ಸುದ್ದಿಮೂಲ ವಾರ್ತೆ ಮಾನ್ವಿ, ಜ.29:
ಮಾನ್ವಿಿ ಪಟ್ಟಣದಲ್ಲಿ ೆ.1 ರಂದು ರವಿವಾರ ಸಾಯಂಕಾಲ 5 ಗಂಟೆಗೆ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾ ಯಾತ್ರೆೆ ಹಮ್ಮಿಿಕೊಳ್ಳಲಾಗಿದೆ ಎಂದು ಹಿಂದೂ ಸಮ್ಮೇಳನ ಸ್ವಾಾಗತ ಸಮಿತಿಯ ಅಧ್ಯಕ್ಷ ನೀಲಕಂಠ ಮೇದಾರ ತಿಳಿಸಿದರು.
ಗುರುವಾರ ಪತ್ರಿಿಕಾ ಭವನದಲ್ಲಿ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.
ಅಂದು ಮಧ್ಯಾಾಹ್ನ 3 ಗಂಟೆಗೆ ಎಪಿಎಂಸಿಯ ಶ್ರೀ ಉದ್ಬವ ಆಂಜನೇಯ ಸ್ವಾಾಮಿ ದೇವಸ್ಥಾಾನದಿಂದ ಟಿ.ಎ.ಪಿ.ಸಿ.ಎಂ.ಎಸ್. ಆವರಣದ ವರೆಗೆ ಬೃಹತ್ ಶೋಭಾಯಾತ್ರೆೆ ಹಮ್ಮಿಿಕೊಳ್ಳಲಾಗಿದೆ. ಸಂಜೆ ನಡೆಯುವ ಹಿಂದೂ ಸಮ್ಮೇಳನದ ದಿವ್ಯಸಾನಿಧ್ಯವನ್ನು ಕರೇಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಾಮಿಗಳು, ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು, ಚೀಕಲಪರ್ವಿ ಮಠದ ಶ್ರೀ ಸದಾಶಿವ ಮಹಾಸ್ವಾಾಮಿಗಳು, ನಿಲೋಗಲ್ ಮಠದ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಾಮಿಗಳು, ಕಲ್ಲೂರು ದತ್ತಾಾತ್ರೇೇಯ ಮಠದ
ಶ್ರೀ ಶಿವರಾಮಾನಂದ ಭಾರತಿ ಮಹಾಸ್ವಾಾಮಿಗಳು, ನವಲಕಲ್ ಮಠದ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಾಮಿಗಳು, ಅಡವಿ ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಾಮಿಗಳು, ಬಾಗಲವಾಡ ಶಿವಯ್ಯಸ್ವಾಾಮಿಗಳು ಭಾಗವಹಿಸುವರು.
ಕಾರ್ಯಕ್ರಮದ ಮುಖ್ಯ ವಕ್ತಾಾರರಾಗಿ ಸಿಂಧನೂರಿನ ಪ್ರಹ್ಲಾಾದ್ ಕಂದಗಲ್ ಸೇರಿದಂತೆ ತಾಲೂಕಿನ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಿಕಾಗೋಷ್ಠಿಿಯಲ್ಲಿ ಮುಖಂಡರಾದ ಹನುಮೇಶ ನಾಯಕ ಸಾದಪುರ, ಶರಣ ಬಸವ ನಾಯಕ ಜಾನೇಕಲ್, ಗುರುರಾಜ ನಾಗಲಾಪುರ, ಶರಣಬಸವ ಮುಂದಿನಮನೆ, ಈರಣ್ಣ ಅರೋಲಿ, ಯಲ್ಲಪ್ಪ ಮಡಿವಾಳ, ನಾಗರಾಜ ಚೀಕಲಪರ್ವಿ ಇದ್ದರು.

