ಸುದ್ದಿಮೂಲ ವಾರ್ತೆ ಮಸ್ಕಿ, ಜ.29:
ಬಿ.ಆರ್. ಅಂಬೇಡ್ಕರ್ ಅವರು ಉನ್ನತ ವ್ಯಾಾಸಂಗಕ್ಕೆೆ ಛತ್ರಪತಿ ಶಾಹು ಮಹಾರಾಜರಿಂದ ವಿದ್ಯಾಾರ್ಥಿ ವೇತನ ಪಡೆದು ಅಮೆರಿಕಕ್ಕೆೆ ಹೋಗುವ ಸಂದರ್ಭದಲ್ಲಿ ಅವರ ಪತ್ನಿಿ ರಮಾಬಾಯಿ ತುಂಬು ಗರ್ಭಿಣಿ. ಹೆರಿಗೆ ನಂತರದ ಕೆಲವೇ ದಿನಗಳಲ್ಲಿ ಆ ಮಗು ಮೃತಪಡುತ್ತದೆ. ಈ ವಿಷಯ ತಿಳಿಸಿದರೆ ಎಲ್ಲಿ ಗಂಡನ ಅಧ್ಯಯನಕ್ಕೆೆ ತೊಂದರೆಯಾಗುತ್ತದೆಯೊ ಎನ್ನುವ ಆತಂಕದಿಂದ ವಿಷಯ ತಿಳಿಸದೆ ಮಗುವಿನ ಅಂತ್ಯ ಸಂಸ್ಕಾಾರ ಮಾಡುತ್ತಾಾಳೆ.
ಮಸ್ಕಿಿ ಪಟ್ಟಣದ ಭ್ರಮರಾಂಬ ದೇವಸ್ಥಾಾನದ ಸಭಾ ಭವನದಲ್ಲಿ ನಡೆದ ‘ರಮಾಬಾಯಿ ಅಂಬೇಡ್ಕರ್’ ನಾಟಕದಲ್ಲಿ ಕಂಡು ಬಂದ ದೃಶ್ಯ. ತಾಯಿಯ ಸಂಕಟ, ವೇದನೆ, ಆಕ್ರಂದನ ನಾಟಕ ನೋಡಲು ಸೇರಿದ್ದ ಜನರ ಕಣ್ಣುಗಳನ್ನೂ ತೇವ ಮಾಡಿದ್ದವು. ಕೊನೆಯ ತನಕವೂ ನಾಟಕ ಜನರ ಮೆಚ್ಚುಗೆ ಗಳಿಸಿತು.
ಚಾಲನೆ : ನಾಟಕ ಪ್ರದರ್ಶನಕ್ಕೆೆ ಚಾಲನೆ ನೀಡಿದ ಮಸ್ಕಿಿ ಯೋಜನ ಪ್ರಾಾಧಿಕಾರದ ಅಧ್ಯಕ್ಷ ಸಿದ್ದನಗೌಡ ತುರುವಿಹಾಳ ಮಾತನಾಡಿ ದೇಶದ ಆಡಳಿತದ ವ್ಯವಸ್ಥೆೆ ಯಾವ ದಿಕ್ಕಿಿನಲ್ಲಿ ಇರಬೇಕು, ಬಹುತ್ವ ಭಾರತದಲ್ಲಿ ಎಲ್ಲಾ ವರ್ಗದ ಜನರಿಗೆ ನ್ಯಾಾಯ ಸಿಗಬೇಕು ಎಂದು ಯೋಚಿಸಿ ಅಂಬೇಡ್ಕರ್ ಅವರು ಶ್ರೇೇಷ್ಠವಾದ ಸಂವಿಧಾನ ಕೊಟ್ಟಿಿದ್ದಾರೆ.ಅವರು ಕೊಟ್ಟ ಸಂವಿಧಾನದಿಂದಲೇ ಇಂತಹ ಈ ಗೌರವ, ಸ್ಥಾಾನಮಾನ ಸಿಕ್ಕಿಿದೆ ಎಂದು ಹೇಳಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟಿಲ್ ಮಾತನಾಡಿ, ಡಾ.ಬಾಬಸಾಹೇಬ್ ಅಂಬೇಡ್ಕರ್ ವಿಶ್ವವಿಖ್ಯಾಾತ ಮಹಾಜ್ಞಾನಿಯಾಗಿದ್ದರು. ಅವರಿಗೆ ಓದುವಿನ ಹಸಿವು ಅಪಾರವಾಗಿತ್ತು. ಕುಟುಂಬಕ್ಕಿಿಂತ ಸಮಾಜದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸುವುದಕ್ಕಾಾಗಿ ನಿರಂತರ ಹೋರಾಟದಲ್ಲಿ ತೊಡಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿಿದ್ದರು ಎಂದರು.
ತಹಸೀಲ್ದಾಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ, ಸಿ.ದಾನಪ್ಪ, ದೊಡ್ಡಪ್ಪ ಮುರಾರಿ, ಡಾ.ಶಿವಶರಣಪ್ಪ ಇಡ್ಲಿಿ, ರಾಜರಾಜೇಶ್ವರಿ ಹಿರೇಮಠ, ನಾಗರತ್ನಾಾ ಕಟ್ಟಿಿಮನಿ, ಎಚ್.ಬಿ.ಮುರಾರಿ, ಮಹಾಂತೇಶ ಮಸ್ಕಿಿ ಸುರೇಶ ಹರಸುರು, ದೊಡ್ಡ ಕರಿಯಪ್ಪ ಇತರರಿದ್ದರು.
ಮಸ್ಕಿ : ಮನಸೂರೆಗೊಂಡ ರಮಾಬಾಯಿ ಅಂಬೇಡ್ಕರ್ ನಾಟಕ

