತಿಿನ ಸಹಕಾರ ಸಂಘಗಳು ನೋಂದಣಿಯಾದರೆ ಮಾತ್ರ ಕ್ಷೇಮಾಭಿವೃದ್ದಿ ಮಹಾಮಂಡಳಿಗೆ ಶಕ್ತಿಿ ಬರುತ್ತದೆ. ಹೋರಾಟಕ್ಕಿಿಳಿಯಲು ಶಕ್ತಿಿ ತುಂಬಿದಂತಾಗುತ್ತದೆ. ಈಗಾಗಲೇ ಎಲ್ಲಾಾ ಜಿಲ್ಲೆೆಗಳಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡಲಾಗುತ್ತಿಿದೆ ಎಂದರು.
ರಾಯಚೂರು ಜಿಲ್ಲಾಾ ಅಧ್ಯಕ್ಷ ಶಿವಪುತ್ರಪ್ಪಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾಮಂಡಳದ ನಿರ್ದೇಶಕರಾದ ಜನಾರ್ಧನ ವಟಗಾರ, ಸಂಗಯ್ಯ ಹೆಚ್.ಎಂ, ಕಲ್ಲನಗೌಡ, ನಿವೃತ್ತ ಸಿಇಓ ಬಸವರಾಜ ಗೊರೇಬಾಳ, ಕಲ್ಬುರ್ಗಿ ವಿಭಾಗೀಯ ಅಧ್ಯಕ್ಷ ಅಣ್ಣರಾವ್ ಬಿರದಾರ, ಶಂಕರಗೌಡ ರಾಯಚೂರು, ಸಿಂಧನೂರು ತಾಲೂಕಾಧ್ಯಕ್ಷ ದೊಡ್ಡಬಸವ ನಗನೂರು, ಪ್ರಧಾನ ಕಾರ್ಯದರ್ಶಿ ಶಿವಗ್ಯಾಾನಪ್ಪ ಹಾಗೂ ಇತರರು ಇದ್ದರು.
ಪ್ಯಾಕ್ಸ್ ನೌಕರರ ಕಲ್ಬುರ್ಗಿ ಪ್ರಾಾಂತ್ಯದ ಸಂಘಟನಾ ಸಭೆ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಂಘಟನೆಯಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ – ಡಿ.ಎಸ್.ಬಡಗಿಗೌಡರ್

