ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ನಗರದ 40ನೇ ಉಪಕಾಲುವೆ ಸೇವಾ ಮತ್ತು ಪರಿವೀಕ್ಷಣಾ ರಸ್ತೆೆಯಲ್ಲಿ ಕಟ್ಟಿಿಕಟ್ಟಿಿಕೊಂಡಿರುವ ಮನೆಗಳು, ಶೆಡ್ಗಳು, ಜೋಪಡಿಗಳಲ್ಲಿ ವಾಸಿಸುವ ನಿರಾಶ್ರಿಿತರಿಗೆ ಪರ್ಯಾಯ ವಸತಿ ಸೌಲಭ್ಯಗಳನ್ನು ಕಲ್ಪಿಿಸಿಕೊಡಬೇಕು ಎಂದು ಆಗ್ರಹಿಸಿ ಗುರುವಾರ ನಗರಸಭೆಗೆ ಮುತ್ತಿಿಗೆ ಹಾಕಿ ಪ್ರತಿಭಟನೆ ನಡೆಸಿದರು.
40ನೇ ಉಪಕಾಲುವೆಯ ಸೇವಾ ರಸ್ತೆೆಗಳ ಮೇಲೆ ಸುಮಾರು ವರ್ಷಗಳಿಂದ ಶೆಡ್ಗಳನ್ನು, ಜೋಪಡಿಗಳನ್ನು ಹಾಕಿಕೊಂಡು ಬದುಕುತ್ತಾಾ ಬಂದಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆೆ ಕಲ್ಪಿಿಸಿಕೊಡಬೇಕು ಎಂದು ಹಲವಾರು ಬಾರಿ ನಗರಸಭೆಗೆ ಮನವಿಪತ್ರ ನೀಡಿದ್ದೇವೆ. ಪ್ರತಿಭಟನೆ ಮಾಡಿದ್ದೇವೆ. ಇಲ್ಲಿಯವರೆಗೆ ಅಧಿಕಾರಿಗಳು, ಜನಪ್ರನಿಧಿಗಳು ಬರೀ ಭರವಸೆಗಳನ್ನು ನೀಡುತ್ತಾಾ ಬಂದಿದ್ದಾಾರೆ. ಕಾಲುವೆ ದುರಸ್ಥಿಿ ಕಾರ್ಯ ಮಾಡಲು ಈಗ ನೀರಾವರಿ ಇಲಾಖೆಯಿಂದ ಜಾಗ ತೆರವು ಮಾಡುವಂತೆ ನೋಟೀಸ್ ನೀಡಿದ್ದಾಾರೆ. ನಾವುಗಳು ಎಲ್ಲಿ ಹೋಗಬೇಕು. ಕೂಡಲೇ ಪರ್ಯಾಯ ವ್ಯವಸ್ಥೆೆ ಕಲ್ಪಿಿಸಿಕೊಡಬೇಕು. ಪರ್ಯಾಯ ವ್ಯವಸ್ಥೆೆ ಕಲ್ಪಿಿಸುವವರೆಗೂ ತೆರವು ಮಾಡಬಾರದು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಮಾತನಾಡಿ, ಪ್ರಸ್ತುತ ಕಾಲುವೆ ಸ್ಥಳದಲ್ಲಿ ವಾಸಿಸುವವರು ದಾಖಲೆ ಪತ್ರಗಳನ್ನು ನೀಡಿ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜೀನೂರು, ಶಿವಬಸನಗೌಡ, ಹೆಚ್.ಎನ್.ಬಡಿಗೇರ, ರಾಮಮೂರ್ತಿ ನಾಯ್ಕ್, ಶಮೀಡ ಅಲಿ, ಮಾನಪ್ಪ, ನಾರಾಯಣ ಬೆಳಗುರ್ಕಿ, ನಿರಾಶ್ರಿತರಾದ ಗಿರಿಯಪ್ಪ, ಅಮರಪ್ಪ, ಈಶಪ್ಪ ಜಾಧವ, ರವಿ ರಾಠೋಡ್, ನಟರಾಜ್, ಗಂಗಾಧರ್,ಚನ್ನಪ್ಪ, ರಮೇಶ್ ಮಡಿವಾಳ, ವೀರಭದಪ್ಪ ಮಲ್ಲಮ್ಮ, ಮಂಜುಳಾ, ಮಹಾನದಮ್ಮ, ರಾಜಾಬಿ, ಬಿಬಿ, ಲಕ್ಷ್ಮಿಿ, ರೇಣಕಮ್ಮ, ಶಿವಕುಮಾರ, ಮೈಬು, ಮೊಹಮ್ಮದ್ ಹುಸೇನ್, ಬಸವ ಡೆ್ರೈೈವರ್, ಮರಿಸ್ವಾಾಮಿ, ಕಾಶೀಮ್ ಪಟೇಲ್ ಹಾಗೂ ಇತರರು ಇದ್ದರು.
40ನೇ ಉಪಕಾಲುವೆ ಸೇವಾ ರಸ್ತೆಯಲ್ಲಿ ವಾಸಿಸುವ ನಿವಾಸಿಗಳು ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ನಗರಸಭೆಗೆ ಮುತ್ತಿಗೆ

