ಸುದ್ದಿಮೂಲ ವಾರ್ತೆ ರಾಯಚೂರು, ಜ.29:
ಇತ್ತೀಚಿಗೆ ಯಾದಗಿರಿ ಜಿಲ್ಲೆಯಿಂದ ವರ್ಗಾವಣೆಗೊಂಡು ರಾಯಚೂರು ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಹಂಪಣ್ಣ ಸಜ್ಜನ್ ಅವರನ್ನು ರಾಯಚೂರು ಗಾಣಿಗ ಸಮಾಜದ ಮುಖಂಡರು ಸನ್ಮಾಾನಿಸಿ ಗೌರವಿಸಿದರು.
ಆಯುಕ್ತ ನಿವಾಸದಲ್ಲಿ ಸನ್ಮಾಾನಿಸಿದ ಜಿಲ್ಲಾ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಚನ್ನಪ್ಪ ಸಜ್ಜನ್ ಮಾತನಾಡಿ, ಈಗಾಗಲೇ ನಮ್ಮ ರಾಯಚೂರು ತಹಶೀಲ್ದಾಾರ ಆಗಿ ಸೇವೆ ಸಲ್ಲಿಸಿ ಯಾವುದೇ ಕಪ್ಪುು ಚುಕ್ಕೆೆಯಿಲ್ಲದೆ ಉತ್ತಮ ಸೇವೆ ಮಾಡಿದ್ದು ಬಡ್ತಿಿ ಹೊಂದಿ ಪುನಃ ನಮ್ಮ ರಾಯಚೂರಿಗೆ ಆಗಮಿಸಿದ್ದು ಸಂತೋಷವಾಗಿದೆ ಮುಂದಿನ ಸೇವಾ ದಿನಗಳು ಸುಖಮಯವಾಗಿರಲಿ ಎಂದು ಹಾರೈಸಿದರು.
ರಾಯಚೂರು ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಬಸಪ್ಪ ಹಳ್ಳಿಿ ಮಾತನಾಡಿ, ಡಾ. ಹಂಪಣ್ಣ ಸಜ್ಜನವರು ಒಬ್ಬ ಒಳ್ಳೆೆಯ ದಕ್ಷ ಅಧಿಕಾರಿಯಾಗಿ ನಮ್ಮೆೆಲ್ಲರಿಗೂ ಮಾರ್ಗದರ್ಶಕರಾಗಿ ಎಲ್ಲರಿಗೂ ಮಾದರಿಯಾಗಿರುವುದು ನಮಗೆ ಅಭಿಮಾನವಿದೆ ಎಂದರು.
ಸನ್ಮಾಾನವನ್ನು ಸ್ವೀಕರಿಸಿ ಮಾತನಾಡಿದ ಡಾ. ಹಂಪಣ್ಣ ಸಜ್ಜನ್ ಅಭಿಮಾನ, ಪ್ರೀೀತಿ, ವಿಶ್ವಾಾಸಕ್ಕೆೆ ಕೃತಜ್ಞತೆ ಸಲ್ಲಿಸಿದರು. ಸಮಾಜದ ಜನರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಮಾದರಿಯ ವ್ಯಕ್ತಿಿಗಳಾಗಲು ಮಕ್ಕಳಿಗೆ ಉನ್ನತ ಹುದ್ದೆಗಳಿಗೆ ಕಳುಹಿಸಿ ಅವರಿಗೆ ಬೇಕಾಗುವ ಮಾರ್ಗದರ್ಶನ ಮಾಡಲು ಸಿದ್ಧನಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಿವಿಧ ತಾಲೂಕಿನ ಅಧ್ಯಕ್ಷರಾದ ಅಚ್ಚ ವಿರುಪಾಕ್ಷಿ ಸಿರವಾರ, ಬಸವರಾಜಪ್ಪ ಸಜ್ಜನ್ ಮಾನ್ವಿಿಘಿ, ಪ್ರಭುಲಿಂಗಪ್ಪ ಸಜ್ಜನ್ ದೇವಸೂಗುರು, ಹಿರಿಯರಾದ ಶಂಕ್ರಪ್ಪ ಸಜ್ಜನ್, ಉಮಾಶಂಕರ ವಕೀಲ್, ಶಶಿರಾಜ್ ಮಸ್ಕಿಿ, ರಾವುತರಾವ್ ಬರೂರ, ರವಿ ಗೋಡಿಹಾಳ, ಶಿವರಾಜಪ್ಪ ಯಾಪಲದಿನ್ನಿಿ, ಪ್ರಭಾಕರ ಸಜ್ಜನ್, ಮಲ್ಲಪ್ಪ ವಡ್ಲೂರು, ಬಸವರಾಜಪ್ಪ ಅತ್ತನೂರು, ರಮೇಶ್ ಗಿಲ್ಲೆಸೂಗುರು, ಚಂದ್ರು ಯರಗೇರಾ ಸೇರಿದಂತೆ ಸಮಾಜದ ಮುಖಂಡರಿದ್ದರು.
ಗಾಣಿಗ ಸಮಾಜದಿಂದ ಎಸಿ ಹಂಪಣ್ಣ ಸಜ್ಜನಗೆ ಸನ್ಮಾನ

