ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.31:
ಪುರಸಭೆ ವ್ಯಾಾಪ್ತಿಿಯ ತಾಲೂಕಿನ ಕರಡಕಲ್ಲ ಶ್ರೀ ಉಮಾಮಹೇಶ್ವರಿ ಇಂಟರ್ನ್ಯಾಾಷನಲ್ ಶಾಲೆಯಲ್ಲಿ ಭಾನುವಾರ ಜ್ಯೂನಿಯರ್ ಜೀನಿಯಸ್ ಅವಾರ್ಡ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆೆಯ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ ತಿಳಿಸಿದ್ದಾಾರೆ.
ಜ್ಯೂನಿಯರ್ ಜೀನಿಯಸ್ ಅವಾರ್ಡ್ ಕಾರ್ಯಕ್ರಮವು ರೈತಾಪಿ ವರ್ಗದ, ಬಡ ಪ್ರತಿಭಾನ್ವಿಿತ ವಿದ್ಯಾಾರ್ಥಿಗಳನ್ನು ಗುರುತಿಸಿ ಅತಿಹೆಚ್ಚು ಅಂಕ ಪಡೆದವರಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ. ಪ್ರಸಕ್ತ ಸಾಲಿನ 5ನೇ 7ನೇ ತರಗತಿ ಓದುತ್ತಿಿರುವ ವಿದ್ಯಾಾರ್ಥಿಗಳು ಭಾಗವಹಿಸಬಹುದು. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ಐದು ವಿದ್ಯಾಾರ್ಥಿಗಳಿಗೆ ನಗದು ಬಹುಮಾನ ಕೊಡಲಾಗುವುದು. ಹಾಗೂ ಪ್ರಥಮ ಮತ್ತು ದ್ವೀತಿಯ ವಿದ್ಯಾಾರ್ಥಿಗಳಿಗೆ ನಮ್ಮ ಸಂಸ್ಥೆೆಯ ಆಂಗ್ಲಮಾದ್ಯಮಕ್ಕೆೆ ಉಚಿತ ಶಿಕ್ಷಣ ಕಲ್ಪಿಿಸಲಾಗುವುದು.
ಅತಿ ಹೆಚ್ಚು ಅಂಕಪಡೆದವರಿಗೆ ಪ್ರಥಮ ರೂ. 10,000/-, ದ್ವಿಿತೀಯ ರೂ. 8,000/-, ತೃತೀಯ ರೂ. 5,000/- ಚತುರ್ಥ ರೂ. 3,000/- ಮತ್ತು ಐದನೇ ಬಹುಮಾನ 1,500/- ರೂ.ಗಳನ್ನು ನೀಡಿ ಗೌರವಿಸಲಾಗುವುದು. ವಿದ್ಯಾಾರ್ಥಿಗಳಿಗೆ ಲಿಂಗಸುಗೂರು ಬಸ್ ನಿಲ್ದಾಾಣದಿಂದ ನಮ್ಮ ಶಾಲೆಗೆ ಶಾಲಾ ವಾಹನ ಸೌಲಭ್ಯ ಕೂಡ ಕಲ್ಪಿಿಸಲಾಗಿದೆ. ಆಸಕ್ತರು ಈ ಕೆಳಗಿನ ಮೊ.ನಂ. 9880353818, 9880340882, 7204652285 ಗೆ ಸಂಪರ್ಕಿಸಲು ಕೋರಲಾಗಿದೆ.

