ಸುದ್ದಿಮೂಲ ವಾರ್ತೆ ರಾಯಚೂರು, ಜ.31:
ಜಿಲ್ಲಾಾ ಕಾಂಗ್ರೆೆಸ್ ಕಾರ್ಯಾಲಯದಲ್ಲಿ ಮಹಾತ್ಮಗಾಂಧಿಜಿಯವರ ಪುಣ್ಯತಿಥಿ ಅಂಗವಾಗಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು.
ಇಂದು ಬೆಳಿಗ್ಗೆೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಗಾಂಧೀಜಿಯವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ ಮಾತನಾಡಿ, ನಮ್ಮ ಪಕ್ಷ ಕೇವಲ ರಾಜಕೀಯ ಪಕ್ಷವಾಗಿರದೆ, ಆಂದೋಲನವಾಗಿ ಕೆಲಸ ಮಾಡಿ ಈ ದೇಶಕ್ಕೆೆ ಮಹಾತ್ಮಗಾಂಧಿಜಿಯವರ ನೇತೃತ್ವದಲ್ಲಿ ಸ್ವಾಾತಂತ್ರ್ಯ ಪಡೆಯಲು ಯಶಸ್ವಿಿಯಾಯಿತು. ಇಂಥಹ ಐತಿಹಾಸಿಕ ಹಿನ್ನೆೆಲೆಯುಳ್ಳ ಕಾಂಗ್ರೆೆಸ್ನಲ್ಲಿ ನಾವು ಸದಸ್ಯರಾಗಿ ಸಕ್ರಿಿಯವಾಗಿರುವುದೆ ಹೆಮ್ಮೆೆಯ ವಿಷಯವೆಂದು ತಿಳಿಸಿದರು.
ಗಾಂಧೀಜಿಯವರ ಸರಳತೆ, ಸೌಜನ್ಯತೆ ಹಾಗೂ ಅವರ ಅಹಿಂಸಾತ್ಮಕ ಗುಣಗಳೇ ಅವರನ್ನು ಮಹಾತ್ಮ ಎಂದು ಕರೆಯುವಂತೆ ಮಾಡಿದವೆಂದು ತಿಳಿಸಿದರು. ಹಿಂದಿಗಿಂತಲೂ ಇಂದು ಗಾಂಧೀಜಿಯವರ ತತ್ವ, ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸುವ ಮೂಲಕ ಅವರನ್ನು ಸಮಾಜಮುಖಿ ವಾಹಿನಿಗೆ ತರಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಖಜಾಂಚಿ ಜಯವಂತರಾವ ಪತಂಗೆ, ಕೆಪಿಸಿಸಿ ಎಸ್.ಟಿ. ಘಟಕದ ಉಪಾಧ್ಯಕ್ಷ ತಾಯಣ್ಣ ನಾಯಕ, ಮುಖಂಡರಾದ ಮಹ್ಮದ್ ಶಾಲಂ, ಎನ್.ಶ್ರೀನಿವಾಸರೆಡ್ಡಿಿ, ಆಂಜನೇಯ ಕುರುಬದೊಡ್ಡಿಿ, ಶ್ರೀದೇವಿ ನಾಯಕ, ಯುಸ್ೂ ಖಾನ್, ಶಶಿಕಲಾ ಭೀಮರಾಯ, ಮಾಲಾ ಭಜಂತ್ರಿಿ, ನಾಗರತ್ನ, ಬಿ.ಉಮಾ, ಶಾಬಾನ, ಈರಮ್ಮ, ಲಕ್ಷ್ಮೀ ಸೇರಿ ಹಲವರಿದ್ದರು.
ಗಾಂಧೀಜಿ ಬದುಕು ಇಂದಿಗೂ ಪ್ರಸ್ತುತ – ಕೆ.ಶಾಂತಪ್ಪ

