ಸುದ್ದಿಮೂಲ ವಾರ್ತೆ ಅರಕೇರಾ, ಜ.29:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಾಶ್ರಯದಲ್ಲಿ ೆಬ್ರವರಿ 5, 6 ರಿಂದ 7ನೇ ತಾರೀಖಿನ ವರೆಗೆ ಮೂರು ದಿನಗಳ ಕಾಲ ಎಡೆದೊರೆ ನಾಡು ರಾಯಚೂರು ಉತ್ಸವ ನಡೆಯಲಿದೆ. ಇದರ ಅಂಗವಾಗಿ ಉತ್ಸವದ ಜ್ಯೋೋತಿ ರಥ ಯಾತ್ರೆೆಯು ದಿನಾಂಕ 1 ರಂದು ಅರಕೇರಾ ತಾಲ್ಲೂಕಿಗೆ ಸಾಯಂಕಾಲ 4.30ಕ್ಕೆೆ ಆಗಮಿಸಲಿದೆ ಎಂದು ತಹಶೀಲ್ದಾಾರ ಅಮರೇಶ ಬಿರಾದರ ತಿಳಿಸಿದರು.
ಇಲ್ಲಿನ ತಹಸೀಲ್ದಾಾರ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಿಯ ಕುರಿತು ಮಾತನಾಡಿದ ಅವರು, ಸುಮಾರು 20 ವರ್ಷಗಳ ಬಳಿಕ ರಾಯಚೂರಿನಲ್ಲಿ ಜಿಲ್ಲಾ ಉತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗುತ್ತಿಿದೆ. ಸಕಲ ಸಿದ್ಧತೆಗಳು ಸಹ ನಡೆದಿವೆ. ಈ ಹಿನ್ನೆೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕಿಗೆ ಜ್ಯೋೋತಿ ರಥ ಯಾತ್ರೆೆ ಪ್ರವಾಸ ಮಾಡಲಿದೆ.
ಅರಕೇರಾ ಪಟ್ಟಣಕ್ಕೆೆ ಆಗಮಿಸುವ ರಥ ಯಾತ್ರೆೆಗೆ ತಾಲ್ಲೂಕಿನ ಎಲಾ ್ಲಚುನಾಯಿತ ಪ್ರತಿನಿಧಿಗಳು, ರಾಜಕೀಯ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು, ಸಂಘ-ಸಂಸ್ಥೆೆಗಳ ಮುಖ್ಯಸ್ಥರು, ಎಲ್ಲ ಸಂಘಟನೆಗಳ ಪದಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ – ಕಾಲೇಜುಗಳ ವಿದ್ಯಾಾರ್ಥಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸುವಂತೆ ವಿನಂತಿಸಿದ್ದಾರೆ.
ಇಲ್ಲಿನ ಭಾಗಮ್ಮ ದೇವಿ ದೇವಸ್ಥಾಾನದ ಮಹಾದ್ವಾಾರದಿಂದ ಮಹಾತ್ಮ ಗಾಂಧಿ ಸರ್ಕಲ್ ಮಾರ್ಗದ ಪ್ರಮುಖ ರಸ್ತೆೆಯ ಮೂಲಕ ವಾಲ್ಮೀಕಿ ವೃತ್ತದ ವರೆಗೆ ನಡೆಯುವ ರಥ ಯಾತ್ರೆೆ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊೊಂಡು ಯಶಸ್ವಿಿಗೊಳಿಸೋಣ ಎಂದರು.
ೆ. 1 ರಂದು ಅರಕೇರಾ ತಾಲ್ಲೂಕಿಗೆ ಜ್ಯೋತಿ ರಥ ಯಾತ್ರೆ

