ಸುದ್ದಿಮೂಲ ವಾರ್ತೆ ರಾಯಚೂರು, ಜ.31:
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಜ್ಯೋೋತಿ ರಥಯಾತ್ರೆೆಗೆ ೆ.1ರಂದು ಬೆಳಗ್ಗೆೆ 10 ಗಂಟೆಗೆ ನಗರದ ಐತಿಹಾಸಿಕ ಕರ್ನಾಟಕ ಸಂಘದ ಆವರಣದಿಂದ ಚಾಲನೆ ಸಿಗಲಿದೆ.
ಜಿಲ್ಲೆಯ ಪ್ರತಿಯೊಂದು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಾಯವಾಗಿ ಜ್ಯೋೋತಿ ರಥಯಾತ್ರೆೆಯಲ್ಲಿ ಭಾಗಿಯಾಗಲು ಆಯಾ ಕಚೇರಿಯ ಮೇಲಾಧಿಕಾರಿಗಳು ಕಚೇರಿ ಆದೇಶ ಹೊರಡಿಸಿ ತಮ್ಮ ತಮ್ಮ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರಿಂದಾಗಿ ಬೇರೆ ಬೇರೆ ಇಲಾಖೆಗಳ ಕಚೇರಿಗಳಲ್ಲಿ ಕಚೇರಿ ಆದೇಶ ಜಾರಿ ಮಾಡಿ ಕ್ರಮವಹಿಸಲಾಗಿದೆ.
ಮಹಾನಗರ ಪಾಲಿಕೆಯ ಕರವಸೂಲಿಗಾರರು, ಎಸ್ಎಚ್ಜಿ ಕರವಸೂಲಿಗಾರರು, ತಮ್ಮ ಪ್ಯಾಾಕೇಜನಿಂದ ತಲಾ 20 ಜನ ಪೌರ ಕಾರ್ಮಿಕರನ್ನು ಕರೆ ತರಲು ಮತ್ತು ಎಲ್ಲ ಸಮುದಾಯ ಸಂಘಟಕರನ್ನು ಕರೆ ತರಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಕಚೇರಿ ಆದೇಶದ ಮೂಲಕ ಪಾಲಿಕೆಯ ಕಂದಾಯ ಅಧಿಕಾರಿಗಳು, ಕಚೇರಿ ವ್ಯವಸ್ಥಾಾಪಕರು, ಹಿರಿಯ ಕಿರಿಯ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಎಲ್ಲಾ ಮುಖ್ಯ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಾಲಯದ ಸಿಬ್ಬಂದಿಯೊಂದಿಗೆ ತಪ್ಪದೆ ಬೆಳಿಗ್ಗೆೆ 10 ಗಂಟೆಗೆ ಹಾಜರಿರಬೇಕು ಹಾಗೂ ಕಾರ್ಯಕ್ರಮದ ನಂತರ ಹಾಜರಾತಿಯನ್ನು ಕಡ್ಡಾಾಯವಾಗಿ ಕಾರ್ಯಾಲಯಕ್ಕೆೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

