ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆೆಯನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾಾನಗೊಳಿಸುವ ನಿಟ್ಟಿಿನಲ್ಲಿ ಜಿಲ್ಲೆಯ ಪ್ರತಿ ಉಪ ನೋಂದಣಿ ಕಚೇರಿಯಲ್ಲಿ ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆೆಯ ಕುರಿತು ತರಬೇತಿಯನ್ನು ಹಮಿಕೊಳ್ಳಲಾಗಿದ್ದು, ತರಬೇತಿಯ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.
ತರಬೇತಿಯಲ್ಲಿ ಸಂಬಂಧಪಟ್ಟ ದಸ್ತಾಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ರಾಯಚೂರು ಒನ್, ಗ್ರಾಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರ ವರ್ಗದವರಿಗೆ ತರಬೇತಿಯನ್ನು ಜಿಲ್ಲೆಯ ಉಪನೋಂದಣಾಧಿಕಾರಿಗಳ ಕಚೇರಿಗಳಾದ ಲಿಂಗಸೂಗೂರಿನಲ್ಲಿ ಜ. 30, ಸಿರವಾರದಲ್ಲಿ ಹಾಗೂ ರಾಯಚೂರಿನಲ್ಲಿ ಜ. 31ರಂದು ತರಬೇತಿ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

