ಸುದ್ದಿಮೂಲ ವಾರ್ತೆ ಸಿರವಾರ, ಜ.31:
ಸ್ಥಳೀಯ ತಾಲೂಕು ಪಂಚಾಯತ ಕಚೇರಿಗೆ ಶನಿವಾರ ಬೆಳಿಗ್ಗೆೆ 10:45ಕ್ಕೆೆ ರಾಯಚೂರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ದಿಢೀರ್ ಭೇಟಿ ನೀಡಿದರು.
ಇದರಿಂದ ಅಲ್ಲಿದ್ದ ಸಿಬ್ಬಂದಿ ವರ್ಗ ಕಕ್ಕಾಾಬಿಕ್ಕಿಿಯಾದರು, ಗೈರಾದ ಸಿಬ್ಬಂದಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.
ಕಚೇರಿಗೆ ತಡವಾಗಿ ಬಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಶಿಧರಸ್ವಾಾಮಿಗೆ ಜಿ.ಪಂ. ಸಿಇಓ ತರಾಟೆಗೆ ತೆಗೆದುಕೊಂಡರು, ಕಚೇರಿಯ ಸಮಸ್ಯೆೆ, ದಾಖಲೆಗಳನ್ನು ಕೇಳಿದ ನಂತರ ಇಓ ಶಶಿಧರಸ್ವಾಾಮಿ ಕಕ್ಕಾಾಬಿಕ್ಕಿಿಯಾಗಿ ತಡಕಾಡಿದರು. ಆರೋಗ್ಯದಲ್ಲಿ ಏರುಪೇರು, ಎದೆಯ ನೋವು ಕಾಣಿಸಿಕೊಂಡು, ಅಸ್ತವ್ಯಸ್ತರಾದರು, ಕೂಡಲೇ ಅರನ್ನು ಸ್ಪತ್ರೆೆಗೆ ಕಳಿಸಿದ ಘಟನೆ ಜರುಗಿತು.
ನಂತರ ಅಲ್ಲಿದ್ದ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳು, ಕುಡಿಯುವ ನೀರು, ಸಿಬ್ಬಂದಿ ಕೊರತೆಯ ಬಗ್ಗೆೆ ಸಿಇಓ ಅವರಿಗೆ ತಿಳಿಸಿದರು. ಬಾಡಿಗೆ ಕಟ್ಟಡವಿದ್ದು, ಸ್ವಂತ ಕಟ್ಟಡಕ್ಕೆೆ ನಿವೇಶನ ಕೆಲವೆಡೆ ವೀಕ್ಷಣೆ ಮಾಡಲಾಗಿದೆ. ಕಟ್ಟಡ, ಸಿಬ್ಬಂದಿ ವರ್ಗದ ಸಮಸ್ಯೆೆ ಇದೆ ಎಲ್ಲವೂ ಹಂತ ಹಂತವಾಗಿ ಸರಿಯಾಗಲಿದೆ ಎಂದು ತಿಳಿಸಿದರು. ಕುಡಿಯುವ ನೀರು, ಉದ್ಯೋೋಗ ಖಾತ್ರಿಿ ಯೋಜನೆಯ ಕಾಮಗಾರಿ ವೀಕ್ಷಣೆ ಮಾಡಲು ತೆರಳಿದರು.
ಪ್ರಜ್ಞೆ ತಪ್ಪಿದ ಇಓ ಶಶಿಧರಸ್ವಾಮಿ ಸಿರವಾರ ತಾ.ಪಂ.ಕಚೇರಿಗೆ ಸಿಇಓ ದಿಢೀರ್ ಭೇಟಿ

